ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ: ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಮಹಿಳಾ ಕಾಂಗ್ರೆಸ್‌!

By Kannadaprabha News  |  First Published Aug 5, 2023, 4:42 PM IST

ಮೈಸೂರಿನ ಚಾಮುಂಡಿಬೆಟ್ಟದ ಮೆಟ್ಟಿಲು ಹತ್ತುವ ಮೂಲಕ ಮಹಿಳಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಹರಕೆ ತೀರಿಸಿದರು.


ಮೈಸೂರು (ಆ.05): ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲೆಂದು ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌, ಅದರಂತೆ ಚಾಮುಂಡಿಬೆಟ್ಟದ ಮೆಟ್ಟಿಲುಗಳ ಶುಕ್ರವಾರ ಹತ್ತುವ ಮೂಲಕ ತಮ್ಮ ಹರಕೆ ತೀರಿಸಿದರು. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನೆಟ್ಟಾಡಿಸೋಜ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್‌ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತೆಯರು ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟಹತ್ತಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ಹರಕೆ ತೀರಿಸಿದರು.

ಚಾಮುಂಡಿಬೆಟ್ಟದ ಪಾದದ ಬಳಿ ನೆಟ್ಟಾಡಿಸೋಜ ಅವರು ಈಡುಗಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ಬೆಟ್ಟಹತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಹಸಿರು ಬಳೆ, ಪೂಜಾ ಸಾಮಗ್ರಿಗಳೊಂದಿಗೆ ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ತೆರಳಿದ ನೂರಾರು ಮಹಿಳಾ ಕಾರ್ಯಕರ್ತರು ಚಾಮುಂಡೇಶ್ವರಿಗೆ ಬಾಗಿನ ಅರ್ಪಿಸಿದರು. ಈ ವೇಳೆ ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷ ಡಾ.ಬಿ. ಪುಷ್ಪಾ ಅಮರನಾಥ್‌ ಮಾತನಾಡಿ, ಮಾಚ್‌ರ್‍ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಾವೇಶದಲ್ಲಿ ಎಲ್ಲರೂ ಸೇರಿ ದೇವಿಗೆ ಹರಕೆ ಹೊತ್ತಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ನಿನ್ನ ಸನ್ನಿಧಿಗೆ ಬಂದು ಬಾಗಿನ ಸೇವೆ ಮಾಡುತ್ತೇವೆ ಎಂದು ಹರಕೆ ಹೊತ್ತಿದ್ದೆವು. ಅದರಂತೆ ಇಂದು ತಾಯಿಗೆ ಹರಕೆ ತೀರಿಸಿದ್ದೇವೆ ಎಂದರು.

Latest Videos

undefined

ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯ ನಿಯಮಾವಳಿಗಳನ್ನು ಮೀರಿಲ್ಲ: ಸಚಿವ ಮಹದೇವಪ್ಪ

ಇದು ತೋರ್ಪಡಿಕೆಗಾಗಿ ಮಾಡುತ್ತಿರುವುದಲ್ಲ. ತಾಯಿ ಚಾಮುಂಡೇಶ್ವರಿ ಆಣೆಯಾಗಿಯೂ ಹರಕೆ ಹೊತ್ತಿದ್ದೆವು. ನಾಡಿನಲ್ಲಿ ಸುಭಿಕ್ಷೆಯಿಂದ ಸರ್ಕಾರ ನಡೆಯಲಿ ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್‌ ಗೆಲ್ಲಲಿ ಎಂದು ತಾಯಿಯಲ್ಲಿ ಕೇಳಿಕೊಂಡಿದ್ದೇವೆ ಎಂದು ಅವರು ಹೇಳಿದರು. ಮಹಿಳಾ ಕಾಂಗ್ರೆಸ್‌ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಪುಷ್ಪವಲ್ಲಿ, ರಾಧಾ, ಜಯಲಕ್ಷ್ಮಿ, ಸುಶ್ಮಿತಾ, ಸುಜಾತ, ಲತಾ ಮೋಹನ್‌, ನಾಗವೇಣಿ, ಕುಮುದಾ, ಗೀತಾ ಮೊದಲಾದವರು ಇದ್ದರು.

ಈಶ ಗ್ರಾಮೋತ್ಸವಕ್ಕೆ ಕರ್ನಾಟಕ ಸಜ್ಜು: ಈಶ ಫೌಂಡೇಷನ್‌ ಆಯೋಜಿಸುವ ದಕ್ಷಿಣದ ರಾಜ್ಯಗಳು ಮತ್ತು ಮೈಸೂರು ಸೇರಿದಂತೆ ಕರ್ನಾಟಕದ 13 ಜಿಲ್ಲೆಗಳ 1300 ಹಳ್ಳಿಗಳಲ್ಲಿ ನಡೆಯುವ ಈಶ ಗ್ರಾಮೋತ್ಸವಕ್ಕೆ ಕರ್ನಾಟಕ ಸಜ್ಜಾಗಿದೆ. ಗ್ರಾಮೀಣ ಭಾರತದ ಚೈತನ್ಯವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಫೌಂಡೇಷನ್‌ ಹೊಂದಿದೆ. ವೃತ್ತಿಪರರನ್ನು ಹೊರತುಪಡಿಸಿ, ಸಮುದಾಯದಾದ್ಯಂತ ಯಾರಿಗೆಲ್ಲಾ ಪ್ರತಿನಿತ್ಯ ಕ್ರೀಡೆ ಆಡಲು ಅವಕಾಶ ಇರುವುದಿಲ್ಲವೋ ಅಂತಹ ಗ್ರಾಮೀಣ ಜನರನ್ನೆಲ್ಲಾ ಈಶ ಗ್ರಾಮೋತ್ಸವ ಒಟ್ಟುಗೂಡಿಸಿ, ಗ್ರಾಮೀಣ ಜೀವನದ ಹುರುಪನ್ನು ಆನಂದಿಸಲು ಭಾಗವಹಿಸುವಂತೆ ಪೋ›ತ್ಸಾಹಿಸುತ್ತಿದೆ.

Mysuru: ಸಿಇಐಆರ್ ಪೋರ್ಟಲ್ ಮೂಲಕ ಪತ್ತೆಯಾದ 135 ಮೊಬೈಲ್‌ಗಳ ಹಸ್ತಾಂತರ!

ಈಶ ಗ್ರಾಮೋತ್ಸವವು ಭಾರತದ ಅತಿದೊಡ್ಡ ಕ್ರೀಡಾಕೂಟವಾಗಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಾಂಡಿಚೇರಿಯಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಕ್ಲಸ್ಟರ್‌ ಮಟ್ಟದ ಪಂದ್ಯಗಳು ಆ. 12 ರಿಂದ ಪ್ರಾರಂಭವಾಗಿ, ಸೆ. 3 ರಂದು ಗೆದ್ದ ತಂಡಗಳು ವಿಭಾಗ ಮಟ್ಟದ ಪಂದ್ಯವನ್ನು ಆಡುತ್ತವೆ. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ 13 ಜಿಲ್ಲೆಗಳ 3200 ಕ್ಕೂ ಹೆಚ್ಚು ಹಳ್ಳಿಗಳು ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗುತ್ತಿವೆ. ಭಾಗವಹಿಸಲು ನೋಂದಣಿ ಉಚಿತ. ಮೊದಲನೇ ಹಂತದ (ಕ್ಲಸ್ಟರ್‌) ಪಂದ್ಯಗಳು- ಆ. 12 ಹಾಗೂ 13 ರಂದು ಚಿಕ್ಕಬಳ್ಳಾಪುರ, ವಿಜಯಪುರ, ಕೋಲಾರ , ವಿಜಯನಗರ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ, ಆಗಸ್ಟ 19 ಹಾಗೂ 20 ರಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ; ಆ. 26 ಹಾಗೂ 27 ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯಲಿದೆ.

click me!