'ಬಿಎಸ್‌ವೈ ಮುಂದುವರಿಕೆ ಯಾರು ಬೇಡ ಅಂತಾರೆ?'

By Kannadaprabha News  |  First Published Jun 13, 2021, 7:30 AM IST

* ಯಡಿಯೂರಪ್ಪ ಅವರು ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ

* ಬಿಎಸ್‌ವೈ ಮುಂದುವರಿಕೆ ಯಾರು ಬೇಡ ಅಂತಾರೆ?

* ಬೆಲ್ಲದ್‌ ವಿಚಾರ ಗೊತ್ತಿಲ್ಲ: ಸಚಿವ ಯೋಗೇಶ್ವರ್‌ ಹೇಳಿಕೆ


ಚನ್ನಪಟ್ಟಣ(ಜೂ.13): ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುವುದು ಬೇಡ ಅಂತ ಯಾರು ಹೇಳಿದ್ದಾರೆ? ಅವರೇ ಮುಖ್ಯಮಂತ್ರಿಯಾಗಿರಲಿ ಎಂದು ಸಚಿವ ಸಿ.ಪಿ.ಯೋಗೇಶ್ವರ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರು ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಹಾಗಾಗಿ ನಾನು ಯಾವುದೇ ರಾಜಕೀಯ ವಿಚಾರ ಮಾತನಾಡುವುದಿಲ್ಲ ಎಂದರು.

Tap to resize

Latest Videos

ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆ ದಿಲ್ಲಿಗೆ: ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ

ಇನ್ನು, ಶಾಸಕ ಅರವಿಂದ್‌ ಬೆಲ್ಲದ್‌ ದೆಹಲಿಗೆ ಹೋಗಿರುವ ವಿಚಾರ ನನಗೆ ಏನೂ ಗೊತ್ತಿಲ್ಲ. ನಾನು ರಾಜಕೀಯವಾಗಿ ಏನೂ ಮಾತನಾಡಬಾರದು ಎಂದು ನಿರ್ಧರಿಸಿದ್ದೇನೆ. ನಮ್ಮ ನಾಯಕರಾದ ಅರುಣ್‌ ಸಿಂಗ್‌ ಅವರು ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರು ರಾಜ್ಯಕ್ಕೆ ಬಂದು ಹೋಗುವುದು ಸಾಮಾನ್ಯ. ನಮ್ಮ ನಾಯಕರನ್ನು ಶಾಸಕರು ಭೇಟಿ ಮಾಡುತ್ತಾರೆ, ಮಾತನಾಡುತ್ತಾರೆ. ಇದರಲ್ಲಿ ವಿಶೇಷ ಏನೂ ಇಲ್ಲ. ಎಲ್ಲಾ ಶಾಸಕರು, ಸಚಿವರು ಅವರನ್ನು ಭೇಟಿಯಾಗುತ್ತಾರೆ. ಅದೇ ರೀತಿ ನಾನೂ ಅವರನ್ನು ಭೇಟಿಯಾಗುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ಹೈಕಮಾಂಡ್‌ ಲೋ ಕಮಾಂಡ್‌ ಆಗಿರುವಂತೆ ಕಾಣ್ತಿದೆ: ಭಯ್ಯಾಪುರ

ಕೋವಿಡ್‌ ಅಲೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರ ವೇಗವಾಗಿ ಕೆಲಸ ಮಾಡಲಿ ಎಂಬುದು ನನ್ನ ಆಸೆ. ನನ್ನ ಇಲಾಖೆಗೆ ಮುಂದಿನ ದಿನಗಳಲ್ಲಿ ವೇಗ ಕೊಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

click me!