ಶಿರಾಳಕೊಪ್ಪ (ನ.10) : ಶಿಕಾರಿಪುರ ಪಟ್ಟಣದ ಅಭಿವೃದ್ಧಿಯ ತೇರನ್ನು ಮುನ್ನಡೆಸುವ ಕರ್ತವ್ಯ ಹಾಗೂ ಶಿಕಾರಿಪುರ ತಾಲೂಕಿನ ಜನರ ಮತದಾರರ ಪ್ರೀತಿ ಉಳಿಸಿಕೊಂಡು, ವಿಶ್ವಾಸ ಬೆಳೆಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿಯನ್ನು ಬಿ.ಎಸ್.ಯಡಿಯೂರಪ್ಪ ಅವರು ನೀಡಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯನ್ನಾಗಿ ಬಿ.ಎಸ್. ಯಡಿಯೂರಪ್ಪ ಅವರು ಮಾಡಿದ್ದಾರೆ. ಅವರ ಸಲಹೆಯನ್ನು ಪಾಲಿಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೆಂದ್ರ ಘೋಷಿಸಿದರು.
ಶಿಕಾರಿಪುರ: ಬಿಎಸ್‌ವೈ ಪುತ್ರರಿಂದ ಬೈಕ್ ರ‍್ಯಾಲಿ; ಪಕ್ಷ ಸಂಘಟನೆಯಲ್ಲಿ ತೊಡಗಿದ ಅಣ್ತಮ್ಮ
ಶಿರಾಳಕೊಪ್ಪ ಹತ್ತಿರದ ಮಳೂರು ಬಿಜೆಪಿ ಶಕ್ತಿ ಕೇಂದ್ರದ ಸಭೆಯಲ್ಲಿ ಗುರುವಾರ ಭಾರಿ ಕರತಾಡನದ ಮಧ್ಯೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನನಗೆ ರಾಜ್ಯ ಉಪಾಧ್ಯಕ್ಷ ಹುದ್ದೆ ಕೊಟ್ಟು ಕೆಲಸ ಮಾಡುವಂತೆ ಹುರಿದುಂಬಿಸಿ ಕೆಲಸ ಮಾಡಲು ಸಹಕಾರ ನೀಡಿತು. ನಾನು ಈವರೆಗೆ ಚುನಾವಣೆಯಲ್ಲಿ 15 ಸಾವಿರ ಮತ ಗಳಿಸಲು ವಿಫಲವಾದ ಕೆ.ಆರ್. ಪೇಟೆಯ ಉಪಚುನಾವಣೆ ಹಾಗೂ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಸಾಮರ್ಥ್ಯ ತೋರಿಸಿದ್ದೇನೆ ಎಂದರು.
ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಪ್ರತಿಯೊಂದು ಚುನಾವಣೆಯಲ್ಲಿ ಈ ಶಕ್ತಿ ಕೇಂದ್ರ ಗ್ರಾಮಗಳು ಅತಿ ಹೆಚ್ಚು ಮತ ಕೊಟ್ಟಗ್ರಾಮಗಳಾಗಿವೆ. ಮುಂಬರುವ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ನಾವು ಚುನಾವಣೆಯಲ್ಲಿ ಮತಯಾಚಿಸಿ ಬಿ.ಎಸ್ ಯಡಿಯೂರಪ್ಪ ಅವರಂತೆ ಅತಿ ಹೆಚ್ಚಿನ ಮತಗಳಿಂದ ಗೆದ್ದು, ರಾಜ್ಯ ನಾಯಕರನ್ನಾಗಿ ಮಾಡುವ ಹೊಣೆ ನಮ್ಮ ಮೇಲಿದೆ ಎಂದರು.
News Hour With B Y Vijayendra: ಬಿಎಸ್‌ವೈ ಹೆಸರಲ್ಲಿ ವಿಜಯೇಂದ್ರ ರಾಜಕಾರಣ? ಶಿಕಾರಿಪುರದಿಂದಲೇ ಕಣಕ್ಕೆ?
ಅಧ್ಯಕ್ಷತೆಯನ್ನು ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್ ವಹಿಸಿದ್ದರು. ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ, ಭೋವಿ ನಿಗಮದ ನಿರ್ದೇಶಕ ಸಣ್ಣ ಹನುಮಂತಪ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಮಳೂರು ಪರಮೇಶ್ವರಪ್ಪ, ವಂಸತಗೌಡ, ಮುತ್ತಿಗೆ ಪರಮೇಶ್ವರಪ್ಪ, ಮುಳಕೊಪ್ಪ ಚಂದ್ರಣ್ಣ, ಶಂಬು, ಸತೀಶ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.