ಸತೀಶ್ ಜಾರಕಿಹೊಳಿ ಹೇಳಿಕೆ ವೈಯಕ್ತಿಕ ಎನ್ನುವುದಾದರೆ ಅವರ ಮೇಲೆ ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಬೇಕಿತ್ತು. ಅವರನ್ನು ಪಕ್ಷದಿಂದ ವಜಾ ಮಾಡಬೇಕಿತ್ತು. ಇಲ್ಲ ಅವರಿಂದ ಕ್ಷಮಾಪಣೆಯಾದರೂ ಹೇಳಿಸಬೇಕಿತ್ತು ಎಂದ ಸಚಿವ ಸುಧಾಕರ್
ಚಿಕ್ಕಬಳ್ಳಾಪುರ(ನ.10): ಕಾಂಗ್ರೆಸ್ ಹಿಂದೂ ವಿರೋಧಿ, ಕಾಂಗ್ರೆಸ್‌ನಲ್ಲಿ ಹಿಂದೂ ವಿರೋಧಿ ಭಾವನೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ಬರೀ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆ ವೈಯಕ್ತಿಕ ಎನ್ನುವುದಾದರೆ ಅವರ ಮೇಲೆ ಕಾಂಗ್ರೆಸ್ ಕ್ರಮ ತೆಗೆದುಕೊಳ್ಳಬೇಕಿತ್ತು. ಅವರನ್ನು ಪಕ್ಷದಿಂದ ವಜಾ ಮಾಡಬೇಕಿತ್ತು. ಇಲ್ಲ ಅವರಿಂದ ಕ್ಷಮಾಪಣೆಯಾದರೂ ಹೇಳಿಸಬೇಕಿತ್ತು ಎಂದರು.
ವಿಜಯಪುರ: ಬಬಲೇಶ್ವರದಲ್ಲಿ ಕಾಂಗ್ರೆಸ್- ಬಿಜೆಪಿ ಘಟಾನುಗಟಿ ನಾಯಕರ ಕಿತ್ತಾಟ..!
ಧರ್ಮಗಳನ್ನು ಓಲೈಸಿಕೊಂಡು ಅವರನ್ನು ಮತಬ್ಯಾಂಕ್ ಮಾಡಿಕೊಂಡು ಕಾಂಗ್ರೆಸ್ ಇಷ್ಟುವರ್ಷ ದೇಶದಲ್ಲಿ ರಾಜಕಾರಣ ನಡೆಸಿದೆ. ಈಗ ದೇಶದ ಜನರಲ್ಲಿ ರಾಜಕೀಯ ಪ್ರಜ್ಞೆ ಬಂದಿದೆ. ಇವರ ಹಿಡನ್ ಅಜೆಂಡಾಗಳ ಬಗ್ಗೆ ಜನತೆಗೆ ಗೊತ್ತಾಗಿದೆ. ಆದ್ದರಿಂದ ಕಳೆದ 10 ವರ್ಷದಿಂದ ಅವರನ್ನು ಎಲ್ಲಿ ಇಡಬೇಕು ಅಲ್ಲಿ ಇಟ್ಟಿದ್ದಾರೆಂದು ಸುಧಾಕರ್ ಕಾಂಗ್ರೆಸ್ ವಿರುದ್ಧ ಟೀಕಿಸಿದರು.
ಕರ್ನಾಟಕದಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ವೇಳೆ ಬಹಳಷ್ಟುಕಾಂಗ್ರೆಸ್ ನಾಯಕರು ಅನೇಕ ದೇವಾಲಯಗಳಿಗೆ ಹೋಗಿ ಹಣೆಗೆ ಕುಂಕಮ, ವಿಭೂತಿ ಹಚ್ಚಿಕೊಂಡು ಬಂದಿದ್ದಾರೆ. ಆದರೆ ಈಗ ಹಿಂದೂಗಳ ಬಗ್ಗೆ ಈ ರೀತಿ ಅವಹೇಳನವಾಗಿ ಮಾತನಾಡುತ್ತಾರೆಂದರು. ಯಾರೋ ಈ ಮಾತನ್ನು ಹೇಳಿದ್ದರೆ ನಾವು ಅಷ್ಟೊಂದು ಪರಿಗಣಿಸುವ ಅವಶ್ಯಕತೆ ಇರಲಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರು ಈ ರೀತಿ ಮಾತನಾಡುವುದು ಎಷ್ಟುಮಾತ್ರ ಸರಿ. ಈ ಬಗ್ಗೆ ಅವರ ಪಕ್ಷದ ನಾಯಕರೇ ಹೇಳಬೇಕೆಂದರು.