Assembly Election: ವರುಣಾ ಕ್ಷೇತ್ರದಿಂದ ಸ್ಪರ್ಧಿಸುವತ್ತ ಸಿದ್ದರಾಮಯ್ಯ ಪೂರ್ಣ ಚಿತ್ತ

By Sathish Kumar KH  |  First Published Nov 18, 2022, 1:36 PM IST

ರಾಜ್ಯದಲ್ಲಿ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ನನಗೆ ಒತ್ತಡ ಬಂದಿದೆ. ಆದರೆ, ಅಂತಿಮವಾಗಿ ಈಗ ಮೂರು ವಿಧಾನಸಭಾ ಕ್ಷೇತ್ರಗಳನ್ನು ಅಂತಿಮವಾಗಿ ಪಟ್ಟಿ ಮಾಡಿಕೊಂಡಿದ್ದೇನೆ. ಅದರಲ್ಲಿ ಹೈಕಮಾಂಡ್‌ ಸೂಚನೆ ಮಾಡಿದಂತೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 


ಮೈಸೂರು (ನ.18): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ರಾಜ್ಯದಲ್ಲಿ ಹಲವು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವಂತೆ ನನಗೆ ಒತ್ತಡ ಬಂದಿದೆ. ಆದರೆ, ಅಂತಿಮವಾಗಿ ಈಗ ಮೂರು ವಿಧಾನಸಭಾ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಅದರಲ್ಲಿ ಹೈಕಮಾಂಡ್‌ ಸೂಚನೆ ಮಾಡಿದಂತೆ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ಒತ್ತಾಯ ಬಂದಿದೆ. ನಾನು ಮೂರು ಕ್ಷೇತ್ರಗಳನ್ನ ಅಂತಿಮವಾಗಿ ಪಟ್ಟಿ (Short list)) ಮಾಡಿದ್ದೇನೆ. ಕೋಲಾರ (Kolar), ಬಾದಾಮಿ (Badami) ಹಾಗೂ ವರುಣಾ (Varuna) ಕ್ಷೇತ್ರಗಳು ಈ ಪಟ್ಟಿಯಲ್ಲಿವೆ. ಚುನಾವಣೆ (Election) ಘೋಷಣೆ ನಂತರ ನಾನು ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಹೇಳುತ್ತೇನೆ. ಕ್ಷೇತ್ರದ ಆಯ್ಕೆಯ ಬಗ್ಗೆ ಅಂತಿಮವಾಗಿ ಹೈಕಮಾಂಡ್ (High Command) ತೀರ್ಮಾನ ಮಾಡುತ್ತದೆ. ಇನ್ನು ಸೋಲಿನ ಭಯದಲ್ಲಿ ಸಿದ್ದರಾಮಯ್ಯ (siddaramaiah) ಅವರು ಕ್ಷೇತ್ರಳಲ್ಲಿ ಸಮೀಕ್ಷೆಯ (Survey) ಮೊರೆ ಹೋಗಿದ್ದಾರೆ ಎಂಬ ಬಿಜೆಪಿ ಸೇರಿ ಹಲವು ಪಕ್ಷಗಳ ಮುಖಂಡರ ಆರೋಪದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

Tap to resize

Latest Videos

ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಗೆ ಚಕ್ರವ್ಯೂಹ: ಟಗರು ಬೇಟೆಗೆ ಖೆಡ್ಡಾ ರೆಡಿ

ಸಮೀಕ್ಷೆ ಮಾಡಿಸಿದರೆ ತಪ್ಪೇನು? : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಅವರು ಸಮೀಕ್ಷೆ ಮಾಡಿಸಿರಲಿಲ್ವಾ? ಎಂದು ಬಿಜೆಪಿ (BJP) ಮುಖಂಡರ ವಿರುದ್ಧ ಕಿಡಿಕಾರಿದರು. ಆದರೆ, ಸಮೀಕ್ಷೆ ಮಾಡಿಸುವುದರಲ್ಲಿ ನನಗೆ ತಪ್ಪೇನು ಕಾಣಿಸುತ್ತಿಲ್ಲ. ನಾವು ರಾಜ್ಯವ್ಯಾಪಿ ಪ್ರವಾಸ (Tour) ಮಾಡುತ್ತಿದ್ದೇವೆ. ಈ ವೇಳೆ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಸುರಕ್ಷಿತ ಕ್ಷೇತ್ರ ಯಾವುದು ಎಂಭುದಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ಆದರೆ, ನಾನು ಸರ್ವೆ ಅಥವಾ ಪಕ್ಷ ಸರ್ವೆ ಮಾಡಿಸಿಲ್ಲ. ಇನ್ನು ಜೆಡಿಎಸ್ (JDS) ಪಕ್ಷದ ಪಂಚರತ್ನ (Pancaratna) ಯಾತ್ರೆ ಸೇರಿ ಯಾವುದೇ ಜಾತ್ರೆ ಮಾಡಿದರೂ ಪರವಾಗಿಲ್ಲ. ಪಂಚ ರತ್ನ, ಅಷ್ಟ ರತ್ನ, ದಶರತ್ನ ಯಾತ್ರೆ ಏನು ಬೇಕಾದರೂ ಮಾಡಲಿ. ಅವರ ಸಂಘಟನೆ ಅವರಿಗೆ ಇರುತ್ತದೆ. ನಾನು ಯಾರಿಗೂ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಆರ್ಥಿಕವಾಗಿ ಹಿಂದುಳಿದವರ ಮೀಸಲು ದೇಶದಲ್ಲಿ ಅಸಮಾನತೆ ಹೆಚ್ಚಿಸುತ್ತೆ: ಸಿದ್ದರಾಮಯ್ಯ

ಮೂರು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಕಟ: ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲು ಅಭ್ಯರ್ಥಿಗಳು ಟಿಕೆಟ್‌ಗಾಗಿ (Ticket) ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ, ಈಗ ಸಿದ್ದರಾಮಯ್ಯ ಅವರು ಚುನಾವಣೆ ಘೋಷಣೆ ಆಗುವವರೆಗೂ ತಾವು ಸ್ಪರ್ಧಿಸುವ ಕ್ಷೇತ್ರ ಯಾವುದು ಎಂಬುದನ್ನು ತಿಳಿಸುತ್ತಿಲ್ಲ. ಹೀಗಾಗಿ, ವರುಣಾ, ಕೋಲಾರ ಮತ್ತು ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇತರೆ ಕಾಂಗ್ರೆಸ್‌ ಆಕಾಂಕ್ಷಿಗಳು (aspirants) ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂತಿಮವಾಗಿ ಸಿದ್ದರಾಮಯ್ಯ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ನಮ್ಮ ಕ್ಷೇತ್ರದಲ್ಲಿ ಅರ್ಜಿ (Application) ಹಾಕಿದ್ದರೆ ನನಗೇ ಟಿಕೆಟ್‌ ಸಿಗುತ್ತಿತ್ತು ಎಂದು ಕೈ-ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಬರಲಿದೆ. ಇದರಿಂದ ಮೂರು ಕ್ಷೇತ್ರಳ ಟಿಕೆಟ್‌ ಆಕಾಂಕ್ಷಿಗಳು ಸಂಕಟದಲ್ಲಿ ಸಿಲುಕಿದ್ದಾರೆ.

click me!