ಅನರ್ಹರು ಯಾರೂ ಕಾಂಗ್ರೆಸ್‌ಗೆ ಹೋಗಲ್ಲ: ಬಿ.ಸಿ. ಪಾಟೀಲ್‌

By Sathish Kumar KH  |  First Published Nov 18, 2022, 1:15 PM IST

ನಾವೆಲ್ಲ ಅನರ್ಹರಾದಾಗ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಅಂತ ಸದನದಲ್ಲಿ ಎಲ್ಲರು ನೋಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.


ಬೆಂಗಳೂರು (ನ.18) : ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಯಾರೊಬ್ಬರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನಾವೆಲ್ಲ ಅನರ್ಹರಾದಾಗ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಏನೆಲ್ಲ ಮಾತಾಡಿದಾರೆ ಅಂತ ಸದನದಲ್ಲಿ ಎಲ್ಲರು ನೋಡಿದ್ದಾರೆ. ನಮ್ಮ ರಾಜಕೀಯ ಸಮಾಧಿ ಆಯ್ತು ಅಂತೆಲ್ಲ ಹೇಳಿದ್ದರು. ಈಗ ಸಮಾಧಿ ಆದವರನ್ನು ಕರೆಯುತ್ತಿದ್ದಾರೆ ಎಂದು ಮರಳಿ ಹೋಗಲು ಸಾಧ್ಯವಿಲ್ಲ. ಅನರ್ಹಗೊಂಡವರಲ್ಲಿ ಯಾರೊಬ್ಬರೂ ಕಾಂಗ್ರೆಸ್‌ನಿಂದ ಟಿಕೆಟ್‌ಗೆ ಅರ್ಜಿ ಸಲ್ಲಿಸಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದ್ದಾರೆ.

ಕಾಂಗ್ರೆಸ್ ಮರಳಿ ಬರುವಂತೆ ಡಿಕೆಶಿ ಆಹ್ವಾನ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾವೆಲ್ಲರೂ ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೊರನಡೆದಾಗ ನಮ್ಮನ್ನು ಅನರ್ಹಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ (Shivakumar) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಅನರ್ಹಗೊಂಡವರ ರಾಜಕೀಯ ಜೀವನ (Ploitical life) ಸಮಾಧಿ ಎಂದು ಹೇಳಿಕೆ ನೀಡಿದ್ದರು.  ಹೀಗೆ ಸಮಾಧಿ ಆದವರನ್ನು ‌ಈಗ ಪುನಃ ಡಿ.ಕೆ. ಶಿವಕುಮಾರ್‍‌ ಮತ್ಯಾಕೆ ಕರೆಯುತ್ತಿದ್ದಾರೆ. ಪಕ್ಷ ಬಿಟ್ಟು ಹೋದವರು ವಾಪಸ್‌ (Return)ಬರಬಹುದು ಅಂತ ಕರೀತಿದಾರೆ. ಆದರೆ, ನಮ್ಮವರು ಯಾರೊಬ್ಬರೂ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಟಿಕೆಟ್‌ಗಾಗಿ (Ticket) ಅರ್ಜಿ ಹಾಕಿಲ್ಲ ಎಂದು ಹೇಳಿದರು.

Latest Videos

undefined

ಯುಬಿ ಬಣಕಾರ್ ವಿರುದ್ಧ 4ನೇ ಬಾರಿಯೂ ಕುಸ್ತಿ ಗೆಲ್ಲುತ್ತೇನೆ: ಬಿ.ಸಿ. ಪಾಟೀಲ್

ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅಭ್ಯರ್ಥಿಗಳ (Candidates) ಕೊರತೆ ಆಗಿರಬಹುದು. ಹಾಗಾಗಿ ಹಳೇ ಗಂಡನ ಪಾದವೇ (Old Husband Feet)ಗತಿ ಅಂತ ಕರೆಯುತ್ತಿರಬಹುದು. ಆದರೆ ನಮ್ಮಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಕಾಂಗ್ರೆಸ್ ನಿಂದಲೇ ಬಹಳಷ್ಟು ಜನ ಬಿಜೆಪಿಗೆ (BJP) ಬರುತ್ತಿದ್ದಾರೆ. ಅನರ್ಹಗೊಂಡವರ ಪೈಕಿ ರಮೇಶ್ ಜಾರಕಿಹೊಳಿಗೆ (Ramesh Jarakiholi) ಸಚಿವ ಸ್ಥಾನ ಸಿಕ್ಕಿಲ್ಲ. ಆದರೆ, ಅವರನ್ನು ನಾವ್ಯಾರೂ ಮರೆತಿಲ್ಲ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಕಾರಣವೇನೆಂಬುದು ಕೂಡ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ ಗೆ ಕೇಳಬೇಕು. ಇನ್ನು ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್ (JDS) ಸೇರುವ ಸುದ್ದಿ ಹರಿದಾಡುತ್ತಿರುವ ವಿಚಾರವೂ ಗೊತ್ತಿಲ್ಲ ಎಂದು ತಿಳಿಸಿದರು.

ಸಹಕಾರ ಸಂಘಗಳು ರೈತರಿಗೆ ಹತ್ತಿರವಾಗುವ ಕಾರ್ಯ ಮಾಡಬೇಕು: ಸಚಿವ ಬಿ.ಸಿ.ಪಾಟೀಲ್‌

ಕಾಂಗ್ರೆಸ್‌ನಲ್ಲಿಯೇ ವಿರೋಧವಿದೆ: ಕಾಂಗ್ರೆಸ್‌ನ ಹಲವು ಸಭೆಗಳಲ್ಲಿ ಅನರ್ಹಗೊಂಡಿದ್ದ ಹಾಗೂ ಕಾಂಗ್ರೆಸ್‌ನಿಂದ ಬಿಟ್ಟುಹೋಗಿರುವ ಮುಖಂಡರನ್ನು ಮರಳಿ ಪಕ್ಷಕ್ಕೆ ಸೆಳೆಯುವ ಬಗ್ಗೆ ಚರ್ಚೆ (discussion) ನಡೆಸಲಾಗಿದೆ. ಈ ವೇಳೆ ಕೆಲ ಅನರ್ಹ (Ineligible) ಶಾಸಕರು ಮತ್ತೆ ಪಕ್ಷಕ್ಕೆ ಹಿಂತಿರುಗುವ ಆಸಕ್ತಿ ತೋರಿರುವ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳುವ ಬಗ್ಗೆ ತೀವ್ರ ವಿರೋಧವಿದೆ. ಅದರಲ್ಲೂ ವಿಶೇಷವಾಗಿ ಮೂಲ ಕಾಂಗ್ರೆಸ್ಸಿಗರು ಇದನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಆದರೆ, ಕಳೆದ ಎರಡು ವರ್ಷಗಳ ಹಿಂದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಯಾವುದೇ ಕಾರಣಕ್ಕೂ ಅನರ್ಹರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದು ಕೂಡ ಇಲ್ಲಿ ಸ್ಮರಿಸಬಹುದು.

click me!