ಮತ್ತೆ ಶುರುವಾಯ್ತು ಸಂಪುಟ ಕಸರತ್ತು, ಬೈ ಎಲೆಕ್ಷನ್ ನಂತ್ರ ಮಂತ್ರಿಯಾಗ್ತಿನಿ ಎಂದ MLC

By Suvarna NewsFirst Published Oct 27, 2020, 4:38 PM IST
Highlights

ಉಪ ಚುನಾವಣೆ ನಂತರ ನಾನು ಮಂತ್ರಿಯಾಗ್ತಿನಿ ಎಂದು ವಿಧಾನಪರಿಷತ್ ಹೇಳಿಕೆ ನೀಡಿದ್ದು,  ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಂಪುಟ ಕಸರತ್ತು ಶುರುವಾಗಿದೆ,

ತುಮಕೂರು, (ಅ.27): ಉಪಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.

 ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಚುನಾವಣೆಯಾದ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ನನಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ. ಅವರು ಕೊಟ್ಟ ಭರವಸೆಯನ್ನು ಈಡೇರಿಸುವ ನಾಯಕರು. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಂದವರು ಮಂತ್ರಿಯಾಗೇ ಆಗುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್ ಮನೆಯಲ್ಲಿ ಆಯುಧ ಪೂಜೆ: ಕಂಗೊಳಿಸಿದ ಫೆರಾರಿ, ರೋಲ್ಸ್ ರಾಯ್ಸ್

ಇನ್ನು ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ ಎಂಟಿಬಿ,  ಸಿಎಂ ಬದಲಾವಣೆ ಮಾಡಲು ಮುಖ್ಯಮಂತ್ರಿಗಳ ಕುರ್ಚಿ ಖಾಲಿಯಿಲ್ಲ. ಆ ಕುರ್ಚಿಯ ಮೇಲೆ ಯಡಿಯೂರಪ್ಪನವರು ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಬದಲಾವಣೆ ಇಲ್ಲ . ಯಡಿಯೂರಪ್ಪನವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು. 

ಶಿರಾದಲ್ಲಿ 23 ಸಾವಿರ ಕುರುಬ ಸಮುದಾಯದ ಮತಗಳಿದ್ದು, ಎಲ್ಲ ಮತಗಳು ಬಿಜೆಪಿಗೆ ಬರಲಿವೆ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಎಲ್ಲರೂ ಶಾಸಕರಾಗಿದ್ದಾರೆ. ಬಿಜೆಪಿ ಮಾತ್ರ ಇನ್ನು ಖಾತೆ ತೆರೆದಿಲ್ಲ.ಹಾಗಾಗಿ ಕುರುಬರು ಬಿಜೆಪಿಗೆ ಮತ ಹಾಕುತ್ತಾರೆ ಎಂದರು.

ಸಿದ್ದರಾಮಯ್ಯನವರು ಬಂದು ಪ್ರಚಾರ ನಡೆಸಿರಬಹುದು. ಈಗಾಗಲೇ ಅವರು ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಈಗಾಗಲೇ ಒಂದು ಅವಕಾಶ ಸಿಕ್ಕಿದೆ. ಬೇರೆಯವರಿಗೆ ಅವಕಾಶ ಸಿಗಬೇಕಲ್ವ? 2ನೇ ಹಂತದ ನಾಯಕರನ್ನು ಬೆಳೆಸಬೇಕು. ನಾನು ಬೆಳೆಯಬೇಕು. ಜೊತೆಗೆಯಲ್ಲಿದ್ದವರು ಬೆಳೆಯಬೇಕು ಎಂದರು.

click me!