ಭಾವಿ ಸಿಎಂ ಚರ್ಚೆ: ಡಿಕೆಶಿ ಬೆಂಬಲಿಗರಿಗೆ ಮಾತಿನಲ್ಲೇ ಚೂಟಿದ ಸಿದ್ದರಾಮಯ್ಯ..!

Kannadaprabha News   | Asianet News
Published : Oct 27, 2020, 03:38 PM IST
ಭಾವಿ ಸಿಎಂ ಚರ್ಚೆ: ಡಿಕೆಶಿ ಬೆಂಬಲಿಗರಿಗೆ ಮಾತಿನಲ್ಲೇ ಚೂಟಿದ ಸಿದ್ದರಾಮಯ್ಯ..!

ಸಾರಾಂಶ

ಏ ಹಾಗೆಲ್ಲ ಹೇಳಬೇಡ್ರಪ್ಪಾ, ಕೆಲವರಿಗೆ ನೋವಾಗುತ್ತೆ ಎಂದ ಸಿದ್ದರಾಮಯ್ಯ| ಪಂಚೆ ಕಳಚುತ್ತಿರುವುದು ಒಳ್ಳೆಯ ಸಂಕೇತವೇ ಆಗಿದೆ ಸರ್. ಮುಂದೆ ನೀವು ಮತ್ತೆ ಮುಖ್ಯಮಂತ್ರಿಗಳಾಗಬಹುದು ಎಂದ ಸ್ಥಳೀಯ ಮುಖಂಡರು| ಮುಂದೆ ಸಮಯ ಬಂದಾಗ ಜನ ಏನ್ತೀರ್ಮಾನ ಮಾಡ್ತಾರೆ ಅಂತಾ ನೋಡೋಣ: ಸಿದ್ದು| 

ಬೀದ​ರ್(ಅ.27): ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ‘ಭಾವಿ ಮುಖ್ಯಮಂತ್ರಿ’ ಚರ್ಚೆಯನ್ನು ‘ಮಾಜಿ ಮುಖ್ಯಮಂತ್ರಿ’ ಸಿದ್ದರಾಮಯ್ಯ ಬಹು ಗಂಭೀರವಾಗಿಯೇ ಪರಿಗಣಿಸಿದಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೆಂಗಲಿಗರನ್ನು ಮಾತಿನಲ್ಲೇ ಚೂಟಿದ್ದಾರೆ.

ಬಸವಕಲ್ಯಾಣದಲ್ಲಿ ದಿ. ಶಾಸಕ ಬಿ.ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡುವ ವೇಳೆ ಸಿದ್ದರಾಮಯ್ಯ ಅವರ ಪಂಚೆ ಜಾರುತ್ತಿತ್ತು. ಈ ಸಂದರ್ಭದಲ್ಲಿ ಅವರು ಜಾರುತಿರುವ ಪಂಚೆಯನ್ನು ಸರಿಪಡಿಸಿಕೊಂಡು ಕಟ್ಟಿಕೊಂಡಿದ್ದಾರೆ.

'ಸಿದ್ದರಾಮಯ್ಯ ಧಮ್‌, ಆಡಳಿತ ಎರಡನ್ನೂ ನೋಡಿದ್ದೇನೆ'

ಆ ಸಂದರ್ಭದಲ್ಲಿ ಪಂಚೆ ಕಳಚುತ್ತಿರುವುದು ಒಳ್ಳೆಯ ಸಂಕೇತವೇ ಆಗಿದೆ ಸರ್. ಮುಂದೆ ನೀವು ಮತ್ತೆ ಮುಖ್ಯಮಂತ್ರಿಗಳಾಗಬಹುದು ಎಂದ ಸ್ಥಳೀಯ ಮುಖಂಡರು ಹೇಳಿದ್ದಾರೆ. ಆಗ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ, ಏ ಹಾಗೆಲ್ಲ ಹೇಳಬೇಡ್ರಪ್ಪಾ, ಇದನ್ನು ಕೇಳಿಸಿಕೊಳ್ಳುವವರಿಗೆ ನೋವಾಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ ಮುಂದುವರೆದು, ಅದೆಲ್ಲ ಮುಂದೆ ಸಮಯ ಬಂದಾಗ ಜನ ಏನ್ತೀರ್ಮಾನ ಮಾಡ್ತಾರೆ ಅಂತಾ ನೋಡೋಣ ಎಂದು ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?