Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತಾಡಿದ್ರೆ ಜೈಲು ಖಚಿತ, ಗ್ಯಾರೆಂಟಿ ಮಾರ್ಗಸೂಚಿ ಪ್ರಕಟ!

ಗೋ ಹತ್ಯೆ ನಿಷೇಧ ಕಾಯ್ದೆ ಜಟಾಪಟಿ, ಕಾಂಗ್ರೆಸ್ ಬಿಜೆಪಿ ಕೆಂಡಾಮಂಡಲ, ಗೋಹತ್ಯೆ ನಿಷೇಧ ಮಾಡಿದರೆ ಉಗ್ರ ಹೋರಾಟ, ಬಿಜೆಪಿ ನಾಯಕರಿಂದ ಎಚ್ಚರಿಕೆ, ಕಾಂಗ್ರೆಸ್ ಗ್ಯಾರೆಂಟಿಗೆ ಷರತ್ತುಬದ್ಧ ಮಾರ್ಗಸೂಚಿ ಬಿಡುಗಡೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಟಾಪಟಿ ಶುರುವಾಗಿದೆ. ರಾಜ್ಯದಲ್ಲಿ ಹಿಟ್ಲರ್ ಸರ್ಕಾರವಿದೆ ಎಂದ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಕೆರಳಿದ ಎಂಬಿ ಪಾಟೀಲ್, ಜೈಲಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಮತ್ತೆ ಹಳೇ ವಿಷಯಗಳು ಮುನ್ನಲೆಗೆ ಬಂದಿದೆ.ಸರ್ಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕುವ ಬೆದರಿಕೆ ಹಾಕುತ್ತಿದ್ದಾರೆ. ಇದುವೇ ಹಿಟ್ಲರ್ ಸರ್ಕಾರ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ವೀರ್ ಸಾವರ್ಕರ್ ಜಯಂತಿ ರದ್ದುಗೊಳಿಸಲು ಮುಂದಾಗಿದೆ ಎಂದು ಸೂಲಿಬೆಲೆ ಹೇಳಿದ್ದಾರೆ.ಕಾಂಗ್ರೆಸ್ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ಹೇಳಿಕೆ ನೀಡಿದೆ. ಇದರ ವಿರುದ್ದ ಬಿಜೆಪಿ ಕೆಂಡಾಮಂಡಲವಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆದರೆ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ.

Video Top Stories