ರಾಜ್ಯಸಭಾ ಚುನಾವಣೆ: 'ಕುಮಾರಸ್ವಾಮಿ ಕುಟುಂಬಕ್ಕೆ ಕುಪೇಂದ್ರ ರೆಡ್ಡಿ ಏಕೆ ಸಾಲ ಕೊಟ್ಟಿದ್ದಾರೆ?'

By Kannadaprabha News  |  First Published Jun 12, 2022, 2:56 PM IST

*  ರಾಜ್ಯಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ
*  ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಪ್ರಶ್ನೆ
*  ಪ್ರತಾಪ ಸಿಂಹ ಕಚೇರಿಗೆ ಭೇಟಿ


ಮೈಸೂರು(ಜೂ.12): ರಾಜ್ಯಸಭಾ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರು ಎಚ್‌.ಡಿ. ಕುಮಾರಸ್ವಾಮಿ ಅವರ ಕುಟುಂಬಕ್ಕೆ ಸುಮಾರು 19 ಕೋಟಿ ಸಾಲ ಏಕೆ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಪ್ರಶ್ನಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಕುಪೇಂದ್ರರೆಡ್ಡಿ ಅವರು ತಮಗೆ 350 ಕೋಟಿ ಸಾಲ ಇದೆ ಎಂದು ಪ್ರಮಾಣಪತ್ರದಲ್ಲಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಭವಾನಿ ರೇವಣ್ಣ ಅವರಿಗೆ 2 ಕೋಟಿ, ಸೂರಜ್‌ ರೇವಣ್ಣಗೆ 5.8 ಕೋಟಿ, ಪ್ರಜ್ವಲ್‌ ರೇವಣ್ಣಗೆ 1 ಕೋಟಿ, ಎಚ್‌.ಡಿ. ರಮೇಶ್‌ಗೆ 3.9 ಕೋಟಿ, ಪುಟ್ಟರಾಜು ಅವರ ಪುತ್ರನಿಗೆ 6.08 ಕೋಟಿ ಹೀಗೆ ಒಟ್ಟು 19 ಕೋಟಿ ಸಾಲವನ್ನು ಇವರಿಗೇ ಏಕೆ ನೀಡಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೇಳಿದರು.

Tap to resize

Latest Videos

Rajya Sabha Election ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಆಸ್ತಿ 817 ಕೋಟಿ!

ಮೊದಲು ಕುಮಾರಸ್ವಾಮಿ ಅವರು ತಮ್ಮ ಪಕ್ಷದಿಂದ ಜಾತ್ಯತೀತ ಎಂಬ ಪದವನ್ನು ತೆಗೆಯಬೇಕು. ಈ ಪದ ಬಳಸಲು ಅವರು ಅರ್ಹರಲ್ಲ. ಕುಪೇಂದ್ರರೆಡ್ಡಿ ಅವರನ್ನು ನಿಲ್ಲಿಸಿ, ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯನ್ನು ಸೋಲಿಸಿ, ಬಿಜೆಪಿಯ ಲೆಹರ್‌ಸಿಂಗ್‌ ಗೆಲ್ಲುವಂತೆ ಮಾಡಿರುವ ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂಬುದು ಸಾಬೀತಾಗಿದೆ ಎಂದರು.

ಪ್ರತಾಪ ಸಿಂಹ ಕಚೇರಿಗೆ ಭೇಟಿ:

ಮೈಸೂರಿಗೆ ಸಂಸದ ಪ್ರತಾಪಸಿಂಹ ಅವರು ನೀಡಿರುವ ಕೊಡುಗೆ ಕುರಿತು ಚರ್ಚೆಗೆ ಬರಲು ಜೂ. 24ರ ಗಡುವು ನೀಡಿದ್ದೇನೆ. ಅಷ್ಟರಲ್ಲಿ ಅವರು ಸ್ಥಳ, ದಿನ ಮತ್ತು ಸಮಯ ನಿಗದಿಪಡಿಸದಿದ್ದರೆ ನಾನೇ 24ರ ನಂತರ ಅವರ ಕಚೇರಿಗೆ ಒಂದು ಕುರ್ಚಿ ಮತ್ತು ಮೇಜಿನೊಂದಿಗೆ ಹೋಗಿ ಕುಳಿತುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

click me!