* ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಚುನಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ
* ಹಣ, ಜಾತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ
* ನನ್ನನ್ನು ಗೆಲ್ಲಿಸಿದರೆ ರಾಜ್ಯಕ್ಕೂ ಗೌರವ ಬರುತ್ತೆ
ಚಾಮರಾಜನಗರ(ಜೂ.12): ಎಲೆಕ್ಷನ್ ಈಗ ವ್ಯಾಪಾರ ಆಗಿದೆ, ಟೆಂಡರ್ ಕರೆದು ಹರಾಜು ಕೂಗೋದು ಒಂದು ಮಾತ್ರ ಆಗ್ತಿಲ್ಲ ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಚುನಾವಣೆ ಪ್ರಕ್ರಿಯೆ ಬಗ್ಗೆ ಅಸಮಾಧಾನ ಹೊರಹಾಕಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಖಜಾನೆಗೆ ಹಣವೂ ಹರಿದು ಬರಲಿದ್ದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಂಎಲ್‌ಎ, ಎಂಎಲ್ಸಿ ಸ್ಥಾನಗಳನ್ನು ಹರಾಜು ಹಾಕಿದರೇ ಒಳಿತು. ರಾಜ್ಯಸಭೆಗಂತೂ ಚಿಂತಕರು, ಜ್ಞಾನಿಗಳು ಹೋಗಲಾಗಲ್ಲ ಮಿನಿಮಮ್ 50 ಕೋಟಿ ರು. ಬೇಕು ಎಂದು ಗಂಭೀರ ಆರೋಪ ಮಾಡಿದರು.
undefined
ವಿಧಾನಸಭೆ ಮತ್ತು ವಿಧಾನ ಪರಿಷತ್ ಶ್ರೀಮಂತರ ಕೈಗೆ ಹೋಗುತ್ತದೆ. ಪಾರ್ಲಿಮೆಂಟ್ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶ್ರೀಮಂತರ ಪಾಲಾಗಿದೆ. ಪಾರ್ಟಿಗಳ ಮುಖ್ಯಸ್ಥರೇ ವ್ಯಾಪಾರಸ್ಥರಾಗಿದ್ದು, ಚುನಾವಣೆ ಬಂದಾಗ ಸೀಟುಗಳು ಟೆಂಡರ್ ಆಗಲಿವೆ. ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ದೀಕ್ಷೆ ಕೊಡಲಾಗಿದೆ. ಲೆಹರ್ ಸಿಂಗ್ ಯಾರು, ಆತನ ಹಿನ್ನೆಲೆ ಏನು ಗೊತ್ತಿಲ್ಲ, ಮೇಧಾವಿಗಳು, ಕಲಾವಿದರು, ಚಿಂತಕರು ಈಗ ರಾಜ್ಯಸಭೆ ಹೋಗಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
'ಯಡಿಯೂರಪ್ಪನವರನ್ನು ಮೂಲೆಗುಂಪಾಗಿಸುವ ಯತ್ನ ನಡೆಯುತ್ತಿದೆ'
ನಾನು ಹಿಂದೆ 60-70 ರ ದಶಕದ ಚುನಾವಣೆಗಳಲ್ಲಿ ನಿಂತಾಗ ಜನರು ಅಭ್ಯರ್ಥಿಗಳಿಗೆ ತಾಂಬೂಲ ಕೊಟ್ಟು ಕೈಲಾದಷ್ಟು ಹಣವನ್ನು ಕೊಡುತ್ತಿದ್ದರು. ಆಗೆಲ್ಲಾ, ಪಕ್ಷದ ಕಾರ್ಯಕರ್ತರು, ಮತದಾರರಿಗೆ ಉಪ್ಪಿಟ್ಟು ಕೊಡಲಾಗುತ್ತಿದ್ದು. ಈಗ ಉಪ್ಪಿಟ್ಟಿಗೆಲ್ಲಾ ಬೆಲೆಯೇ ಇಲ್ಲ, ಉಪ್ಪಿಟ್ಟು ಈಗ ಬರೀ ಉಪ್ಪುಪ್ಪಾಗಿದೆ ಎಂದು ಬೇಸರ ಹೊರಹಾಕಿದರು. ಪ್ರಜ್ಞಾವಂತ ಪದವೀಧರರು ನನಗೆ ಮತ ಕೊಟ್ಟು ಮೇಲ್ಮನೆಗೆ ಕಳುಹಿಸಬೇಕಿತ್ತು. ನಾನು ಸೋತರೇ ನನಗೇನು ಬೇಸರವಿಲ್ಲ, ಜನರಿಗೇ ನಷ್ಟ, ಜನಪರವಾಗಿ ಹೋರಾಟ ಮಾಡುವ ವ್ಯಕ್ತಿಗೆ ಮಣೆ ಹಾಕದಿದ್ದರೇ ಅವರಿಗೇ ನಷ್ಟಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹಣ, ಜಾತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ:
ಇಂದು ಎಲ್ಲಾ ಚುನಾವಣೆಗಳೂ ಹಣ ಮತ್ತು ಜಾತಿಯ ಆಧಾರದ ಮೇಲೆ ನಡೆಯುತ್ತಿದ್ದು ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ. ಶಾಸನ ಸಭೆಗಳಾದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳು ಮಾರಾಟಕ್ಕಿವೆ ಎಂದು ವ್ಯಂಗ್ಯವಾಡಿದರು.
ಐದು ಬಾರಿ ಶಾಸಕನಾಗಿರುವ ನಾನು ಚುನಾವಣೆ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಹಣ, ಹೆಂಡ, ಊಟ, ನೀರು ಏನನ್ನೂ ಕೊಡದೆ ಮತ ಕೇಳುತ್ತಿದ್ದೇನೆ. ನನ್ನನ್ನು ಗೆಲ್ಲಿಸಿದರೆ ಮತದಾರರ ಗೌರವ ಹೆಚ್ಚಾಗುತ್ತೆ. ಆದ್ದರಿಂದ ಪದವೀಧರ ಮತದಾರರು ತಮ್ಮ ಪ್ರಥಮ ಪ್ರಾಶಸ್ತ್ಯದ ಮತ ಕೊಡುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬೆಂಗಳೂರು ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣ್, ಬೀರಪ್ಪ, ಅಜಯ್, ಪಾರ್ಥಸಾರಥಿ ಇದ್ದರು.
Vatal Nagaraj: ಹಿಂದಿ ಭಾಷೆ ಹೇರಿಕೆ ವಿರುದ್ಧ ವಾಟಾಳ್ ಪ್ರತಿಭಟನೆ
ನನ್ನನ್ನು ಗೆಲ್ಲಿಸಿದರೆ ರಾಜ್ಯಕ್ಕೂ ಗೌರವ ಬರುತ್ತೆ
ಗುಂಡ್ಲುಪೇಟೆ: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ನಾನೇನು ಸೋತ್ರೆ ನೋವಾಗಲ್ಲ, ನೀವು ಸೋಲಿಸ್ತೀರಲ್ಲ ಅದು ಒಳ್ಳೆಯದಲ್ಲ ಎಂದು ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಹಾಗೂ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ಮತದಾರರನ್ನೇ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ನನ್ನ ಗೆಲ್ಸಿ ನೀವು ನೂರ ಜನರನ್ನು ಗೆಲ್ಲಿಸಿದಂಗಾಗುತ್ತೇ, ನಿಮಗೂ ಹಾಗೂ ರಾಜ್ಯಕ್ಕೂ ಗೌರವ ಶಕ್ತಿ ಬರುತ್ತೇ, ಆ ಕೆಲಸ ಪದವೀಧರರು ಮಾಡಬೇಕು ಎಂದು ಮನವಿ ಮಾಡಿದರು.
ಪದವೀಧರ ಕ್ಷೇತ್ರದಲ್ಲಿ ನಿಮ್ಮ ಪರ ಹೋರಾಟ ಮಾಡೋರು ಯಾರಿದ್ದಾರೆ. ನಾನು ತೀವ್ರತರ ಹೋರಾಟ ಮಾಡ್ತೇನೆ ಆದರೆ ಈಗ ಯಾರೋ ಕಾಂಗ್ರೆಸ್, ಜೆಡಿಎಸ್ಸೋ ನಿಂತಿರುವ ಗೆಲ್ಸೀ ಏನ್ ಮಾಡ್ಬೇಕು ಅನ್ಕೋಂಡಿದ್ದೀರಾ? ಯಾವ ಉದ್ದೇಶಕ್ಕೆ ಗೆಲ್ಸಬೇಕು? ಕಾರಣವೇನು? ಎಂದು ಪ್ರಶ್ನಿಸಿದರು.
ಕುದುರೆ ವ್ಯಾಪಾರ:
ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಕುದುರೆ ವ್ಯಾಪಾರದಂತಾಗಿವೆ. ಪದವೀಧರ ಚುನಾವಣೆಯಲ್ಲಿ ಹಾಗೇ ಮಾಡಿದರೆ ಪದವೀಧರರು ತಮ್ಮ ಮೇಲಿರುವ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದರು. ಸಮಾಜದ ತಾಯಿ ಬೇರಾಗಿರುವ ಪದವೀಧರರೇ ಈ ರೀತಿಯಾದರೆ ಬಲು ಕಷ್ಟ. ಅದರ ಬದಲು ಚಿಂತನೆ ರೀತಿಯಲ್ಲಿ ನನ್ನನ್ನು ಗೆಲ್ಲಿಸಿ ಗೌರವ ಬರುತ್ತೆ. ಇಲ್ಲವಾದರೆ ಸಮಾಜದಲ್ಲಿ ಕೆಟ್ಟಸಂದೇಶ ಬರುತ್ತದೆ ಎಂದರು.
Ban on MES: ಕರ್ನಾಟಕ ಬಂದ್ ಕೈಬಿಡಿ ಎಂದ ಸಿಎಂ: ಮಾಡಿಯೇ ಸಿದ್ಧ: ವಾಟಾಳ್
ಜಾತಿ, ಹಣವಿಲ್ಲದೇ ಚುನಾವಣೆ ಹೇಗಾಗುತ್ತದೆ ಎಂದು ಹೇಳಲಾಗುತ್ತಿದೆ. ಪಾರ್ಟಿಗಳೇ ಈಗ ಹದಗೆಟ್ಟಿವೆ. ಹರಾಜು ಮಾಡಲು ಮಾರ್ಕೆಟ್ಟಾಇದು ಹೇಳಿ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ಶಾಸ್ತಿ್ರ, ಮಲ್ಲರಾಧ್ಯ, ಸಿ.ನರಸಿಂಹನ್ ವಿಧಾನ ಪರಿಷತ್‌ನಲ್ಲಿದ್ದಾಗ ತುಂಬ ಘನತೆ, ಗೌರವವಿತ್ತು. ಆದರೀಗ ಭ್ರಷ್ಟಚಾರದ ವಿರುದ್ಧ ವಿದ್ದರೂ ನನಗೆ ಸೋಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವ ಪಾರ್ಟಿ ಆದರೂ ಟಿಕೆಟ್ ಕೊಡ್ತಾರೆ. ಬದಲಾವಣೆ ಆಗಿದ್ದರೆ ಎರಡು ಬಾರಿ ಸಿಎಂ ಆಗ್ತಿದ್ದೆ. ನಾನು ಬದ್ಧತೆಯ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನಂತೆ ಕೆಚ್ಚು, ಗುಂಡಿಗೆ, ಧೈರ್ಯ ಇರೋ ಒಬ್ಬನನ್ನು ತೋರಿಸಿ ಎಂದರು.
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ 1.5 ಲಕ್ಷದಷ್ಟುಮತದಾರರಿದ್ದಾರೆ. ನಾನು ಗೆದ್ದರೆ ಇಡೀ ರಾಜ್ಯಕ್ಕೆ ಅನುಕೂಲ. ನಿಮಗೆ ಆನೆ ಬಲ ಬರುತ್ತದೆ. ವಕೀಲರು, ನಿರುದ್ಯೋಗಿಗಳಿಗೆ ಮಾಸಿಕ 10 ಸಾವಿರ ಭತ್ಯ ಕೊಡ್ಸೊ ಪ್ರಯತ್ನ ಮಾಡ್ತೇನೆ ಎಂಬ ಭರವಸೆ ನೀಡಿದರು. ಆದರೆ ರಾಜಕೀಯ ಪಕ್ಷದವರಿಂದ ಸಾಧ್ಯವಿಲ್ಲ. ಸೋಲಿಸಿ ನಷ್ಟಹೊಂದುವ ಬದಲು ಗೆಲ್ಲಿಸಿ ನಿಮಗೆ ಶಕ್ತಿ ಗೌರವ ಬರುತ್ತದೆ. ನಿಮ್ಮ ಪರ ನಾನು ಹೋರಾಟ ಮಾಡ್ತೇನೆ. ಜಾತಿ, ಹಣ ಒಳ್ಳೆದಲ್ಲ. ಇದು ಅಪರಾಧ ಎಂಬುದು ನನ್ನ ಅಭಿಪ್ರಾಯ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪಾರ್ಥಸಾರಥಿ,ಅಜಯ್,ನಾರಾಯಣಸ್ವಾಮಿ,ಬೀರಪ್ಪ,ಮಹೇಶ ಹಾಜರಿದ್ದರು.