'ಆಡಿಯೋ ಪ್ರಕರಣ SITತನಿಖೆಯಾದ್ರೆ ಯಡಿಯೂರಪ್ಪಗೇಕೆ ಹೆದರಿಕೆ'?

By Web Desk  |  First Published Feb 13, 2019, 3:39 PM IST

ಆಡಿಯೋ ಕ್ಲಿಪ್ ಪ್ರಕರಣವನ್ನು ಎಸ್​ಐಟಿ ತನಿಖೆಗೆ ಬಿಜೆಪಿ ಬಿಜೆಪಿ ವಿರೋಧಿಸುತ್ತಿದೆ. ಆದ್ರೆ ಇದಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು ಹೀಗೆ.


ಬೆಂಗಳೂರು, (ಫೆ.13) : ಪ್ರಸಕ್ತ ರಾಜ್ಯ ರಾಜಕಾರಣ ಹದಗೆಟ್ಟು ಹೋಗಿದೆ. ಆಪರೇಷನ್ ಕಮಲ ಆಡಿಯೋ ಕ್ಲಿಪ್ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.

ಇಂದು (ಬುಧವಾರ) ಸಹ ಕಲಾಪ ಆಡಿಯೋ ಕೋಲಾಹಲಕ್ಕೆ ಬಲಿಯಾಯ್ತು. ಆಡಿಯೋ ತನಿಖೆಯನ್ನು ಎಸ್‌ಐಟಿಗೆ ವಹಿಸಿಲು ಸರ್ಕಾರ ನಿರ್ಧರಿಸಿದರೆ, ಮತ್ತೊಂದೆಡೆ ಬಿಜೆಪಿ ಎಸ್‌ಐಟಿ ತನಿಖೆ ಬೇಡ ಅಂತಿದೆ.

Latest Videos

undefined

‘ಆಡಿಯೋ ಬಾಂಬ್‌’ ಪ್ರಕರಣ: ಸದನ ನಾಯಕರ ಸಂಧಾನ ಸಭೆ ವಿಫಲ!

ಎಸ್​ಐಟಿ ತನಿಖೆ ವಿರೋಧಿಸಿ ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಇಂದು ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡಿದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಕಲಾಪವನ್ನು ಮಧ್ಯಾಹ್ನ 3.30ರ ವರೆಗೆ ಮುಂದೂಡಲಾಯಿತು. 

ನಂತರ ಸದನದಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ,  'ಯಡಿಯೂರಪ್ಪ ಅವರಿಗೆ ತಾವು ತಪ್ಪು ಮಾಡಿರುವುದು ಗೊತ್ತು. ಅದಕ್ಕಾಗಿಯೇ ತನಿಖೆಗೆ ಹೆದರಿಕೆ. ಹೀಗಾಗಿಯೇ ವಿಶೇಷ ತನಿಖಾ ದಳ ರಚನೆಯನ್ನು ವಿರೋಧಿಸುತ್ತಿದ್ದಾರೆ' ಎಂದು ತಿವಿದರು. 

ಆಪರೇಷನ್​ ಕಮಲದ ಆಡಿಯೋ ತನಿಖೆ ವಿಚಾರವಾಗಿ ನಾವು ಒಂದು ನಿಲುವು ತಳೆದಿದ್ದೇವೆ. ಎಸ್​ಐಟಿ ತನಿಖೆಯಾಗಬೇಕೆಂಬುದು ನಮ್ಮ ನಿಲುವು. ಆಡಿಯೋದಲ್ಲಿರುವುದು ಯಡಿಯೂರಪ್ಪ ಅವರ ಧ್ವನಿ ಎಂಬುದು ಸ್ಪಷ್ಟವಾಗಿದೆ. 

ಎಸ್ಐಟಿಗೆ ಯಡಿಯೂರಪ್ಪ ಯಾಕೆ ಹೆದರಿಕೊಳ್ಳುತ್ತಿದ್ದಾರೆ. ಅವರಿಗೆ ತಾವು ತಪ್ಪು ಮಾಡಿರುವುದು ಗೊತ್ತಿದೆ. ಆದ್ದರಿಂದಲೇ ಹೆದರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಯಡಿಯೂರಪ್ಪ ಮತ್ತು ಶಿವನಗೌಡ ನಾಯಕ್​ ಮಾಡಿರುವುದು ಗಂಭೀರ ಅಪರಾಧ. ಶರಣಗೌಡ ತನ್ನನ್ನು ಭೇಟಿಯಾಗಿದ್ದರು ಎಂದು ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಯಡಿಯೂರಪ್ಪ ತಮ್ಮ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದರು.

click me!