ಟಿಕೆಟ್ ಫೈಟ್: ಕಾಂಗ್ರೆಸ್‌ ಸಂಸದ ಜೆಡಿಎಸ್‌ ಅಭ್ಯರ್ಥಿ ಆಗ್ತಾರಾ?

By Web Desk  |  First Published Feb 13, 2019, 2:07 PM IST

ಒಕ್ಕಲಿಗರು, ವೀರಶೈವರು ಸಮಪ್ರಮಾಣದಲ್ಲಿರುವ ಹಾಗೂ ಅಹಿಂದ ವರ್ಗಗಳು ತುಸು ಹೆಚ್ಚಿನ ಸಂಖ್ಯೆಯಲ್ಲಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳ ಪ್ರಾಬಲ್ಯವಿದೆ. ಈ ಬಾರಿ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟು, ಕ್ಷೇತ್ರ ಜೆಡಿಎಸ್ ಪಾಲಾಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಹಾಲಿ ಸಂಸದ ಮುದ್ದಹನುಮೇಗೌಡ ಜೆಡಿಎಸ್‌ಗೆ ಸೇರಿ ಅಲ್ಲಿಂದ ಅಭ್ಯರ್ಥಿಯಾಗುತ್ತಾರೆ ಎನ್ನಲಾಗುತ್ತಿದೆ. ಈ ನಡುವೆ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ನಾಯಕರು ಕಾಂಗ್ರೆಸ್ ಹಾಗೂ ಬಿಜೆಪಿ ಎರಡರಲ್ಲೂ ಟಿಕೆಟ್‌ಗೆ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.


ಮಹಾಭಾರತ ಸಂಗ್ರಾಮ: ತುಮಕೂರು ಕ್ಷೇತ್ರ

ತುಮ​ಕೂ​ರು[ಫೆ.13]: ಬೆಂಗ​ಳೂ​ರಿನ ಭವಿ​ಷ್ಯದ ಉಪ​ನ​ಗರಿ ಹಾಗೂ ರಾಜ್ಯ​ದಲ್ಲೇ ಅತಿ ಹೆಚ್ಚು ಜಿಲ್ಲಾ ಪಂಚಾಯಿತಿ ಕ್ಷೇತ್ರ​ಗ​ಳನ್ನು ಒಳ​ಗೊಂಡಿ​ರುವ, ಎರ​ಡನೇ ಅತಿ ದೊಡ್ಡ ಜಿಲ್ಲೆ​ಯಾ​ಗಿ​ರುವ ತುಮ​ಕೂರು ಲೋಕ​ಸಭಾ ಕ್ಷೇತ್ರ ಮೂಲತಃ ಕಾಂಗ್ರೆ​ಸ್‌ನ ಭದ್ರ​ಕೋ​ಟೆ​ಯಾಗಿತ್ತು. ಆದರೆ ನಿಧಾ​ನಕ್ಕೆ ಈ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಆರಂ​ಭ​ಗೊಂಡಿದೆ. ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾ​ಹಣಿ ನಡೆ​ಯುವುದು ನಿಚ್ಚಳವಾಗಿದೆ.

Tap to resize

Latest Videos

ಟಿಕೆಟ್ ಫೈಟ್: ಸಿದ್ದು ಸ್ಪರ್ಧೆ ವದಂತಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಸಂಚಲನ

ಕಳೆದ ಚುನಾ​ವ​ಣೆ​ಯ​ಲ್ಲಿ ಕಾಂಗ್ರೆ​ಸ್‌ನ ಹಾಲಿ ಸಂಸದ ಮುದ್ದ​ಹ​ನು​ಮೇ​ಗೌಡ ಅವರು ಬಿಜೆ​ಪಿ​ಯಿಂದ ಸ್ಪರ್ಧಿ​ಸಿದ್ದ ಜಿ.ಎಸ್‌. ಬಸ​ವ​ರಾಜು ವಿರುದ್ಧ ಅಧಿಕ ಮತ​ಗಳ ಅಂತ​ರ​ದಿಂದ ಜಯ​ ಸಾ​ಧಿ​ಸಿ​ದ್ದರು. ಜೆಡಿ​ಎ​ಸ್‌​ನಿಂದ ಸ್ಪರ್ಧಿ​ಸಿದ್ದ ಎ. ಕೃಷ್ಣಪ್ಪ ಹೀನಾ​ಯ​ವಾಗಿ ಪರಾ​ಭ​ವ​ಗೊಂಡಿ​ದ್ದರು. ಈ ಬಾರಿ ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ಅಭ್ಯ​ರ್ಥಿ​ಯಾಗಿ ಮುದ್ದ​ಹ​ನು​ಮೇ​ಗೌಡ ಸ್ಪರ್ಧಿ​ಸು​ವುದು ಬಹು​ತೇಕ ಖಚಿ​ತ. ಜೆಡಿ​ಎಸ್‌ ಪಕ್ಷ ಈ ಸಲ ತನಗೆ ತುಮ​ಕೂರು ಲೋಕ​ಸಭಾ ಕ್ಷೇತ್ರ​ವನ್ನು ಬಿಟ್ಟು​ಕೊ​ಡು​ವಂತೆ ಪಟ್ಟು ಹಿಡಿ​ದಿದೆ. ಆದರೆ ಉಪ​ ಮು​ಖ್ಯ​ಮಂತ್ರಿ ಪ್ರತಿ​ನಿ​ಧಿ​ಸುವ ವಿಧಾನಸಭಾ ಕ್ಷೇತ್ರ ಇದೇ ಜಿಲ್ಲೆಯಲ್ಲಿರುವುದರಿಂದ ಹಾಗೂ ಪರ​ಮೇ​ಶ್ವರ್‌ ಅವ​ರಿಗೆ ಮುದ್ದ​ ಹ​ನು​ಮೇ​ಗೌಡ ಅತ್ಯಂತ ಆತ್ಮೀ​ಯ​ರಾ​ಗಿ​ರುವುದ​ರಿಂದ ಈ ಕ್ಷೇತ್ರವನ್ನು ಕಾಂಗ್ರೆಸ್‌ ಕೇಳುತ್ತಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾ​ರ​ವಾ​ಗಿಲ್ಲ.

ಟಿಕೆಟ್ ಫೈಟ್: ಉಗ್ರಪ್ಪಗೆ ಮೈತ್ರಿ ಟಿಕೆಟ್‌ ಖಚಿತ, ಬಿಜೆಪಿಯಿಂದ ಯಾರೆಂಬುದೇ ಅನಿಶ್ಚಿತ!

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಒಂದು ವೇಳೆ ಈ ಕ್ಷೇತ್ರ​ವೇ​ನಾ​ದರೂ ಜೆಡಿ​ಎಸ್‌ ಪಾಲಾ​ದರೆ ಕಾಂಗ್ರೆಸ್ಸಿನ ಮುದ್ದ​ಹ​ನು​ಮೇ​ಗೌಡ ಅವರು ಜೆಡಿ​ಎ​ಸ್‌ಗೆ ಪಕ್ಷಾಂತರ ಮಾಡಿ, ಆ ಪಕ್ಷ​ದಿಂದ ಸ್ಪರ್ಧಿ​ಸುವ ಸಾಧ್ಯ​ತೆಯೂ ಇದೆ ಎನ್ನ​ಲಾ​ಗು​ತ್ತಿದೆ. ಹೀಗಾಗಿ ಏನೇ ಆದರೂ ಹಾಲಿ ಸಂಸದ ಮುದ್ದ​ ಹ​ನು​ಮೇ​ಗೌಡ ಕಾಂಗ್ರೆಸ್‌- ಜೆಡಿ​ಎಸ್‌ ಅಭ್ಯ​ರ್ಥಿ​ಯಾ​ಗು​ವುದು ಖಚಿತ. ಇನ್ನು ಬಿಜೆ​ಪಿ​ಯಲ್ಲಿ ಕಳೆದ ಬಾರಿ ಪರಾ​ಜಿತ ಅಭ್ಯರ್ಥಿ ಜಿ.ಎಸ್‌. ಬಸ​ವ​ರಾಜು ಮತ್ತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿ​ಯಾ​ಗಿ​ದ್ದಾರೆ. ಆದರೆ ಮಾಜಿ ಶಾಸಕ ಸುರೇ​ಶ​ಗೌಡ, ವಿಧಾನ ಪರಿ​ಷತ್‌ ಮಾಜಿ ಸದಸ್ಯ ಎಂ.ಆರ್‌. ಹುಲಿ​ನಾ​ಯ್ಕರ್‌, ಮಾಜಿ ಸಚಿವ ಸೊಗಡು ಶಿವಣ್ಣ ಟಿಕೆ​ಟ್‌ಗಾಗಿ ಪೈಪೋಟಿ ನಡೆ​ಸಿ​ದ್ದಾರೆ.

ಬಿಜೆಪಿ ಬಲ ಹೆಚ್ಚು:

ತುಮಕೂರು ಜಿಲ್ಲೆಯ 11 ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ ಬಿಜೆಪಿ ಮತ್ತು ಜೆಡಿ​ಎಸ್‌ನಲ್ಲಿ ತಲಾ 4 ಶಾಸ​ಕರು ಹಾಗೂ ಕಾಂಗ್ರೆಸ್‌ನಲ್ಲಿ 3 ಶಾಸ​ಕರು ಇದ್ದಾರೆ. ಆದರೆ 11 ವಿಧಾ​ನ​ಸಭಾ ಕ್ಷೇತ್ರ​ಗಳ ಶಿರಾ ಮತ್ತು ಪಾವ​ಗಡ ಚಿತ್ರ​ದುರ್ಗ ಲೋಕ​ಸಭೆ ಕ್ಷೇತ್ರಕ್ಕೆ ಹಾಗೂ ಕುಣಿ​ಗಲ್‌ ಬೆಂಗ​ಳೂರು ಗ್ರಾಮಾಂತರ ಕ್ಷೇತ್ರಕ್ಕೆ ಸೇರಿವೆ. ಹೀಗಾಗಿ ತುಮ​ಕೂರು ಲೋಕ​ಸಭಾ ಕ್ಷೇತ್ರ ವ್ಯಾಪ್ತಿ​ಗೆ ಬರು​ವುದು 8 ವಿಧಾ​ನ​ಸಭಾ ಕ್ಷೇತ್ರ. ಈ ಪೈಕಿ ಬಿಜೆಪಿ 4ರಲ್ಲಿ ಪ್ರಾಬಲ್ಯ ಸಾಧಿ​ಸಿದೆ. ಇನ್ನು ಜೆಡಿ​ಎಸ್‌ 3 ಕ್ಷೇತ್ರ​ಗ​ಳಲ್ಲಿ ಹಾಗೂ ಕಾಂಗ್ರೆಸ್‌ 1 ಕ್ಷೇತ್ರ​ದಲ್ಲಿ ಶಾಸ​ಕ​ರನ್ನು ಹೊಂದಿದೆ. ಹೀಗಾಗಿ ಲೋಕ​ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬಲ ಕೊಂಚ ಅಧಿಕವಾಗಿದೆ.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಗುಬ್ಬಿ​ಯಿಂದ ಜೆಡಿ​ಎಸ್‌ ಶಾಸ​ಕ​ರಾಗಿ ಆಯ್ಕೆ​ಯಾ​ಗಿರುವ ಎಸ್‌.​ಆರ್‌. ಶ್ರೀನಿ​ವಾಸ್‌ ಹಾಗೂ ಪಾವ​ಗ​ಡ​ದ ಕಾಂಗ್ರೆಸ್‌ ಶಾಸ​ಕ​ರಾ​ಗಿ​ರು​ವ ವೆಂಕ​ಟ​ರ​ಮ​ಣಪ್ಪ ಸಚಿ​ವ​ರಾ​ಗಿ​ದ್ದಾರೆ. ಕೊರ​ಟ​ಗೆ​ರೆ​ಯಿಂದ ಗೆದ್ದಿ​ರುವ ಡಾ. ಜಿ. ಪರ​ಮೇ​ಶ್ವರ್‌ ಉಪ​ಮು​ಖ್ಯ​ಮಂತ್ರಿ​ ಆ​ಗಿ​ರು​ವು​ದ​ರಿಂದ ಜಿಲ್ಲೆಯ ಮಟ್ಟಿಗೆ 3 ಮಂದಿ ಸಚಿವರು ಇದ್ದಾರೆ.

ಆಕಾಂಕ್ಷಿ​ಗಳು ಹೆಚ್ಚು​ತ್ತಿ​ದ್ದಾರೆ:

ಹಾಲಿ ಸಂಸ​ದ​ರಿಗೆ ಟಿಕೆಟ್‌ ನೀಡು​ವುದು ಖಚಿತ ಎಂದು ಕಾಂಗ್ರೆಸ್‌ ಮುಖಂಡರು ಹೇಳು​ತ್ತಿ​ರುವ ಬೆನ್ನಲ್ಲೇ ಮಾಜಿ ಸಚಿವ ಟಿ.ಬಿ. ಜಯ​ಚಂದ್ರ ಹಾಗೂ ಮಾಜಿ ಶಾಸಕ, ಹಾಲಿ ಅಪೆಕ್ಸ್‌ ಅಧ್ಯಕ್ಷ ಕೆ.ಎನ್‌. ರಾಜಣ್ಣ ತಾವು ಕೂಡ ಕಾಂಗ್ರೆ​ಸ್‌ನ ಟಿಕೆಟ್‌ ಆಕಾಂಕ್ಷಿ​ಗಳು ಎಂದು ಬಹಿ​ರಂಗ​ವಾಗಿ ಹೇಳು​ತ್ತಿ​ದ್ದಾರೆ. ಇನ್ನು ಬಿಜೆ​ಪಿ​ಯಲ್ಲೂ ಆಕಾಂಕ್ಷಿ​ಗಳ ಪಟ್ಟಿದೊಡ್ಡ​ದಿದೆ. ಹೀಗಾಗಿ ಬಿಜೆ​ಪಿ​ಯ​ಲ್ಲಿ ವರಿ​ಷ್ಠರು ಯಾರಿಗೆ ಟಿಕೆಟ್‌ ಅನ್ನು ಅಂತಿ​ಮ​ಗೊ​ಳಿ​ಸು​ತ್ತಾರೆ ಎಂಬ​ ಕು​ತೂ​ಹಲ ಹೆಚ್ಚಿದೆ.

ಟಿಕೆಟ್ ಫೈಟ್: ಬಿಜೆಪಿ ಭದ್ರಕೋಟೆ ಕಸಿಯಲು ಕಾಂಗ್ರೆಸ್‌ ಕಸರತ್ತು!

ಮುದ್ದ​ಹ​ನು​ಮೇ​ಗೌ​ಡ​ರಿಗೆ ಸುಲ​ಭದ ತುತ್ತೆ?:

ಕ್ಷೇತ್ರದಲ್ಲಿ ಒಕ್ಕ​ಲಿ​ಗರು ಹಾಗೂ ವೀರ​ಶೈವ ಲಿಂಗಾ​ಯ​ತರು ಸಮ​ ಪ್ರ​ಮಾ​ಣ​ದ​ಲ್ಲಿ​ದ್ದರೆ, ಅಹಿಂದ ವರ್ಗ​ಗಳ ಮತ​ಗಳು ತುಸು ಹೆಚ್ಚಿ​ವೆ. ಕಳೆದ ಬಾರಿ ಜೆಡಿ​ಎ​ಸ್‌​ನಿಂದ ಸ್ಪರ್ಧಿ​ಸಿದ್ದ ಅಂದಿನ ಜೆಡಿ​ಎಸ್‌ ರಾಜ್ಯಾ​ಧ್ಯಕ್ಷ ಎ. ಕೃಷ್ಣಪ್ಪ ವಿರುದ್ಧ ಪಕ್ಷದ ಮುಖಂಡರು ಹಾಗೂ ಕಾರ್ಯ​ಕ​ರ್ತರು ಅಸ​ಮಾ​ಧಾ​ನ​ಗೊಂಡಿ​ದ್ದರು. ಹೊರ​ಗ​ಡೆ​ಯಿಂದ ಅಭ್ಯ​ರ್ಥಿ​ಯನ್ನು ಕರೆದು ತರು​ವುದು ಎಷ್ಟುಸರಿ ಎಂದು ಬಹಿ​ರಂಗ​ವಾಗಿ ಪ್ರಶ್ನಿ​ಸಿ​ದ್ದರು. ಅಲ್ಲದೇ ಕಳೆದ 35 ವರ್ಷ​ಗ​ಳಿಂದ ಒಕ್ಕ​ಲಿ​ಗರು ಈ ಕ್ಷೇತ್ರ​ದಲ್ಲಿ ಜಯ​ಸಾ​ಧಿ​ಸಿಲ್ಲ ಎಂಬ ಕೂಗು ಎದ್ದಿತ್ತು. ಈ ಮಧ್ಯೆ ಜೆಡಿ​ಎಸ್‌ ಹೊರ​ಗ​ಡೆ​ಯಿಂದ ಅಭ್ಯ​ರ್ಥಿ ತಂದು ಹೂಡಿದ ಕಾರ​ಣ​ದಿಂದ ಸಿಟ್ಟಾದ ಜೆಡಿ​ಎ​ಸ್‌ನ ಕಾರ್ಯ​ಕ​ರ್ತರು ಬಹಿ​ರಂಗ​ವಾಗಿ ಒಕ್ಕ​ಲಿಗ ಸಮು​ದಾ​ಯದ ಮುದ್ದ​ಹ​ನು​ಮೇ​ಗೌ​ಡ​ರನ್ನು ಬೆಂಬ​ಲಿ​ಸಿ​ದ್ದರು. ಹೀಗಾಗಿ ಅವರ ಜಯ ಸುಲ​ಭ​ವಾ​ಯಿತು. ಇನ್ನು ಸಂಸ​ತ್‌​ನಲ್ಲಿ ಜಿಲ್ಲೆಯ ಪರ​ವಾಗಿ ಪ್ರಶ್ನೆ​ಗ​ಳನ್ನು ಕೇಳಿ ಮುದ್ದ​ ಹ​ನು​ಮೇ​ಗೌ​ಡರು ಗಮ​ನ​ ಸೆ​ಳೆ​ದಿದ್ದೂ ಉಂಟು. ಆದರೆ ಕಟ್ಟ​ಕ​ಡೆಯ ಕಾರ್ಯ​ಕ​ರ್ತ​ನನ್ನು ಮುದ್ದ​ಹ​ನು​ಮೇ​ಗೌ​ಡರು ವಿಶ್ವಾ​ಸಕ್ಕೆ ತೆಗೆ​ದು​ಕೊ​ಳ್ಳ​ಲಿಲ್ಲ ಎಂಬ ಆರೋ​ಪವಿದೆ.

ಟಿಕೆಟ್ ಫೈಟ್ : ಚಿಕ್ಕಬಳ್ಳಾಪುರದಲ್ಲಿ 2 ಬಾರಿ ಗೆದ್ದಿದ್ದರೂ ಮೊಯ್ಲಿಗೆ ಟಿಕೆಟ್ ಕಗ್ಗಂಟು!

2013ರಲ್ಲಿ ನಡೆದ ವಿಧಾ​ನಸಭಾ ಚುನಾ​ವ​ಣೆ​ಯಲ್ಲಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಒಂದು ಸ್ಥಾನ ಮಾತ್ರ. ಆದರೆ ಈ ಬಾರಿ ತುಮ​ಕೂರು ಲೋಕ​ಸಭಾ ಕ್ಷೇತ್ರದ 8 ವಿಧಾ​ನ​ಸಭಾ ಕ್ಷೇತ್ರ​ಗಳ ಪೈಕಿ ಬಿಜೆಪಿ ನಾಲ್ಕ​ರಲ್ಲಿ ಗೆಲುವು ಸಾಧಿ​ಸಿ​ರು​ವು​ದ​ರಿಂದ ಸಹ​ಜ​ವಾಗಿ ಹುಮ್ಮ​ಸ್ಸಿ​ನ​ಲ್ಲಿದೆ. ಇದು ಬಿಜೆ​ಪಿಗೆ ಅನು​ಕೂ​ಲ​ವಾ​ಗ​ಬ​ಹುದು.

ಕಳೆದ ಮೂರು ವಿಧಾ​ನ​ಸಭಾ ಚುನಾ​ವ​ಣೆ​ಗಳಲ್ಲೂ ಜೆಡಿ​ಎಸ್‌ ಪಾರು​ಪತ್ಯ ಮೆರೆ​ದಿದೆ. ಆದರೆ ಲೋಕ​ಸ​ಭೆ​ಯಲ್ಲಿ ಒಮ್ಮೆ ಮಾತ್ರ ಹಿಂದಿನ ಜನತಾದಳ ಅಭ್ಯರ್ಥಿ ಗೆದ್ದಿ​ದ್ದರು. ಈ ಬಾರಿ ಮತ್ತೆ ಕ್ಷೇತ್ರ​ವನ್ನು ಕಾಂಗ್ರೆ​ಸ್‌ಗೆ ಬಿಟ್ಟು​ಕೊ​ಟ್ಟರೆ ಪಕ್ಷಕ್ಕೆ ನಷ್ಟಎಂಬ ಅಭಿ​ಪ್ರಾ​ಯ​ಗಳು ಜೆಡಿ​ಎ​ಸ್‌​ನ​ಲ್ಲಿ ಕೇಳಿ ಬರು​ತ್ತಿವೆ. ಅಲ್ಲದೇ ಜೆಡಿ​ಎ​ಸ್‌​ನ​ಲ್ಲೂ ಆಕಾಂಕ್ಷಿ​ಗಳು ಹೆಚ್ಚಿ​ದ್ದಾರೆ. ಹೀಗಾಗಿ ಮೂರು ಪಕ್ಷ​ಗ​ಳಲ್ಲೂ ಕೂಡ ಸಣ್ಣ ಭಿನ್ನಾ​ಭಿ​ಪ್ರಾಯ ಇದ್ದು ಇದರ ಲಾಭ ಯಾರಿಗೆ ಆಗು​ತ್ತದೆ ಎಂಬು​ದನ್ನು ಕಾದು ನೋಡ​ಬೇ​ಕಾ​ಗಿದೆ.

ಟಿಕೆಟ್ ಫೈಟ್ : ಹಾಸನದಲ್ಲಿ ಪ್ರಜ್ವಲ್‌ ಎದುರು ಬಿಜೆಪಿ ಸ್ಪರ್ಧಿ ಯಾರು..?

8 ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ವರು ಬಿಜೆಪಿ ಶಾಸಕರು

ತುಮಕೂರು ಜಿಲ್ಲೆಯಲ್ಲಿ 11 ವಿಧಾ​ನ​ಸಭಾ ಕ್ಷೇತ್ರ​ಗಳು ಇವೆ. ಆ ಪೈಕಿ ಶಿರಾ, ಪಾವಗಡ ಕ್ಷೇತ್ರಗಳು ಚಿತ್ರದುರ್ಗ ಹಾಗೂ ಕುಣಿಗಲ್‌ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವುದರಿಂದ ತುಮಕೂರು ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ಕ್ಷೇತ್ರಗಳು ಇವೆ. ಆ ಪೈಕಿ 4 ಕ್ಷೇತ್ರಗಳಲ್ಲಿ (ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಹಾಗೂ ತುಮಕೂರು ನಗರ) ಬಿಜೆಪಿ, 3ರಲ್ಲಿ (ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಮಧುಗಿರಿ) ಜೆಡಿಎಸ್‌ ಹಾಗೂ ಕೊರಟಗೆರೆಯಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ.

ಟಿಕೆಟ್ ಫೈಟ್: ಬೆಂಗಳೂರು ಉತ್ತರದಲ್ಲಿ ದೇವೇಗೌಡ V/S ಡಿವಿಎಸ್ V/S ರಮ್ಯಾ?

ಇಲ್ಲಿನ ಸಂಸದ ಲೋಕಸಭೆ ಉಪ ಸ್ಪೀಕರ್‌ ಆಗಿದ್ದರು

1991ರಲ್ಲಿ ನಡೆದ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ತುಮ​ಕೂರು ಕ್ಷೇತ್ರ​ದಿಂದ ಬಿಜೆಪಿ ಅಭ್ಯ​ರ್ಥಿ​ಯಾಗಿ ಗೆಲುವು ಸಾಧಿ​ಸಿದ್ದ ಎಸ್‌. ಮಲ್ಲಿ​ಕಾ​ರ್ಜು​ನಯ್ಯ ಅವ​ರನ್ನು ಲೋಕಸಭೆಯ ಡೆಪ್ಯೂಟಿ ಸ್ಪೀಕರ್‌ ಆಗಿ ಆಯ್ಕೆ ಮಾಡ​ಲಾ​ಗಿತ್ತು. ಹೀಗಾಗಿ ಲೋಕ​ಸ​ಭೆ​ಯಲ್ಲಿ ತುಮ​ಕೂ​ರಿಗೆ ದೊಡ್ಡ ಗೌರವ ಸಿಕ್ಕಂತಾ​ಗಿತ್ತು.

ಟಿಕೆಟ್ ಫೈಟ್: ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ನಿಲ್ತಾರಾ? ನಿಖಿಲ್‌ಗೆ ಬಿಡ್ತಾರಾ?

ಯಾರ್ಯಾರು ಪೈಪೋಟಿ?

ಕಾಂಗ್ರೆಸ್‌: ಮುದ್ದಹನುಮೇಗೌಡ, ಟಿ.ಬಿ.ಜಯಚಂದ್ರ, ಕೆ.ಎನ್‌.ರಾಜಣ್ಣ

ಬಿಜೆಪಿ: ಜಿ.ಎಸ್‌.ಬಸವರಾಜು, ಸುರೇಶ್‌ಗೌಡ, ಎಂ.ಆರ್‌.ಹುಲಿನಾಯ್ಕರ್‌, ಸೊಗಡು ಶಿವಣ್ಣ

ಜೆಡಿ​ಎ​ಸ್‌- ಸುರೇ​ಶ್‌​ಗೌಡ

ಟಿಕೆಟ್ ಫೈಟ್: ಬೆಳಗಾವಿಯಲ್ಲಿ ಅಂಗಡಿ ವರ್ಸಸ್‌ ವಿವೇಕರಾವ್‌?

ಟಿಕೆಟ್ ಫೈಟ್: ಉತ್ತರ ಕನ್ನಡದಲ್ಲಿ ಹೆಗಡೆ ಓಟಕ್ಕೆ ದೇಶಪಾಂಡೆ ಹಾಕ್ತಾರಾ ತಡೆ?

click me!