ನಾನು ಮುಂದೆ ಇರ್ತಿನೋ ಇರಲ್ವೋ- ಕೊಬ್ಬರಿಗೆ ಶಾಶ್ವತ ಬೆಂಬಲ ಬೆಲೆ ಕೊಡ್ತಿನಿ: ಕುಮಾರಸ್ವಾಮಿ

By Sathish Kumar KHFirst Published Feb 12, 2023, 10:16 PM IST
Highlights

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಳೆ ಬೆಳೆಯುವ ರೈತರಿಗೆ 15 ಸಾವಿರ ರುಪಾಯಿ ಶಾಶ್ವತವಾಗಿ ಬೆಂಬಲ ಬೆಲೆ ಕೊಡುತ್ತೇನೆ. ಒಂದು ವೇಳೆ ಬೆಂಬಲ ಬೆಲೆ ಕೊಡದಿದ್ದರೆ ನಾನು ನಿಮಗೆ ಮುಖ ತೋರಿಸಲ್ಲ.

ಹಾಸನ (ಫೆ.12): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಳೆ ಬೆಳೆಯುವ ರೈತರಿಗೆ 15 ಸಾವಿರ ರುಪಾಯಿ ಬೆಂಬಲ ಬೆಲೆ ಕೊಡದಿದ್ದರೆ ನಾನು ನಿಮಗೆ ಮುಖ ತೋರಿಸಲ್ಲ. ನಾನು ಮುಂದೆ ಇರ್ತಿನೋ ಇರಲ್ವೋ. ಆದರೆ 2023ಕ್ಕೆ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ಶಾಶ್ವತವಾಗಿ ಬೆಂಬಲ ಬೆಲೆ ಕೊಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

ಹಾನಸ ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ತೆಂಗಿನ ಮರಗಳು ನುಸಿ ರೋಗದಿಂದ ನಾಶವಾಗಿದೆ ಎಂದು ಪ್ರತಿಭಟನೆ ಮಾಡಿ, ದೇವೇಗೌಡರನ್ನು ಕರೆಸಿಕೊಂಡು ಅವರಿಗೆ ಜ್ಯೂಸ್ ಕುಡಿಸಿದ್ದರು. ಆಗ ನರೇಂದ್ರಮೋದಿ, ಸಿದ್ರಾಮಣ್ಣ ಬಂದು ದುಡ್ಡು ಕೊಟ್ರಾ ಇಲ್ಲ. ದೇವೇಗೌಡರ ಮಗ ಕುಮಾರಸ್ವಾಮಿ ದುಡ್ಡು ಕೊಟ್ಟಿದ್ದು. ತೆಂಗಿನಮರ ನಾಶಕ್ಕೆ ಪರಿಹಾರ ನೀಡಿದ 180 ಕೋಟಿಯಲ್ಲಿ ರೂ.ನಲ್ಲಿ ಒಟ್ಟು 53 ಕೋಟಿ ರೂಪಾಯಿ ಹಣ ಅರಸೀಕೆರೆ, ಚನ್ನರಾಯಪಟ್ಟಣಕ್ಕೆ ಕೊಟ್ಟಿದ್ದೇನೆ ಎಂದರು.

Latest Videos

Assembly election: ಈ ಮಹಾನುಭಾವ ಜೆಡಿಎಸ್‌ ಮುಗಿಸಲು ಹೊರಟಿದ್ದ: ಕುಮಾರಸ್ವಾಮಿ ಆಕ್ರೋಶ

ರೈತರಿಗೆ 15 ಸಾವಿರ ರೂ. ಬೆಂಬಲ ಬೆಲೆ: ಇನ್ನು ರಾಜ್ಯದಲ್ಲಿ ಕೊಬ್ಬರಿ ಬೆಲೆ ಕುಸಿತ ಅಂತ ಅರಸೀಕೆರೆಯಲ್ಲಿ ಪ್ರತಿಭಟನೆ ಮಾಡಿದರು. ನಮ್ಮ ಪಕ್ಷದ ಬಾವುಟ ಹಿಡಿದುಕೊಂಡು ಹೋರಾಟ ಮಾಡಿದ್ರಾ ಇಲ್ಲ. ಅವರ ಹೋರಾಟಕ್ಕೆ ಬೊಮ್ಮಯಿ ದುಡ್ಡು ಕೊಟ್ಟಿದ್ದಾರಾ.? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಳೆ ಬೆಳೆಯುವ ರೈತರಿಗೆ 15 ಸಾವಿರ ರೂ. ಬೆಂಬಲ ಬೆಲೆ ಕೊಡದಿದ್ದರೆ ನಾನು ನಿಮಗೆ ಮುಖ ತೋರಿಸಲ್ಲ. ನಾನು ಮುಂದೆ ಇರ್ತಿನೋ ಇರಲ್ವೋ. ಆದರೆ 2023 ಕ್ಕೆ ಅಧಿಕಾರಕ್ಕೆ ಬಂದರೆ ಕೊಬ್ಬರಿಗೆ ಶಾಶ್ವತವಾಗಿ ಬೆಂಬಲ ಬೆಲೆ ಕೊಡ್ತಿನಿ ಎಂದು ಭರವಸೆ ನೀಡಿದರು.

ನಾರಾಯಣಗೌಡನ ವಿರುದ್ಧ 30 ಸಾವಿರ ಅಂತರದ ಗೆಲುವು: ಕೆ.ಆರ್ ಪೇಟೆಯಲ್ಲಿ ರೇವಣ್ಣ ಸ್ಪರ್ಧಿಸುತ್ತಾರೆ ಎಂಬ ವಿಚಾರಕ್ಕೆ ನಾರಾಯಗೌಡ ಹೇಳಿಕೆ ನೀಡಿದ್ದಾನೆ. ಅವ್ನು ಹೇಳ್ತಿದ್ದಾನೆ ರೇವಣ್ಣನೇ ಬರ್ಲಿ ಅವರಪ್ಪನೇ ಬರ್ಲಿ ಅಂತಾ. ದೇವೇಗೌಡರೇ ಬರ್ಲಿ ಕುಮಾರಸ್ವಾಮಿ ನೆ ಬರ್ಲಿ ರೇವಣ್ಣನೇ ಬರ್ಲಿ ಅಂತಿದ್ದಾರೆ. ಅಲ್ಲಿ ನಾವು ಬೇಕಾಗಿಲ್ಲ. ಈಗ ಘೋಷಿಸಿರೋ ಅಭ್ಯರ್ಥಿ ವಿರುದ್ಧ ಗೆದ್ದು ತೋರಿಸಲಿ. ಈಗ ನಿಲ್ಲಿಸಿರೋ ಅಭ್ಯರ್ಥಿಯೇ 30 ಸಾವಿರ ಹೆಚ್ಚು ಮತ ಹಾಕುತ್ತಾರೆ. ಇಲ್ಲಿಂದ ಬೇಳದಂತಹವರು ದೇವೇಗೌರನ್ನೇ ಪ್ರಶ್ನೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ. ದುಡ್ಡಿನ ಮದ, ಲೂಟಿ ಹೊಡೆದು ಮಾತನಾಡುತ್ತಿದ್ದಾರೆ. ಯಾವ ರೀತಿ ಎಂದರೆ ಯಾರಿಂದ ಬಂದರು ಅದನ್ನೆಲ್ಲಾ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ

ಹಾಸನ ರಾಜಕೀಯಕ್ಕೆ ಬರದಿದ್ದರೂ ಎಲ್ಲಾ ಗೊತ್ತಿದೆ: ಅಲ್ಲೊಬ್ಬ ಅರಸೀಕೆರೆಯಲ್ಲಿ‌ ರೇವಣ್ಣ ಒಬ್ಬ ಮಹಾನುಭಾವನ್ನ (ಶಿವಲಿಂಗೇಗೌಡ)  ಬೆಳೆಸಿದರು. ಅವ್ನು ದಿನಾ ಟೋಪಿ ಹಾಕೊಂಡೆ ಬರುತ್ತಾನೆ. ಇವತ್ತು ಅದಕ್ಕೆ ಇತಿಶ್ರೀ ಹಾಡಬೇಕಿದೆ. ಅದಕ್ಕಾಗಿ ಇಂದು ಅರಸೀಕೆರೆಗೆ ಬಂದಿದ್ದೇನೆ. ದೇವೇಗೌಡರ ಮುಖ ನೋಡಿ ಓಟು ಹಾಕ್ತಾರ ಎಂದು ಮಾತನಾಡಿದ್ದನ್ನೂ ನೋಡಿದ್ದೇನೆ. ದೇವೇಗೌಡರು ಇಲ್ಲ ಅಂದಿದ್ದರೆ ಇವರನ್ನ ಗುರುತಿಸುತ್ತಿದ್ದರು. 2004 ರಲ್ಲಿ ಸೋತಾಗ ರೆವಣ್ಣನವರು ರಾಜಕೀಯವಾಗಿ ಬೆಳೆಸಲು ಏನೆಲ್ಲಾ ಮಾಡಿದ್ದರು ಎನ್ನುವುದನ್ನು ನಾನು ನೋಡಿದ್ದೇನೆ. ನಾನು ಹಾಸನ ಜಿಲ್ಲೆಯ ರಾಜಕೀಯಕ್ಕೆ ಬರದಿದ್ದರೂ ಇಲ್ಲಿನ ಬಗ್ಗೆ ಎಲ್ಲಾ ಗೊತ್ತಿದೆ ಎಂದು ಗುಡುಗಿದರು.

click me!