* ಕೋಟೆನಾಡಿನಲ್ಲಿ ಉದ್ಘಾಟನೆಗೊಂಡ ಸಾರ್ವಜನಿಕ ಆದರ್ಶ ಸೇನೆ ರಾಜಕೀಯ ಪಕ್ಷ
* ರಾಜ್ಯದ ನಿವೃತ್ತ ಸೈನಿಕರಿಂದ ಕೂಡಿರುವ ರಾಜಕೀಯ ಪಕ್ಷ.
* ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಪಕ್ಷದ ಗುರಿ- ಬ್ರಿಗೇಡ್ ಮುನಿಸ್ವಾಮಿ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.12): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ಹೊಸ ರಾಜಕೀಯ ಪಕ್ಷಗಳು ತಲೆ ಎತ್ತುತ್ತಿವೆ. ಅದಕ್ಕೆ ಪೂರಕ ಎಂಬಂತೆ ಇಂದು ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಮಾಜಿ ಸೈನಿಕರೇ ಸೇರಿರುವ ಸಾರ್ವಜನಿಕ ಆದರ್ಶ ಸೇನಾ ರಾಜಕೀಯ ಪಕ್ಷವನ್ನು ಅಧ್ಯಕ್ಷ ಬ್ರಿಗೇಡ್ ಮುನಿಸ್ವಾಮಿ ಉದ್ಘಾಟಿಸಿದರು.
undefined
ನಗರದ ಹಳೇ ಮಾದ್ಯಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಾಜಿ ಸೈನಿಕರು ಭಾಗಿ ಆಗಿದ್ದರು. ಪಕ್ಷದ ನಾಯಕರುಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಬ್ರಿಗೇಡ್ ಮುನಿಸ್ವಾಮಿ, ನಮ್ಮ ಪಕ್ಷದ ಸಿದ್ದಾಂತ ಭ್ರಷ್ಟಾಚಾರ ನಿರ್ಮೂಲನೆ, ಜನರಿಗೆ ವಿದ್ಯಾಭ್ಯಾಸ, ಉತ್ತಮ ಆರೋಗ್ಯ ನೀಡುವುದು ನಮ್ಮ ಪಕ್ಷದ ಮೂಲ ಉದ್ದೇಶವಾಗಿದೆ. ದೇಶ ಒಗ್ಗಟ್ಟಾಗಿ ಇರಬೇಕಂದ್ರೆ ಸೈನಿಕರು ಕಾರಣ. 27 ಸಾವಿರ ಸೈನಿಕರು ಈ ದೇಶಕ್ಕೆ ತನ್ನ ಪ್ರಾಣ ಧಾನ ಮಾಡಿದ್ದಾರೆ. ಆದ್ರೂ ಇಂದಿಗೂ ಎದೆಗುಂದದೇ ಮತ್ತೆ ಸೈನ್ಯಕ್ಕೆ ಸೇರಿ ಯುದ್ದ ಮಾಡಿಕೊಂಡು ಬರ್ತಿದ್ದಾರೆ. ಜಮ್ಮು ಕಾಶ್ಮೀರ ನಮ್ಮ ಪರವಾಗಿ ಆಗಿದೆ ಅಂದ್ರೆ ನಮ್ಮ ಸೈನಿಕರೇ ಕಾರಣ ಎಂದರು.
ಬಂಡೆ ಒಡೆಯುತ್ತೇನೆ, ಹುಲಿಯನ್ನ ಕಾಡಿಗೆ ಅಟ್ಟುತ್ತೇನೆ: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಸವಾಲು
ಕುಟುಂಬ ರಾಜಕಾರಣ ಹೆಚ್ಚು ತಾಂಡವಾಡ್ತಿದೆ: ಸದ್ಯ ರಾಜಕಾರಣದಲ್ಲಿ ಭ್ರಷ್ಟಾಚಾರ ಹೆಚ್ಚಾಗ್ತಿದೆ. ಕುಟುಂಬ ರಾಜಕಾರಣ ಹೆಚ್ಚು ತಾಂಡವ ಆಡ್ತಿದೆ. ಬುದ್ದಿವಂತ ಜನರು ಯಾರೂ ರಾಜಕಾರಣಕ್ಕೆ ಬರ್ತಿಲ್ಲ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡ್ತಿದ್ದಾರೆಯೇ ಹೊರೆತು ಸಾರ್ವಜನಿಕ ಹಿತಕ್ಕಾಗಿ ಯಾರೂ ಅಧಿಕಾರ ಮಾಡ್ತಿಲ್ಲ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ದ ಕಿಡಿಕಾರಿದರು. ಭಾರತಕ್ಕೆ ಮಿತ್ರರಿಗಿಂತ ಶತೃಗಳೇ ಹೆಚ್ಚಾಗಿದ್ದಾರೆ. ಭ್ರಷ್ಟಾಚಾರ ರಾಜ್ಯದಲ್ಲಿ ೪೦% ನಡೆಯುತ್ತಿದೆ ಇದನ್ನು ನೋಡಿದ್ರೆ ನಮಗೆ ನಾಚಿಕೆ ಆಗ್ತಿದೆ ಎಂದು ವಾಗ್ದಳಿ ನಡೆಸಿದರು.
ಸುಬೇಧರ್ ರಮೇಶ್ ಜಗತಾಪ್ ಚಿತ್ರದುರ್ಗ ಅಭ್ಯರ್ಥಿ: ದುಡ್ಡು ಖರ್ಚು ಮಾಡಿ ನಾವು ರಾಜಕೀಯಕ್ಕೆ ಮಾಡೋದಿಲ್ಲ. ಸೈನ್ಯ ಸೇರುವವರಿಗೆ ಯಾವುದೇ ಧರ್ಮ ಜಾತಿಯ ಬೇಧ ಇಲ್ಲ. ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಜಾತಿ, ಧರ್ಮಗಳ ಭೇಧಭಾವ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ನಾವು ಕಟ್ಟಿರುವ ಆದಾಯ ತೆರಿಗೆಯಿಂದ ಈ ಸರ್ಕಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುಬೇಧರ್ ರಮೇಶ್ ಜಗತಾಪ್ ಅವರನ್ನು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ವೇದಿಕೆಯಲ್ಲಿಯೇ ಘೋಷಣೆ ಮಾಡಿದರು.
ಸಾರ್ವಜನಿಕ ಆದರ್ಶ ಸೇನಾ ಪಕ್ಷ: ಬಳಿಕ ಮಾತನಾಡಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ್ ಜಗತಾಪ್ ಇಂದು ಸಣ್ಣ ಸಂಖ್ಯೆಯಲ್ಲಿ ಸೇರಿದ್ದೀವಿ ಎಂದು ಬೇಸರವಿಲ್ಲ ಯಾಕಂದ್ರೆ ಸಣ್ಣ ಮರವೇ ಹೆಮ್ಮರ ಆಗುವುದು. ನಾವು ಹೇಗೆ ಉದ್ದಾರ ಮಾಡಬೇಕು ಜನರನ್ನು ಹೇಗೆ ಮೋಸ ಮಾಡಬೇಕು ಎಂಬುದು ಇಂದಿನ ರಾಜಕೀಯ ಪಕ್ಷಗಳ ಉದ್ದೇಶವಾಗಿದೆ. ಕಣ್ಮುಂದೆ ನೋಡೋದನ್ನು ಸಹಿಸುವುದು ಅಪರಾದ ಎಂದು ನಾವು ಇಂದು ಹೆಚ್ಚೆತ್ತುಕೊಂಡು ಒಂದು ರಾಜಕೀಯ ಪಕ್ಷವಾಗಿ ಸಾರ್ವಜನಿಕ ಆದರ್ಶ ಸೇನಾ ಪಕ್ಷವೆಂದು ಕಟ್ಟಿದ್ದೇವೆ ಎಂದರು.
ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ
ಮಿಲಿಟರಿಯವರು ಪ್ರಾಮಾಣಿಕತೆಗೆ ಹೆಸರುವಾಸಿ: ನಮ್ಮ ಕಣ್ಮುಂದೆ ಆಗ್ತಿರುವ ಅನ್ಯಾಯದ ವಿರುದ್ದ ಹೋರಾಟ ಮಾಡುವುದೇ ನಮ್ಮ ಮೂಲ ಉದ್ದೇಶ. ನಾವು ಮಿಲಿಟರಿಯವರು ಪ್ರಾಮಾಣಿಕತೆಗೆ ಹೆಸರುವಾಸಿ ಆಗಿರುವವರು ಆಗೆಯೇ ಇರ್ತೇವೆ. ಕೋಟೆನಾಡು ಐತಿಹಾಸಿಕ ನಗರ ಹಾಗಾಗಿ ಇಲ್ಲಿಂದಲೇ ನಮ್ಮ ರಣ ಕಹಳೆ ಶುರುವಾಗಲಿ ಎಂದು ಶುರು ಮಾಡಿದ್ದೇವೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದ್ರು ಯಾರೂ ಪ್ರಶ್ನೆ ಮಾಡ್ತಿಲ್ಲ. ಸಮಾಜಿಕವಾಗಿ ತಳಮಟ್ಟದ ಜನರ ಧ್ವನಿ ಆಗಬೇಕು ಎಂದು ಈ ಪಕ್ಷ ಕಟ್ಟಿ ಮುಂದುವರೆಯುತ್ತಿದ್ದೇವೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.