ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಬೆನ್ನಲ್ಲೇ ಸನಾತನ ಧರ್ಮದ ವಿಚಾರವಾಗಿ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀಡಿದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧರ್ಮ ಯಾವಾಗ, ಯಾರು ಹುಟ್ಟಿಸಿದರು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
ತುಮಕೂರು (ಸೆ.06): ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಬೆನ್ನಲ್ಲೇ ಸನಾತನ ಧರ್ಮದ ವಿಚಾರವಾಗಿ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನೀಡಿದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿದೆ. ಹಿಂದೂ ಧರ್ಮ ಯಾವಾಗ, ಯಾರು ಹುಟ್ಟಿಸಿದರು ಎನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು ಅವರು ಹೇಳಿದ್ದಾರೆ. ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಆದರೆ ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರು ಎಂಬುದು ಪ್ರಶ್ನೆಯಾಗಿ ಉಳಿದಿದೆ. ನಮ್ಮ ದೇಶದಲ್ಲಿ ಬೌದ್ಧ ಮತ್ತು ಜೈನಧರ್ಮ ಹುಟ್ಟಿರುವ ಇತಿಹಾಸವಿದೆ. ವಿದೇಶದಿಂದ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ನಮ್ಮಲ್ಲಿ ಬಂದಿದೆ ಎಂದ ಅವರು, ಪ್ರಪಂಚದ ಎಲ್ಲಾ ಧರ್ಮಗಳ ಸಾರಾಂಶ ಒಂದೇ. ಅದು ಮನುಕುಲಕ್ಕೆ ಒಳ್ಳೆದಾಗಲಿ ಎಂಬುದಾಗಿದೆ ಎಂದರು.
ರಾಧಾಕೃಷ್ಣನ್ ದೂರದೃಷ್ಟಿ ಚಿಂತನೆಗಳು ನಮಗೆ ಆದರ್ಶಪ್ರಾಯ: ದೇಶದಲ್ಲಿ ಬಡತನದಲ್ಲಿ ಹುಟ್ಟಿದ ಅನೇಕರು ಸಾಧನೆ ಮಹನೀಯರಾಗಿ ನಮಗೆ ಆದರ್ಶಪ್ರಾಯರಾಗಿದ್ದಾರೆ. ಅವರಲ್ಲಿ ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರು ಸಹ ಒಬ್ಬರಾಗಿದ್ದಾರೆ ಎಂದು ಗೃಹ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಗಂಡನ ಮೇಲೆ ಮಾಟ-ಮಂತ್ರ ಮಾಡಿ ಜೀವ ಭಯ ಹುಟ್ಟಿಸಿದ ಪತ್ನಿ: ಠಾಣೆಗೆ ಪತಿ ದೂರು
ಅವರು ಪಟ್ಟಣದ ಮಾರುತಿ ಕಲ್ಯಾಣಮಂಟಪದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 136ನೇ ಜನ್ಮದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಪ್ಣನ್ ರವರ ದೂರದೃಷ್ಟಿ ಆದರ್ಶವಾದಗಳು ಸದಾ ನಮ್ಮ ಜೊತೆಯಲ್ಲಿ ಇರಬೇಕು, ಇವರು ಭಾರತದ ಮೊದಲನೇ ಉಪರಾಷ್ಟ್ರಪತಿ ಮತು ಎರಡನೇ ರಾಷ್ಟ್ರಪತಿಗಳಾದ ಕಾಲದಲ್ಲಿ ದೇಶವು ಕಷ್ಟಕರ ಸನ್ನಿವೇಶ ಎದುರಿಸುವಾಗ ಶಿಕ್ಷಣವನ್ನು ಒಂದು ನಕ್ಷೆ ಮಾಡಿ ಜಾರಿಗೆ ತಂದರು ಎಂದರು.
ಎನ್.ಇ.ಪಿ ಗೆ ವಿರೋಧ: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯನ್ನು (ಎನ್.ಇ.ಪಿ) ರಾಜ್ಯ ಸರ್ಕಾರ ವಿರೋಧಿಸುತ್ತದೆ, ನಮ್ಮ ರಾಜ್ಯದ ಮಕ್ಕಳ ವಿಕಾಸಕ್ಕೆ ಮನಸ್ಥಿತಿ ತಕ್ಕಂತೆ ಶಿಕ್ಷಣ ನೀತಿಯನ್ನು ಶಿಕ್ಷಕ ಸಂಘಗಳ ಜೊತೆ ಸಭೆ ನಡಿಸಿ ತರಲಾಗುವುದು, ನಮಗೆ 10+2 ನೀತಿ ಸರಿ ಇದ್ದು ಕೇಂದ್ರದ 5+3+3+4 ನೀತಿಯನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಜಾರಿಗೆ ತರುವುದಿಲ್ಲ ಎಂದ ಅವರು ತುಮಕೂರು ಜಿಲ್ಲೆಗೆ ಶಾಲೆಗಳ ವೇಳಾಪಟ್ಟಿಯ ಪರಿಷ್ಕರಣೆ ಸದ್ಯಕ್ಕೆ ಇಲ್ಲ. ಆದರೆ ಮುಂದೆ ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.
ಪ್ರಾಣಿ ದಾಳಿ ತಡೆಯಲು ಅರಣ್ಯ ಒತ್ತುವರಿ ತೆರವು: ಸಿಎಂ ಸಿದ್ದು ಸೂಚನೆ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ತಹಸೀಲ್ದಾರ್ ಮುನಿಶಾಮಿ ರೆಡ್ಡಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ದೊಡ್ಡಸಿದ್ದಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು, ಸಂಪನ್ಮೂಲ ವ್ಯಕ್ತಿ ರಘುನಾಥ ಚ.ಹ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಪ್ರಾ.ಶಿಕ್ಷಕರ ಸಂಘದ ಅದ್ಯಕ್ಷ ಬಿ.ಜಿ.ಹನುಮಂತರಾಯಪ್ಪ, ಭಾರತ್ ಸ್ಕೌಟ್ ಅಂಡೆ ಗೈಡ್ಸ್ ಅಧ್ಯಕ್ಷ ಕೆ.ಆರ್. ಓಬಳರಾಜು, ಕ.ಸಾ.ಪ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೊಡ್ಲಹಳ್ಳಿ ಅಶ್ವಥ ನಾರಾಯಣರಾಜು, ಅರಕೆರೆ ಶಂಕರ್, ಮುಖಂಡರಾದ ಎ.ಡಿ.ಬಲರಾಮಯ್ಯ, ಕೆ.ಬಿ.ಲೋಕೇಶ್ ಸೇರಿದಂತೆ ಇತರರು ಹಾಜರಿದ್ದರು.