ಚಾಮರಾಜನಗರ ಕ್ಷೇತ್ರದಿಂದ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರೂ ಗೆಲ್ಲಿಸುತ್ತೇವೆ: ಶಾಸಕ ಅನಿಲ್ ಚಿಕ್ಕಮಾದು

By Kannadaprabha News  |  First Published Jan 13, 2024, 10:23 PM IST

ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ನಾವು ಸಿದ್ದರಿದ್ದೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. 


ಮೈಸೂರು (ಜ.12): ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾರೇ ಸ್ಪರ್ಧೆ ಮಾಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ನಾವು ಸಿದ್ದರಿದ್ದೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸರ್ಕಾರದ ಉತ್ತಮವಾಗಿ ಅಧಿಕಾರ ನಡೆಸುತ್ತಿದೆ. ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಮುಖ್ಯಮಂತ್ರಿಗಳು ನುಡಿದಂತೆ ನಡೆದುಕೊಂಡು ಈಗಾಗಲೇ ಪಂಚ ಗ್ಯಾರಂಟಿಗಳ ಸೌಲಭ್ಯಗಳನ್ನು ಜನ‌ರು ಪಡೆಯುತ್ತಿದ್ದಾರೆ. ಜನ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಯತೀಂದ್ರಗೆ ಅವಕಾಶ ಸಿಕ್ಕರೇ ಸಂತೋಷ: ಮೈಸೂರು- ಕೊಡುಗು ಲೋಕಸಭಾ ಚುನಾವಣೆಗೆ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆ ಸಂಬಂಧ ಪ್ರತಿಕ್ರಿಯಿಸಿದ ಅವರು, ತಮ್ಮ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಈ ಬಾರಿ ಅಂತಹ ಅವಕಾಶ ಸಿಕ್ಕಿದರೆ ಬಹಳ ಸಂತೋಷ ಎಂದರು. ಈಗಾಗಲೇ ಸಾಕಷ್ಟು ಜನರು ಆಕಾಂಕ್ಷಿಗಳಿದ್ದಾರೆ. 

Latest Videos

undefined

ಸಂಸದ ಪ್ರಜ್ವಲ್‌ರ ವಿಡಿಯೋ ಇದೆ, ಸಮಯ ಬಂದಾಗ ಬಿಡುಗಡೆ: ಬಿಜೆಪಿ ವಕ್ತಾರ ದೇವರಾಜೇಗೌಡ

ಡಾ. ಯತೀಂದ್ರ ಅವರನ್ನು ಹೈಕಮಾಂಡ್ ಪರಿಗಣಿಸಿ ಅವಕಾಶ ನೀಡಿದರೆ ಬಿಜೆಪಿ ಪಾಲಾಗಿರುವ ಮೈಸೂರು- ಕೊಡುಗು ಲೋಕಸಭಾ ಕ್ಷೇತ್ರವನ್ನು ನಾವು ಸುಲಭವಾಗಿ ಗೆಲ್ಲಬಹುದು. ಬಿಜೆಪಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಒಂದು ವೇಳೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಟ್ಟರೆ ನಾನು ಅವರ ಗೆಲುವಿಗೆ ಹಗಲಿರುಳು ಶ್ರಮಿಸುತ್ತೇನೆ. ಅವರು ನಮ್ಮ ಆಪ್ತರು, ಅವರಿಗೆ ಈ ಬಾರಿ ಒಂದು ಸೂಕ್ತ ಸ್ಥಾನಮಾನ ಅಧಿಕಾರ ಸಿಗಬೇಕು ಎಂಬುದು ನಮ್ಮ‌ ಆಶಯ ಎಂದು ಅವರು ಹೇಳಿದರು.

ಶ್ರೀರಾಮ ಬಿಜೆಪಿ ಅವರಿಗೊಬ್ಬರಿಗೇ ಅಲ್ಲ: ಶ್ರೀರಾಮ ಬಿಜೆಪಿ ಅವರಿಗೊಬ್ಬರಿಗೇ ಅಲ್ಲ. ಸಮಸ್ತ ಹಿಂದೂಗಳ ಆರಾಧ್ಯ ದೈವ ಶ್ರೀರಾಮ. ಶ್ರೀರಾಮ ಕೇವಲ ಬಿಜೆಪಿಯವರಿಗೆ ಮಾತ್ರವಲ್ಲ. ರಾಮಮಂದಿರದ ವಿಚಾರ ಮುಂದಿಟ್ಟು ರಾಜಕೀಯ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಕಿಡಿಕಾರಿದರು.

ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ಎಚ್‌.ಡಿ.ರೇವಣ್ಣ

ಬಿಜೆಪಿಯವರು ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಈ ರೀತಿಯ ಮಾಡುತ್ತಿದ್ದಾರೆ. ಬಿಜೆಪಿ ಅವರು ರಾಮಾಯಣ ಬರೆದ ವಾಲ್ಮೀಕಿ ಅವರನ್ನೇ ಕಡೆಗಣಿದ್ದಾರೆ. ವಾಲ್ಮೀಕಿ ಅವರ ಮೇಲೆ ಗೌರವ ಇದ್ದರೆ ಶ್ರೀರಾಮ ಮಂದಿರದ ಬಳಿ ವಾಲ್ಮೀಕಿ ಅವರ ಪುತ್ಥಳಿ, ಪ್ರತಿಮೆಯನ್ನಾದರೂ ಮಾಡಬಹುದಿತ್ತು. ಈ ಮೂಲಕ ರಾಮಾಯಣದ ನಿರ್ಮಾತೃ ವಾಲ್ಮೀಕಿ ಅವರಿಗೆ ಅಗೌರವ ತೋರಿದ್ದಾರೆ ಎಂದು ಅವರು ಆರೋಪಿಸಿದರು.

click me!