ಕೋಚಿಮಲ್‌ ನೇಮಕಾತಿಯಲ್ಲಿ ಅಕ್ರಮವಾಗಿಲ್ಲ: ಶಾಸಕ ನಂಜೇಗೌಡ

By Kannadaprabha News  |  First Published Jan 13, 2024, 9:43 PM IST

ಕೋಚಿಮಲ್‌ ನೇಮಕಾತಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಶಾಸಕನಾಗಿ, ಕೋಚಿಮಲ್‌ ಅಧ್ಯಕ್ಷನಾಗಿ ಎಂದಿಗೂ ತಾಲೂಕಿನ ಜನತೆಗೆ ಮೋಸ ಮಾಡಿಲ್ಲ. ಆದರೆ, ಇಡಿ ದಾಳಿಯಿಂದ ನಾನು ಹಾಗೂ ನನ್ನ ಕುಟುಂಬದವರು ತುಂಬಾ ನೋವು ಅನುಭವಿಸಿದ್ದೇವೆ ಎಂದು ಕೋಚಿಮಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.
 


ಮಾಲೂರು (ಜ.12): ಕೋಚಿಮಲ್‌ ನೇಮಕಾತಿಯಲ್ಲಿ ಯಾವುದೇ ಅಕ್ರಮವಾಗಿಲ್ಲ. ಶಾಸಕನಾಗಿ, ಕೋಚಿಮಲ್‌ ಅಧ್ಯಕ್ಷನಾಗಿ ಎಂದಿಗೂ ತಾಲೂಕಿನ ಜನತೆಗೆ ಮೋಸ ಮಾಡಿಲ್ಲ. ಆದರೆ, ಇಡಿ ದಾಳಿಯಿಂದ ನಾನು ಹಾಗೂ ನನ್ನ ಕುಟುಂಬದವರು ತುಂಬಾ ನೋವು ಅನುಭವಿಸಿದ್ದೇವೆ ಎಂದು ಕೋಚಿಮಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು. ಒಕ್ಕೂಟದ 81 ಖಾಲಿ ಹುದ್ದೆಗಳ ನೇಮಕಾತಿಗಾಗಿ ಅಭ್ಯರ್ಥಿಗಳಿಗೆ ಪಾರದರ್ಶಕ ಪರೀಕ್ಷೆ ನಡೆಸಿ ಒಕ್ಕೂಟದ ನಿಯಮಾನುಸಾರ ನೇಮಕ ಮಾಡಲಾಗಿದೆ. 

ಆದರೆ, ನೂರಾರು ಕೋಟಿ ಅಕ್ರಮವಾಗಿದೆ ಎಂದು ಕೆಲವರು ನನ್ನ ಮನೆಯವರಿಗೆ ಇಡಿಯನ್ನು ಕಳಿಸಿಕೊಟ್ಟಿದ್ದಾರೆ. ಆದರೆ, ಇಡಿಯವರಿಗೆ ನಮ್ಮ ಮನೆಯಲ್ಲಿ ಏನೂ ಸಿಗಲಿಲ್ಲ. ಯಾವುದೇ ಅಭ್ಯರ್ಥಿಯ ಬಳಿ 20-30 ಲಕ್ಷ ಹಣ ವಸೂಲಿ ಮಾಡಿಲ್ಲ. ತಾಲೂಕು ಕಚೇರಿಯ ದರಖಾಸ್ತು ಸಮಿತಿಯ 150 ಕೋಟಿ ಬೆಲೆ ಬಾಳುವ ಸರಕಾರಿ ಆಸ್ತಿಯನ್ನು ಅಕ್ರಮ ಭೂ ಮಂಜೂರು ಮಾಡಿಕೊಡಲಾಗಿದೆ ಎಂಬುದು ಸಹ ಸುಳ್ಳು ಸುದ್ದಿಯಾಗಿದೆ ಎಂದರು.

Latest Videos

undefined

ಕುಸಿಯುವ ಆತಂಕದಲ್ಲಿ ಕೊಡಗಿನ ಕಿರಂಗದೂರು ಸರ್ಕಾರಿ ಶಾಲೆ: 42ಕ್ಕೆ ಇಳಿದ ವಿದ್ಯಾರ್ಥಿಗಳ ಸಂಖ್ಯೆ!

ಕೋಚಿಮುಲ್ ಒಕ್ಕೂಟ ಅಮಾತಿಗೆ ಆಗ್ರಹ: ಕೋಚಿಮುಲ್‌ ಅಧ್ಯಕ್ಷ ಹಾಗೂ ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ. ನಂಜೇಗೌಡ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಕೋಚಿಮುಲ್‌ ಒಕ್ಕೂಟವನ್ನು ಅಮಾನತಿನಲ್ಲಿಡಬೇಕೆಂದು ಬಿಜೆಪಿ ಮುಖಂಡರು ಒತ್ತಾಯಿಸಿದರು. ಸ್ಥಳೀಯ ಶಾಸಕ ಪ್ರದೀಪ್‌ ಈಶ್ವರ್‌ ಬಾಲಿಶ ವರ್ತನೆ ಬಿಟ್ಟು ಅಭಿವೃದ್ಧಿ ಯೋಜನೆಗಳನ್ನು ತರಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಕೆ.ವಿ. ನಾಗರಾಜ್, ಕೋಚಿಮುಲ್‌ನಲ್ಲಿ ಪ್ರತಿಭಾವಂತರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪ ಬಂದಾಗ ಯಾರೂ ನಂಬಿರಲಿಲ್ಲ. ಈಗ ಅದಕ್ಕೆ ದಾಖಲಾತಿಗಳು ದೊರೆತಿವೆ ಎಂದರು.

ಭ್ರಷ್ಟಾಚಾರ ನಡೆದಿರುವುದು ನಿಜ: ತನಿಖೆ ನಡೆಸಿದಾಗ 35-40 ಜನರ ಬಳಿ 20-30 ಲಕ್ಷ ರು. ಪಡೆದಿರುವುದು ನಿಜ ಎಂದು ಆಯ್ಕೆ ಸಮಿತಿಯವರು ಇಡಿ ಮುಂದೆ ಒಪ್ಪಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದು, ಇದರಲ್ಲಿ ಕಾಂಗ್ರೆಸ್‌ ಶಾಸಕ ಕೆ.ವೈ. ನಂಜೇಗೌಡರು ತಮ್ಮ ಆಪ್ತರಿಗೆ ಗೋಮಾಳ ಜಮೀನು ಮಂಜೂರು ಮಾಡಿರುವುದನ್ನು ತಿಳಿಸಲಾಗಿದೆ ಎಂದರು.

ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ಎಚ್‌.ಡಿ.ರೇವಣ್ಣ

ಪ್ರದೀಪ್‌ ಈಶ್ವರ್‌ ವರ್ತನೆ ಬಾಲಿಶ: ಶಾಸಕ ಪ್ರದೀಪ್‌ ಈಶ್ವರ್‌ ಕೆಲಸ ಮಾಡುವುದನ್ನು ಬಿಟ್ಟು ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೊಸ ಅಭಿವೃದ್ಧಿ ಯೋಜನೆಗಳು ನಡೆದಿಲ್ಲ. ಆಗಲೇ ಸಂಸದನಾಗಿ ಸ್ಪರ್ಧಿಸುತ್ತೇನೆ ಎಂದು ಶಾಸಕ ಪ್ರದೀಪ್‌ ಹೇಳಲಾರಂಭಿಸಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಮೋದಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಮುಖಂಡರಾದ ಚಿನ್ನಪ್ಪ ರೆಡ್ಡಿ, ವೆಂಕಟನಾರಾಯಣ್, ಪಿ.ಎ. ಮೋಹನ್, ಹನುಮೇಗೌಡ, ಗಿರೀಶ್, ಅಗಲಗುರ್ಕಿ ಚಂದ್ರಶೇಖರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮತ್ತಿತರರು ಇದ್ದರು.

click me!