Tumakuru: ಮುದ್ದಹನುಮೇಗೌಡರ ಮನವೊಲಿಸುತ್ತೇವೆ: ಎಂ.ಬಿ.ಪಾಟೀಲ್‌

By Govindaraj SFirst Published Sep 4, 2022, 10:57 PM IST
Highlights

ಮಾಜಿ ಸಂಸದ ಮುದ್ದಹನುಮೇಗೌಡರ ಮನವೊಲಿಸುವ ಕಾರ್ಯವನ್ನು ಪಕ್ಷದ ಹಿರಿಯ ನಾಯಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. 

ತುಮಕೂರು (ಸೆ.04): ಮಾಜಿ ಸಂಸದ ಮುದ್ದಹನುಮೇಗೌಡರ ಮನವೊಲಿಸುವ ಕಾರ್ಯವನ್ನು ಪಕ್ಷದ ಹಿರಿಯ ನಾಯಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಂಸದ ಮುದ್ದಹನುಮೇಗೌಡರು ಸದ್ಯ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ ಅವರು ಇನ್ನೂ ಯಾವ ಪಕ್ಷವನ್ನು ಸೇರು ನಿರ್ಧಾರ ಮಾಡಿಲ್ಲ. ಹಾಗಾಗಿ ನಮ್ಮ ಪಕ್ಷದ ಹಿರಿಯ ನಾಯಕರು ಅವರ ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಭಗವಂತ ಅವರ ಮನವೊಲಿಸಲಿ ಎಂಬುದು ನನ್ನ ಆಶಯ ಎಂದರು.

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಪ್ರಸ್ತುತ ಮೂರು ಶಾಸಕರಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಾಸಕರು, ಮಾಜಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿ 9 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ದಲಿತ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಪ್ರಕರಣದ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ ಎಂ.ಬಿ. ಪಾಟೀಲ್‌, ಪ್ರಕರಣ ತನಿಖೆಯ ಹಂತದಲ್ಲಿದೆ. ಹಾಗಾಗಿ ಈ ಬಗ್ಗೆ ಯಾರು ಮಾತನಾಡಿದರೂ ತಪ್ಪಾಗುತ್ತದೆ. ತನಿಖೆ ಬೇಗ ಮುಗಿಯಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಿ ಅಮಾಯಕರಿಗೆ ಬದುಕು ಕೊಟ್ಟಿಕೊಡುವಂತಾಗಲಿ ಎಂಬುದಷ್ಟೆನನ್ನ ಆಶಯ ಎಂದರು.

ಯುವಕರಿಗೆ ಉದ್ಯೋಗ ನೀಡಲು ಪಿಎಂಕೆವಿ ಯೋಜನೆ: ಸಂಸದ ಜಿ.ಎಸ್‌.ಬಸವರಾಜು

ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಪ್ರಧಾನಿ ನರೇಂದ್ರ ಮೋದಿಯವರ ತಪ್ಪು ನಿರ್ಣಯಗಳೇ ಕಾರಣ ಎಂದು ಆರೋಪಿಸಿದರು. ಕಾಂಗ್ರೆಸ್‌ ಪಕ್ಷ ಜನರ ಬದುಕು ಕಟ್ಟಿಕೊಡುವ ಕೆಲಸ ಮಾಡಿದರೆ, ಬದಲಾಗಿ ಬಿಜೆಪಿ ಜನರ ಬದುಕು ಕಸಿಯುವ ಕೆಲಸ ಮಾಡುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷ ಕಳೆದಿದೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ ಈ 8 ವರ್ಷದಲ್ಲಿ ಕೋಟ್ಯಂತರ ಉದ್ಯೋಗಗಳನ್ನು ಕಳೆದುಕೊಂಡಿದ್ದೇವೆ. ಇದಕ್ಕೆಲ್ಲ ಮೋದಿಯವರ ತಪ್ಪು ನಿರ್ಣಯಗಳೇ ಪ್ರಮುಖ ಕಾರಣ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ, ಮಾಜಿ ಶಾಸಕರಾದ ಆರ್‌. ನಾರಾಯಣ್‌, ಕೆ. ಷಡಕ್ಷರಿ, ಡಾ. ರಫೀಕ್‌ ಅಹಮದ್‌, ವಿಧಾನ ಪರಿಷತ್‌ ಸದಸ್ಯ ಆರ್‌. ರಾಜೇಂದ್ರ, ಜಿಲ್ಲಾಧ್ಯಕ್ಷ ಆರ್‌. ರಾಮಕೃಷ್ಣ, ಬೆಮೆಲ್‌ ಕಾಂತರಾಜು, ಎಚ್‌.ವಿ. ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಮಾಜಿ ಶಾಸಕ ಕೆ.ಎನ್‌.ರಾಜಣ್ಣ, ಮಾಜಿ ಸಚಿವ ಟಿ.ಬಿ.ಜಯಚಂದ್ರರೊಂದಿಗೆ ಭೇಟಿ ನೀಡಿದ ಎಂ.ಬಿ. ಪಾಟೀಲ್‌ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ನಂತರ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ತೆರಳಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ನಾನು ಮುಂದೆಯೂ ಮುರುಘಾ ಮಠಕ್ಕೆ ಹೋಗಿ, ದರ್ಶನ ಮಾಡುವೆ: ಎಂ.ಬಿ.ಪಾಟೀಲ್‌

ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಯುತ್ತಿರುವ ಜನತೆ: ಬಿಜೆಪಿ ಸರ್ಕಾರದಲ್ಲಿ ಯಾವ ಮಂತ್ರಿ ಏನು ಮಾಡುತ್ತಾರೆ ಎಂಬುದರ ಬಗ್ಗೆ ಸ್ವತಃ ಮುಖ್ಯಮಂತ್ರಿಗಳಿಗೇ ಗೊತ್ತಿಲ್ಲ. ಈ ಸರ್ಕಾರದ ಮಂತ್ರಿಗಳು 40 ಪರ್ಸಂಟ್‌ ಕಮೀಷನ್‌ ಪಡೆಯುತ್ತಿದ್ದರೂ ಅವರ ಮೇಲೆ ಸಿಬಿಐ, ಐಟಿ, ಇಡಿ ದಾಳಿ ಮಾತ್ರ ನಡೆಯುವುದಿಲ್ಲ. ಬದಲಾಗಿ ವಿರೋಧ ಪಕ್ಷಗಳವರ ಮೇಲೆ ಈ ದಾಳಿಗಳನ್ನು ನಡೆಸುವ ಮೂಲಕ ವಿಪಕ್ಷವನ್ನು ದಮನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಪಾಟೀಲ್‌ ದೂರಿದರು. ಇಂತಹ ಕೆಟ್ಟಹಾಗೂ ಭ್ರಷ್ಟಸರ್ಕಾರವನ್ನು ಮುಂದಿನ 2023 ರಲ್ಲಿ ತೆಗೆದು ಹಾಕಲು ಜನ ನಿರ್ಧರಿಸಿದ್ದಾರೆ. ಹಾಗೆಯೇ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲೂ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ದೇಶದ ಜನತೆ ಕಾಯುತ್ತಿದ್ದಾರೆ ಎಂದರು.

click me!