ಬಿಜೆಪಿ ಪಕ್ಷವು ದಲಿತ ಸಮುದಾಯದ ವಿರೋಧಿ ಎಂದು ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದ್ದ ಕಾಲ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಬಿಜೆಪಿ ಪಕ್ಷವು ದಲಿತ ಪರ ಎಂಬುದು ಸಾಭೀತಾಗಿದ್ದು ದಲಿತರು ಇಂದು ಶೇ.70 ರಷ್ಟು ಬಿಜೆಪಿ ಪರವಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪಕ್ಷದ ಎಸ್.ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಕೋಲಾರ (ಸೆ.04): ಬಿಜೆಪಿ ಪಕ್ಷವು ದಲಿತ ಸಮುದಾಯದ ವಿರೋಧಿ ಎಂದು ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡುತ್ತಿದ್ದ ಕಾಲ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಬಿಜೆಪಿ ಪಕ್ಷವು ದಲಿತ ಪರ ಎಂಬುದು ಸಾಭೀತಾಗಿದ್ದು ದಲಿತರು ಇಂದು ಶೇ.70 ರಷ್ಟು ಬಿಜೆಪಿ ಪರವಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಪಕ್ಷದ ಎಸ್.ಸಿ. ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು. ರಾಜ್ಯ ಎಸ್.ಸಿ ಮೋರ್ಚಾದ ಪ್ರಶಿಕ್ಷಣ ವರ್ಗ ಶಿಬಿರದ ಸಮಾರೋಪ ಸಮಾರಂಭದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ದಲಿತ ಸಮುದಾಯವರು ಇಂದು ಮನಸ್ಸು ಮಾಡಿದರೆ 150 ಸೀಟ್‌ಗಳನ್ನು ಸುಲಭವಾಗಿ ಪಡೆಯುವಂತ ಸಾಮಾರ್ಥ್ಯ ಇದೆ.
ರಾಜ್ಯದಲ್ಲಿ ಶೇ 30-35 ರಷ್ಟು ಜನಸಂಖ್ಯೆ ದಲಿತ ಸಮುದಾಯ ಹೊಂದಿದೆ ಎಂದು ಹೇಳಿದರು. ಕಳೆದ 67 ವರ್ಷದಿಂದ ಕಾಂಗ್ರೆಸ್ ಪಕ್ಷವು ದಲಿತ ಸಮುದಾಯವನ್ನು ಓಟ್ ಬ್ಯಾಂಕ್ ಆಗಿ ಪರಿವರ್ತಿಸಿ ಕೊಂಡಿದೆಯೇ ಹೊರತು ಯಾವುದೇ ಸ್ಥಾನ ಮಾನದ ಅಧಿಕಾರ ನೀಡದೆ ಬಿಜೆಪಿ ಪಕ್ಷವು ಕೋಮುವಾದಿ ಪಕ್ಷವೆಂದು ಅಪಪ್ರಚಾರದ ಮೂಲಕ ದಿಕ್ಕು ತಪ್ಪಿಸುತ್ತಿತ್ತು, ಆದರೆ ಬಿಜೆಪಿ ಪಕ್ಷದ ಮೋದಿ ಆಡಳಿತದಲ್ಲಿ ಸತ್ಯಾಂಶವು ಬೆಳಕಿಗೆ ಬಂದಿದ್ದು, ಬಿಜೆಪಿ ದಲಿತ ಪರವೆಂಬುವುದು ಅರಿವಾಗಿ ಶೇ.70ರಷ್ಟು ದಲಿತ ಸಮುದಾಯವಯ ಬಿಜೆಪಿಗೆ ಸೇರಿದ್ದಾರೆ ಎಂದರು. ರಾಜ್ಯದಲ್ಲಿ 5 ಸ್ಥಾನಗಳು ಮೀಸಲಾತಿಯಲ್ಲಿ 5 ಸ್ಥಾನವನ್ನು ಬಿಜೆಪಿ ಪಕ್ಷವು ಗೆಲುವು ಸಾಧಿಸುವ ಮೂಲಕ ಶಕ್ತಿ ಕೇಂದ್ರವಾಗಿದೆ.
ಕಾಮಗಾರಿ ಮುಗಿದ ನಾಲ್ಕೇ ತಿಂಗಳಲ್ಲಿ ಬಿರುಕುಬಿಟ್ಟ ಶಾಲಾ ಕಟ್ಟಡ!
ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ದಲಿತ ಸಮುದಾಯದವರು ಹೆಚ್ಚು ಸ್ಥಾನ ಪಡೆದು ಬಿಜೆಪಿಗೆ ಶಕ್ತಿ ತುಂಬಿದ್ದಾರೆ. ಬಿಜೆಪಿ ಪಕ್ಷವು ಅಂಬೇಡ್ಕರ್ ತತ್ವ ಸಿದ್ದಾಂತ ಅಳವಡಿಸಿ ಕೊಂಡು ಸಂವಿಧಾನ ಎತ್ತಿ ಹಿಡಿದು ಆಂದೋಲವನ್ನಾಗಿ ಪರಿವರ್ತಿಸಿದೆ ಎಂದು ಹೇಳಿದರು. ಬಿಜೆಪಿ ಪಕ್ಷದ ಎಸ್.ಸಿ. ಮೋರ್ಚಾದ ರಾಷ್ಟ್ರಾಧ್ಯಕ್ಷರ ಸೂಚನೆಯಂತೆ ರಾಜ್ಯ ಮಟ್ಟದ ಎರಡನೇ ಪ್ರಶಿಕ್ಷಣ ವರ್ಗದ ತರಭೇತಿ ಶಿಬಿರ ಮೈಸೂರಿನಲ್ಲಿ ಅಕ್ಟೋಬರ್ ಮಾಹೆಯಲ್ಲಿ ಆಯೋಜಿಸಲಾಗುವುದು, ಅಂಬೇಡ್ಕರ್ ಜ್ಯೋತಿ ನ.26ರಿಂದ 10 ದಿನಗಳ ಕಾಲ ಆಯೋಜಿಸಿದೆ. 5 ತಂಡಗಳು ಜ್ಯೋತಿಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ರಾಜ್ಯದ ಕಿತ್ತೂರು ನಗರ, ಮೈಸೂರು, ಕಲ್ಯಾಣ ನಗರ, ಉತ್ತರ ಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ೫ ಪ್ರದೇಶಗಳಲ್ಲಿ ಸುಮಾರು 2 ಲಕ್ಷ ಮಂದಿ ಸಂಘಟಿಸಿ ಅಂಬೇಡ್ಕರ್ ಉತ್ಸವ ಆಚರಿಸಲಾಗುವುದು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷದವರು ದಲಿತೋತ್ಸವ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಇದರ ಜವಾಬ್ದಾರಿ ಕೆ.ಹೆಚ್.ಮುನಿಯಪ್ಪ, ಖರ್ಗೆ, ಪರಮೇಶ್ವರ್ ಇತರರಿಗೆ ನೀಡಿದ್ದಾರೆ ಹೊರತು ದಲಿತೋತ್ಸದ ನಾಯಕತ್ವ ನೀಡಿಲ್ಲವೆಂದು ವ್ಯಂಗವಾಡಿದ ಅವರು ಈ ಕಾರ್ಯಕ್ರಮ ಆಗುವವರೆಗೂ ಕಾಂಗ್ರೇಸ್ ಪಕ್ಷದಲ್ಲಿ ಕೆ.ಹೆಚ್.ಮುನಿಯಪ್ಪ ಮತ್ತು ಪರಮೇಶ್ವರ್ ಇರುತ್ತಾರೋ.... ಇಲ್ಲವೂ ಗೊತ್ತಿಲ್ಲ.
ಈಗಾಗಲೇ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದು ಆಗಿದೆ ಎಂದು ಟಾಂಗ್ ನೀಡಿದರು. ಮುಂಬರಲಿರುವ 2023ರ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಇರುವುದಿಲ್ಲ ಎಲ್ಲರೂ ಬಿಜೆಪಿ ಪಕ್ಷಕ್ಕೆ ಬರಲಿದ್ದಾರೆ. ಮುಂದೆಯೂ ಕೇಂದ್ರ-ರಾಜ್ಯದಲ್ಲಿ ನಮ್ಮದೇ ಡಬಲ್ ಇಂಜಿನ್ ಸರ್ಕಾರದ ಆಡಳಿತ ಇರುತ್ತದೆ. ನಾವು ಯಾರಿಗೂ ರೆಡ್ ಕಾರ್ಪೇಟ್ ಹಾಸುವುದಿಲ್ಲ ಸ್ವಯಂ ಪ್ರೇರಿತರಾಗಿ ಬಂದರೆ ಸ್ವಾಗತಿಸುತ್ತೇವೆ. ಬಿಜೆಪಿ ಪಕ್ಷಕ್ಕೆ ಯಾರನ್ನೂ ಒತ್ತಾಯದಿಂದ ಕರೆ ತರುವಂತ ಅವಶ್ಯಕತೆ ಇಲ್ಲ. ಉತ್ತಮರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿ ಕೊಳ್ಳುವುದು ಬಿಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು. ಕೋಲಾರವು ರಾಜ್ಯದ ಎಸ್.ಸಿ. ಸಮುದಾಯದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ಎಸ್.ಸಿ. ಮೋರ್ಚಾದ ಪ್ರಶಿಕ್ಷಣ ವರ್ಗದ ಶಿಬಿರವು ಜಿಲ್ಲೆಯ ಐತಿಹಾಸಿಕ ದಾಖಲೆಯಾಗಿದೆ. ರಾಷ್ಟ್ರೀಯ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಿ ಉತ್ತಮ ಸಂದೇಶ ನೀಡಿದ್ದಾರೆ. 13 ಗಂಟೆಗಳ ಅವಧಿಯ ಶಿಬಿರದಲ್ಲಿ ಹಲವಾರ ವಿಚಾರದಾರೆಗಳ ಚಿಂತನಾ ಮಂಥನಾ ನಡೆದವು. ನುರಿತ ವಿದ್ವಾಂಸರನ್ನು ಕರೆಸಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಯ್ದ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ 180 ಮಂದಿ ಭಾಗವಹಿಸಿದ್ದರು. ಚಿಂತನಾ ಸಭೆಗಳಿಂದ ವ್ಯಕ್ತಿತ್ವವು ವಿಕಾಸವಾಗಲಿದೆ. ಸಂಘಟನೆಗೆ ಪ್ರೇರಣೆಯಾಗಲಿದೆ. ದೇಶಭಕ್ತಿ ವಿಚಾರಗಳಿಂದ ಸವೃದ್ಧಿ ಜ್ಞಾನದ ಬೆಳವಣಿಗೆಯಾಗಲಿದೆ.
ಇವುಗಳನ್ನು ಮೈಗೊಡಿಸಿಕೊಂಡು ಮುಂದುವರೆಯುವಂತಾಗಬೇಕು, ಸಾಮಾನ್ಯ ಕ್ಷೇತ್ರದಲ್ಲೂ ಎಸ್.ಸಿ. ಸಮುದಾಯದ ನಾಯಕರಿಗೆ ಗೆಲ್ಲುವಂತ ವಿಶ್ವಾಸ ಇದ್ದರೆ ಅವಕಾಶ ಕಲ್ಪಿಸಲಾಗುವು ಉದಾಹರಣೆಗೆ ಹೊಸದುರ್ಗ ಕ್ಷೇತ್ರವು ಮೀಸಲು ಅಲ್ಲ, ಸಾಮಾನ್ಯ ಕ್ಷೇತ್ರವಾಗಿದ್ದರೂ ಸಹ ಗೂಳಿ ಹಟ್ಟಿಯ ಗೋಪಾಲಕೃಷ್ಣ ಸ್ವರ್ಧಿಸಿ ಆಯ್ಕೆಯಾಗಿರುವುದನ್ನು ಉದಾಹರಿಸಬಹುದಾಗಿದೆ ಎಂದು ಹೇಳಿದರು. ರಾಜ್ಯದಲ್ಲೂ ಸಹ ಸುಮಾರು 67 ವರ್ಷ ಆಡಳಿತ ನಡೆಸಿದ ಕಾಂಗ್ರೇಸ್ ಪಕ್ಷಕ್ಕೆ ದಲಿತರನ್ನು ಮುಖ್ಯ ಮಂತ್ರಿ ಮಾಡಬೇಕೆಂಬ ಇಚ್ಚಾಶಕ್ತಿ ಕೊರತೆ ಇರುವುದು ಕಂಡು ಬರುತ್ತಿದೆ. ದಲಿತರನ್ನು ಮುಂದೆ ಮಾಡಿಕೊಂಡು ಓಟು ಪಡೆಯುವಂತ ಕಾಂಗ್ರೆಸ್ ಪಕ್ಷವು ದಲಿತ ನಾಯಕರಿಗೆ ವಂಚಿಸುತ್ತಾ ಬಂದಿದೆ. ಆದರೆ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ 6 ತಿಂಗಳಲ್ಲಿಯೇ ಉಪಮುಖ್ಯ ಮಂತ್ರಿ ಸ್ಥಾನ ನೀಡಿದರು.
ಆದರೆ ದಲಿತರಾದ ಕೆ.ಹೆಚ್.ರಂಗನಾಥ್, ಬಸವಲಿಂಗಪ್ಪ, ಖರ್ಗೆ, ಪರಮೇಶ್ವರ್, ಕೆ.ಹೆಚ್.ಮುನಿಯಪ್ಪರಿಗೆ ಏಕೆ ಮುಖ್ಯ ಮಂತ್ರಿ ಸ್ಥಾನದ ಅವಕಾಶ ನೀಡಲಿಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಉಪಮುಖ್ಯ ಆಗಿದ್ದರೂ ಸಹ ದಲಿತರನ್ನು ಹತ್ತಿರಕ್ಕೆ ಸೇರಿಸಲಿಲ್ಲ. ದಲಿತರಿಗೆ ಅಧಿಕಾರ ನೀಡಬೇಕಾಗುತ್ತದೆ ಎಂದು 36 ಸಂಖ್ಯಾ ಬಲ ಇದ್ದ ಜೆ.ಡಿಎಸ್. ಪಕ್ಷದವರ ಮನೆ ಬಾಗಿಲಿಗೆ ಹೋಗಿ ಅಧಿಕಾರ ಒಪ್ಪಿಸಿ ಬಂದಿರುವುದಕ್ಕೆ ಅವರಿಗೆ ನಾಚಿಕೆಯಾಗಲಿಲ್ಲವೇ ಪ್ರಶ್ನಿಸಿದ ಅವರು ನಮ್ಮ ಅಧಿಕಾರಕ್ಕೆ ಬಂದ ನಂತರ ನಾವು ಗೋವಿಂದ ಕಾರಜೋಳರಿಗೆ ಉಪಮುಖ್ಯ ಮಂತ್ರಿ ಸ್ಥಾನ ಕಲ್ಪಿಸಿದ್ದೇವೆ ಎಂದರು.
ಮುಸ್ಲಿಂ ವ್ಯಕ್ತಿಯಿಂದ ಗಣಪತಿ ದೇಗುಲ ನಿರ್ಮಾಣ: ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಕೋಲಾರ..!
ಇನ್ನು ಬಳಿಕ ಕೋಲಾರ ಸಂಸದರಾದ ಎಸ್.ಮುನಿಸ್ವಾಮಿ ಮಾತನಾಡಿ ದಲಿತರೆಲ್ಲಾ ಕಾಂಗ್ರೆಸ್ ಪಕ್ಷದ ಬೆಂಬಲಿತರಲ್ಲ. ಕಾಂಗ್ರೆಸ್ ಪಕ್ಷಕ್ಕಿಂತ ಬಿಜೆಪಿ ಪಕ್ಷದಲ್ಲಿ ಹೆಚ್ಚು ಮಂದಿ ದಲಿತರು ಇದ್ದಾರೆ. ೨೦೨೩ರ ಚುನಾವಣೆಗೆ ರಾಜ್ಯದ 226 ಕ್ಷೇತ್ರಗಳ್ಲಲ್ಲೂ ಪೂರ್ವ ಸಿದ್ದತೆಗಳ ಬಗ್ಗೆ ಶಿಬಿರದಲ್ಲಿ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ಕನಿಷ್ಠ ೪ ಕ್ಷೇತ್ರಗಳನ್ನು ತನ್ನದಾಗಿಸಿ ಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಎಸ್.ಸಿ ಮೋರ್ಚಾದ ಪ್ರಶಿಕ್ಷ ವರ್ಗದ ಶಿಬಿರದಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದೆ ಎಂದರು. ಕೋಲಾರ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ.
ಸಿದ್ದರಾಮಯ್ಯ, ಪರಮೇಶ್ವರ್, ಕೊತ್ತನೂರು ಮಂಜುನಾಥ್ ಸೇರಿದಂತೆ ಹಲವಾರು ಹೊರಗಿನವರನ್ನು ಅಹ್ವಾನಿಸುತ್ತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಸ್ಥಳೀಯರು ಯಾರು ಸಿಗುತ್ತಿಲ್ಲ ಹಾಗಾಗಿ ಮೂರು ಮೂರು ದಿನಕ್ಕೆ ಒಬ್ಬರನ್ನು ಕರೆ ತಂದು ಹೈಕಮಾಂಡ್ ಸೂಚಿಸಿದೆ ಎಂದು ಪರಿಚಯಿಸಿ ಎರಡ್ಮೂರು ದಿನ ಕ್ಷೇತ್ರದಲ್ಲಿ ತಿರುಗಾಡಿಸಿ ನಂತರ ಎಲ್ಲಾ ಕಸಿದು ಓಡಿಸುತ್ತಿರುವುದು ನೀವು ನೋಡಿರುವಿರಿ ಎಂದರು. ಸಿದ್ದರಾಮಯ್ಯ ಟೀಮ್ ಎಲ್ಲರನ್ನೂ ವಿಶ್ವನಾಥ್, ಜಿ.ಟಿ.ದೇವೆಗೌಡ, ಪರಮೇಶ್ವರ್ ಸೇರಿದಂತೆ ಅನೇಕರನ್ನು ಸೋಲಿಸುವುದೇ ಅವರ ಕೆಲಸವಾಗಿದೆ ಎಂದು ಎಲ್ಲರ ಕಿವಿಯಲ್ಲೂ ಹೂವು ಇಡಲು ಮುಂದಾಗಿದೆ ಎಂದು ಹೇಳಿದರು.