ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಗಲಾಟೆ ಮುಂದುವರಿದಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ 200 ಯುನಿಟ್ ವಿದ್ಯುತ್ ಫ್ರೀ ವಿಚಾರ ಇದೀಗ ಸುದ್ದಿಗೆ ಗ್ರಾಸವಾಗುತ್ತಿದೆ.
ಕಲಬುರಗಿ (ಮೇ.26) : ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಗಲಾಟೆ ಮುಂದುವರಿದಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ 200 ಯುನಿಟ್ ವಿದ್ಯುತ್ ಫ್ರೀ ವಿಚಾರ ಇದೀಗ ಸುದ್ದಿಗೆ ಗ್ರಾಸವಾಗುತ್ತಿದೆ. ಕಲಬುರಗಿ ನಗರದ ತಾರಫೈಲ್‌ನಲ್ಲಿ ಮಹಿಳೆಯೊಬ್ಬಳು ಕರೆಂಟ್‌ಬಿಲ್ ಕಟ್ಟೋದಿಲ್ಲವಂದು ಜೆಸ್ಕಾಂ ಮೀಟರ್ ರೀಡರ್ ಜೊತೆ ವಾಗ್ವಾದ ನಡೆಸದ ಬೆನ್ನಲ್ಲೇ ಇದೀಗ ಅಫಜಲ್ಪುರ ತಾಲೂಕಿನ ಭಾಸ್ಗಿ ಊರಲ್ಲಿ ಪಂಚಾಯ್ತಿ ಸದಸ್ಯರೇ ಕರೆಂಟ್ ಬಿಲ್ ಕಟ್ಟೋದಿಲ್ಲವೆಂದು ಹೇಳಿಕೆ ನೀಡುತ್ತ ಇಡೀ ಊರಲ್ಲಿ ಬಿಲ್ ಕ್ಟದಂತೆ ಅಭಿಯಾನ ಮಾಡೋದಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಹೀಗಾಗಿ ಕಲಬುರಗಿ(Kalaburagi)ಯಲ್ಲೂ ಲೈಟ್ ಬೀಲ್ ಕಟ್ಟಲ್ಲ ಕಟ್ಟಲ್ಲ ಎಂದು ಜನರ ಅಭಿಯಾನ ದಿನ ಕಳೆದಂತೆ ತೀವ್ರಗೊಳ್ಲುತ್ತಿದೆ. ಕಾಂಗ್ರೇಸ್ ಸರ್ಕಾರ (Congress government)ಅಧಿಕಾರಕ್ಕೆ ಬಂದರೆ 200ಯುನಿಟ್ ಫ್ರೀ ಎಂದಿದ್ದಾರೆ, ಈಗ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದಿದೆ ನಾವು ಕಟ್ಟೊಲ್ಲ ಎಂದು ಅಫಜಲಪುರ ತಾಲೂಕಿನ ಬಾಸ್ಗಿ ಗ್ರಾಮದಲ್ಲಿ ಗ್ರಾಮಸ್ಥರೇ ಹೇಳಿರುವ ವಿಡಿಯೋ ಇದಾಗಿದೆ.
undefined
ಎಮ್ಮೆಲ್ಲೆ ಬಸನಗೌಡ ಹೇಳ್ಯಾರಾ, ಕರೆಂಟ್ ಬಿಲ್ ಕಟ್ಟಂಗಿಲ್ಲ, ಏನ್ಮಾಡ್ತಿರಾ ಮಾಡ್ಕೊಳ್ಳಿ
ಗ್ರಾಮ ಪಂಚಾಯತಿ ಸದಸ್ಯ ಸಂಗಯ್ಯ ಹೀರೇಮಠ್ ಅವರಿಂದ ವಿದ್ಯುತ್ ಬಿಲ್ ಪಾವತಿಗೆ ತಕರಾರು ಮಾಡಿರುವ ಪ್ರಸಂಗ ವಿಜಡಿಯೋದಲ್ಲಿ ಚಿತ್ರಣವಾಗಿದೆ. 538 ರೂಪಾಯಿ ವಿದ್ಯುತ್ ಬಿಲ್ ಕಟುವಂತೆ ಜಿವಿಪಿಗಳು ಮನೆಗೆ ಬಂದಾಗ ಬಿಲ್ ಕಟ್ಟೊದಕ್ಕೆ ತಕರಾರು ಎತ್ತಲಾಗಿದೆ. ಯಾರು ಕರೆಂಟ್ ಬಿಲ್ ಕಟ್ಟದಂತೆ ಗ್ರಾಮದಲ್ಲಿ ಪ್ರಚಾರ ಮಾಡೋದಾಗಿಯೂ ಹೇಳಲಾಗಿದೆ.
ಸಿದ್ದರಾಮಯ್ಯ ಮೊದಲೇ ಹೇಳಿದ್ದಾರೆ ವಿದ್ಯುತ್ ಫ್ರೀ ಎಂದು, ಸರ್ಕಾರ ಬಂದಿದೆ ಹೋಗಿ ಅವರನ್ನೇ ಕೇಳಿ, ಕರೆಂಟದ ಬಿಲ್ ಕಟ್ಟಿಅಂತಾ ಇಲ್ಲಿಗೆ ಕೇಳೊಕೆ ಬರಬೇಡಿ. ಸಿದಾ ಬಂದ ಹಾಗೇ ವಾಪಾಸ್ ಹೋಗಿ, ಹೋಗಿ ಸರ್ಕಾರಕ್ಕೆ ಕೇಳಿ ಎಂದು ಗ್ರಾಮ ಪಂಚಾಯತ್ ಸದಸ್ಯ ಸಂಗಯ್ಯ ಹಿರೇಮಠ ವಿಡಿಯೋದಲ್ಲಿ ಜಿವಿಪಿಗೆ ಖಡಕ್ ಸಂದೇಶ ನೀಡಿದ್ದಾರೆ.
ಕರೆಂಟ್ ಬಿಲ್ ಕೊಡಬೇಡಿ, ನಾವು ಕಟ್ಟಲ್ಲ: ಮೆಸ್ಕಾಂ ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿದ ಉಡುಪಿ ನಾಗರಿಕ