ದಿನಕ್ಕೊಬ್ರು ನಮ್ಮ ಮನೆಗೆ ಬರುತ್ತಿದ್ದಾರೆ : ಕೈ ದೊಣ್ಣೆ ನಾಯಕರ ಕೇಳ್ಬೇಕಾ ನಾವು..?

Suvarna News   | Asianet News
Published : Oct 02, 2021, 02:58 PM IST
ದಿನಕ್ಕೊಬ್ರು ನಮ್ಮ ಮನೆಗೆ ಬರುತ್ತಿದ್ದಾರೆ : ಕೈ ದೊಣ್ಣೆ ನಾಯಕರ ಕೇಳ್ಬೇಕಾ ನಾವು..?

ಸಾರಾಂಶ

ಈಗ ಜೆಡಿಎಸ್ ಬಿಟ್ಟು ಹೋಗುತ್ತಿರುವ ಯಾರೂ ಪಕ್ಷದ ಬಲವರ್ಧನೆಗೆ ಶಕ್ತಿ ತುಂಬಿದವರಲ್ಲ ಪಕ್ಷ ಬಿಡುವವರೆಲ್ಲಾ ಪಕ್ಷಕ್ಕಾಗಿ ಕೆಲಸ ಮಾಡಿಲ್ಲ. ನಿನ್ನೆಯೂ ಒಬ್ಬರು ಬಿಜೆಪಿಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ.

 ಬೆಂಗಳೂರು (ಅ.02): ಈಗ ಜೆಡಿಎಸ್ (JDS) ಬಿಟ್ಟು ಹೋಗುತ್ತಿರುವ ಯಾರೂ ಪಕ್ಷದ ಬಲವರ್ಧನೆಗೆ ಶಕ್ತಿ ತುಂಬಿದವರಲ್ಲ ಎಂದು ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. 

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು ಪಕ್ಷ ಬಿಡುವವರೆಲ್ಲಾ ಪಕ್ಷಕ್ಕಾಗಿ ಕೆಲಸ ಮಾಡಿಲ್ಲ. ನಿನ್ನೆಯೂ ಒಬ್ಬರು ಬಿಜೆಪಿಗೆ ಅಪ್ಲಿಕೇಷನ್ ಹಾಕಿಕೊಂಡಿದ್ದಾರೆ. ಆ ವ್ಯಕ್ತಿ ಹಿಂದೆ ರಾಮಕೃಷ್ಣ ಹೆಗಡೆ ಕಾಲದಿಂದ ಹಲವು ಬಾರಿ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಅವರು ಎಂದೂ ಯಶಸ್ಸು ಕಂಡಿರಲಿಲ್ಲ. ಅವರಿಂದ ಪಕ್ಷ ಸಂಘಟನೆ ಆಗಿದೆಯಾ...? ಅವರು ಗೆದ್ದಿದ್ದು ನನ್ನ ಬಲದಿಂದ ಎಂದು ವಿಧಾನಪರಿಷತ್ ಸದಸ್ಯ ಸಂದೇಶ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಂದಗಿ ಜೆಡಿಎಸ್‌ ಅಭ್ಯರ್ಥಿ ಘೋಷಣೆ : ಮಹಿಳೆಗೆ ಮಣೆ

ಇತ್ತೀಚಿನ ಜೆಡಿಎಸ್ ನಾಲ್ಕು ದಿನಗಳ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದೇವೆ. ನಾಳೆ (ಅ.03-04) ನಾಡಿದ್ದು ಅಲ್ಪಸಂಖ್ಯಾತರ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ. ಸೋಮವಾರ (ಅ.04) ಎಸ್ ಸಿ ಎಸ್.ಟಿ  (SC-ST) ಕಾರ್ಯಾಗಾರ ಓಬಿಸಿ ಕಾರ್ಯಾಗಾರ ಏರ್ಪಾಡು ಮಾಡಿದ್ದೇವೆ. ಮುಂದಿನ ಅಭ್ಯರ್ಥಿ ಗಳಾಗುವವರ ಪಟ್ಟಿ ಸಿದ್ದಪಡಿಸಿದ್ದೇವೆ. ಇದೆಲ್ಲವನ್ನು ತಾವು ಗಮನಿಸಿದ್ದೀರಿ ಎಂದರು.

ಜನತಾ ಪರ್ವ ಪ್ರಾರಂಭಿಕವಾಗಿ ಸಂಘಟನೆಯ ಕಾರ್ಯಕ್ರಮ. 1.O ಇಂದ 10.O ತನಕ ನಿರಂತರ ಪಕ್ಷ ಸಂಘಟನೆಗೆ ಚಾಲನೆ ಕೊಟ್ಟಿದ್ದೇವೆ. ಇದು ಜೆಡಿಎಸ್ ನ ಆರಂಭಿಕ ಶೂರತ್ವ ಅಂತ ಭಾವನೆ ಇಟ್ಟುಕೊಂಡಿದ್ದಾರೆ ಹಲವರು. ಒಂದು ಕಡೆ ಸಂಘಟನೆ, ಇನ್ನೊಂದು ಕಡೆ ಜೆಡಿಎಸ್ ಮನೆ ಖಾಲಿ ಆಗುತ್ತಿದೆ ಎನ್ನುವ ದೊಡ್ಡಸುದ್ದಿಗಳು ಬರುತ್ತಿವೆ. ನಮಗೆ ಇದರಲ್ಲಿ ಯಾವುದೇ ಶಾಕ್ ಇಲ್ಲ. ಮಾಧ್ಯಮದವರು ಇಂಥ ಮಾಹಿತಿ ಸಿಕ್ಕು ಶಾಕ್ ಗೆ ಒಳಗಾಗಿದ್ದಾರೆ  ಎಂದರು.

ನನ್ನ ತಲೆಯಲ್ಲಿ ಇನ್ನೂ ಒಂದೇರಡು ಕೂದಲು ಉಳಿಸ್ಕೊಂಡಿದ್ದೀನಿ. ಐದು ವರ್ಷ ನೀವೇ  ಇದ್ರಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಈಗೇನೋ ಮಾಡುತ್ತಿದ್ದಾರೆ ಕಾಂಗ್ರೆಸ್ ನವರು. ಬಳ್ಳಾರಿಯಿಂದ ಬಂದಿದ್ದರಲ್ಲಪ್ಪ ಸಿದ್ದರಾಮಯ್ಯನವರೇ (Siddaramaiah). ಐದು ವರ್ಷ ಏನು ಕೊಟ್ಟಿರಿ? 18 ಸಾವಿರ ಕೋಟಿ ಎಸ್ಟಿಮೇಟ್ ಮಾಡಿ ಈಗ ಎಷ್ಟಾಗಿದೆ..? ಕಾಂಗ್ರೆಸ್ ನವರ ಡಬಲ್ ಸ್ಟ್ಯಾಂಡರ್ಡ್ ಇದು. ಎರಡೂ ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿ ಗುತ್ತಿಗೆ ತೆಗೆದುಕೊಂಡಿಲ್ಲ. ಅವರ ಜೇಬು ತುಂಬಿಸಿಕೊಳ್ಳೋ ಗುತ್ತಿಗೆ ತೆಗೆದುಕೊಂಡಿದ್ದಾರೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡೋದು ನಿಲ್ಲಿಸಿ ಮೊದಲು ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.

ಜೆಡಿಎಸ್ ಸೋಲು : ಮೋಸದ ರಾಜಕಾರಣ ಸಾಮಾನ್ಯವಾಗಿದೆ ಎಂದು ಸಾ ರಾ ಅಸಮಾಧಾನ

ಕಲಬುರ್ಗಿ (Kalaburagi) ಮಹಾನಗರ ಪಾಲಿಕೆಯಲ್ಲಿ ನಾಲ್ಕು ಸೀಟು ಗೆದ್ದಿದ್ದಿವೆ. ದಿನಕ್ಕೆ ಒಬ್ಬರು ನಮ್ಮ ಮನೆಗೆ ಬರ್ತೀರಾ. ಬಿಜೆಪಿ ಕಾಂಗ್ರೆಸ್ ದೊಣ್ಣೆ ನಾಯಕರ ಕೇಳಿ ನಾನು ಕ್ಯಾಂಡಿಡೇಟ್ ಹಾಕಬೇಕಾ..? ಮುಸ್ಲಿಂ ಕ್ಯಾಂಡಿಡೇಟ್ ಹಾಕಿದರೆ ಬಿಜೆಪಿಗೆ ಅನುಕೂಲ ಆಗಲಿ ಅಂತ ಹಾಕಿದ್ದೇನೆ ಎನ್ನುವುದು. ಒಬಿಸಿ ಹಾಕಿದರೆ ಕಾಂಗ್ರೆಸ್ ಮುಗಿಸೋಕೆ ಎನ್ನುತ್ತಾರೆ. ಏನೆ ಮಾಡಿದರು ಮಾತನಾಡುತ್ತಾರೆ ಎಂದು ಮಾಜಿ ಸಿಎಮ ಎಚ್ ಡಿಕೆ ವಾಕ್ ಪ್ರಹಾರ ನಡೆಸಿದರು. 

ಜಾತಿ ರಾಜಕೀಯ ಮಾಡಬಾರದು ಅಂತ ಹೇಳಿದವರು ಇವರೇ. ಎಷ್ಟೇ ಆದರೂ ಒಕ್ಕಲಿಗ ಸಮುದಾಯ ನಮ್ಮನ್ನು ಕೈ ಬಿಡಲ್ಲ. ಈಗ ಮತ್ತೆ ನಮ್ಮ ಸಮುದಾಯದ ನಾಯಕರನ್ನು ಕೈ ಹಾಕೋದಕ್ಕೆ ಹೊರಟಿದ್ದಾರಲ್ಲ. ಕಾಂಗ್ರೆಸ್ 38-40 ಸೀಟಿಗೆ ಬಂದು ನಿಲ್ಲುತ್ತಾರೆ. ನಿಷ್ಟೆ ಎನ್ನೋದು ಯಾವ ಪಕ್ಷದಲ್ಲಿ ಇಲ್ಲ. ನಮ್ಮ ಕಾರ್ಯಕರ್ತರಲ್ಲಿ ನಿಷ್ಟೆ ಕೊರತೆ ಇಲ್ಲ. ಸ್ಥಾನ ಮಾನದ ಬಗ್ಗೆ ಆಸೆ ಇಟ್ಟುಕೊಂಡವರಿಗೆ ನಿಷ್ಠೆ ಇರಲ್ಲ ಎಂದರು.

ವಿಧಾನ ಪರಿಷತ್ ನಲ್ಲೂ4-5 ರಿಂದ ಸ್ಥಾನ ಸ್ಥಳೀಯ ಸಂಸ್ಥೆಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಸಿಎಂ ಇಬ್ರಾಹಿಂ ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನೂ ಚುನಾವಣೆಗೆ 18 ತಿಂಗಳು ಬಾಕಿ ಇದೆ. ಆಗ ಏನೇನಾಗತ್ತೋ ನೋಡೋಣ. ನಮ್ಮ ಮನೆಗೆ ಕೈ ಹಾಕ್ತೀವಿ ಅಂತಾರಲ್ಲ. ಕಾಂಗ್ರೆಸ್ ಪರಿಸ್ಥಿತಿ ಏನೇನಾಗುತ್ತದೆಯೋ.ಅವರ ಮನೆಗೆ ಅವರೇ ಬೆಂಕಿ ಇಟ್ಟುಕೊಳ್ಳುತ್ತಾರೋ ಏನೋ ಎಂದು ಸಿದ್ದರಾಮಯ್ಯ ಮಾತಿಗೆ ಎಚ್ ಡಿ ಕೆ ತಿರುಗೇಟು ನೀಡಿದರು.

ಕಾಂಗ್ರೆಸ್‌ನತ್ತ ಮುಖ ಮಾಡಿದ ಜೆಡಿಎಸ್ ನಾಯಕರು: ರೇವಣ್ಣ ಸಿಡಿಮಿಡಿ

ಸಿದ್ದರಾಮಯ್ಯ ನನಗೆ ಆರ್ಡರ್ ಮಾಡೋದಕ್ಕೆ ಕಮೆಂಟ್ ಮಾಡೋದಕ್ಕೆ ಹೂ ಈಸ್ ಹೀ. ಎಲ್ಲಿ ಯಾವ ಅಭ್ಯರ್ಥಿ (Candidate) ಹಾಕಬೇಕು ಅಂತ ನಾವು ಇವರನ್ನು ಕೇಳಿ ಹಾಕಬೇಕಾ..? ಇವರ ಮುಂದೆ ಅರ್ಜಿ ಹಿಡಿದಿಕೊಂಡು ನಿಲ್ಲಬೇಕಾ..? ನಮ್ಮ ಪಕ್ಷದ ವಿಚಾರ ಡಿಕ್ಟೇಟ್ ಮಾಡೋದಕ್ಕೆ ಸಿದ್ದರಾಮಯ್ಯ ಯಾರು ಎಂದು ಎಚ್ ಡಿಕೆ  ಗರಂ ಆದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌