ಕಾಂಗ್ರೆಸ್ ವಿಧಾನಸೌಧವನ್ನು ಸಂಪೂರ್ಣ ರಾಡಿ ಮಾಡಿದೆ. ಅದನ್ನೇ ಸರಿಪಡಿಸಲು ನಮಗೆ ಆಗುತ್ತಿಲ್ಲ. ಇನ್ನು ಅವರು ಸರಿಪಡಿಸುತ್ತಾರೆ ಎಂದರೆ ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ (ಜ.27) : ಕಾಂಗ್ರೆಸ್ ವಿಧಾನಸೌಧವನ್ನು ಸಂಪೂರ್ಣ ರಾಡಿ ಮಾಡಿದೆ. ಅದನ್ನೇ ಸರಿಪಡಿಸಲು ನಮಗೆ ಆಗುತ್ತಿಲ್ಲ. ಇನ್ನು ಅವರು ಸರಿಪಡಿಸುತ್ತಾರೆ ಎಂದರೆ ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ವಿಧಾನಸೌಧ(Vidhanasoudha)ಕ್ಕೆ ಬಿಜೆಪಿಯಿಂದ ಕಳಂಕ ಅಂಟಿಕೊಂಡಿದೆ. ಗಂಜಲು ಹಾಕಿ ಶುದ್ಧಗೊಳಿಸುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(KD Shivakumar) ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನವರು ಈ ಹಿಂದೆ ಇಡೀ ದೇಶದಲ್ಲಿ ಅಷ್ಟೆಅಲ್ಲದೆ, ನಮ್ಮ ರಾಜ್ಯದಲ್ಲೂ ರಾಡಿ ಮಾಡಿ ಹೋಗಿದ್ದಾರೆ. ಆ ರಾಡಿಯನ್ನು ತೊಳೆಯಲು ನಮ್ಮಿಂದಲೇ ಆಗುತ್ತಿಲ್ಲ. ಇನ್ನು ಅವರು ತೊಳೆಯುತ್ತಾರೆ ಎಂಬುದು ಹಾಸ್ಯಾಸ್ಪದ. ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ತಿರುಗೇಟು ನೀಡಿದರು.
ಬೆಳಗಾವಿ, ಹುಬ್ಬಳ್ಳಿ, ಬೀದರ್‌ನಲ್ಲಿ ಸಂಭ್ರಮದ 74 ನೇ ಗಣರಾಜ್ಯೋತ್ಸವ ಆಚರಣೆ
ಅರ್ಕಾವತಿ ಹಗರಣದಲ್ಲಿ 900 ಎಕರೆ ಜಮೀನು ಡಿನೋಟಿಫಿಕೇಶನ್ ಮಾಡಿದ್ದಾರೆ. ಅದರಲ್ಲಿ ಏನು ರಾಡಿಯಾಗಿದೆ ಎಂಬುದನ್ನು ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನೇ ಹೊರ ಹಾಕಿದ್ದೇನೆ. ಈಗ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಅವರು ರಾಡಿ ತೊಳೆಯುತ್ತೇವೆ ಎನ್ನುತ್ತಿದ್ದಾರೆ. ಈ ಮೊದಲು ರಾಡಿ ಮಾಡಿ ಹೋದವರು ಅವರೇ ಎಂದು ಹರಿಹಾಯ್ದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಗಿಮಿಕ್ ಮಾಡುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹಾಗೂ ರಮೇಶ ಜಾರಕಿಹೊಳಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಚುನಾವಣೆ ಅಕ್ರಮದ ದೂರು ದಾಖಲಿಸಿರುವುದು ಅದರಲ್ಲಿ ಒಂದಾಗಿದೆ. ಜನನಾಯಕರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಹಿಂದೆ ಅವರು ಯಾವ ರೀತಿ ಚುನಾವಣೆ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಅವರು ಬಹಿರಂಗವಾಗಿ ಕುಕ್ಕರ್ ಹಂಚುವ ಮೂಲಕ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆ. ಚುನಾವಣೆ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದು ಆರೋಪಿಸಿದರು. ಗಣತಂತ್ರದ ದಿನ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನ: ನಾರಿಶಕ್ತಿಯನ್ನು ಅಭಿನಂದಿಸಿದ ಜೋಶಿ