ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ: ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಿಎಂ ಕಿಡಿ

By Ravi JanekalFirst Published Aug 8, 2024, 4:19 PM IST
Highlights

ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ. ಬಿಜೆಪಿ ಎಂದಿಗೂ ಜಾತ್ಯಾತೀತ ಪರ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರು (ಆ.8): ಎನ್‌ಡಿಎ ಸರ್ಕಾರಕ್ಕೆ ಅಲ್ಪಸಂಖ್ಯಾತರ ಮೇಲೆ ಕೋಪ ಇದೆ. ಬಿಜೆಪಿ ಎಂದಿಗೂ ಜಾತ್ಯಾತೀತ ಪರ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಾಳೆ ಕಾಂಗ್ರೆಸ್ ಜನಾಂದೋಲನ ಸಮಾವೇಶ ಹಿನ್ನೆಲೆ ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದರು. ವಕ್ಫ್ ಬೋರ್ಡ್ ಆಸ್ತಿ ಕಾನೂನು ತಿದ್ದುಪಡಿ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಒಂದು ಕಮುನಲ್ ಪಾರ್ಟಿ. ಬಿಜೆಪಿ ಯಾವತ್ತು ಸಾಮಾಜಿಕ ನ್ಯಾಯದ ಪರವಾಗಿಲ್ಲ. ಮತದಾರರ ಬಗ್ಗೆ ಕಾನೂನು ತಂದವರು ಬಿಜೆಪಿಯವರು. ಇದೀಗ ವಕ್ಫ್ ಬೋರ್ಡ್ ವಿಚಾರದಲ್ಲಿ ಅದನ್ನೇ ಮಾಡಲು ಹೊರಟಿದ್ದಾರೆ. ನಾವು ಇದನ್ನು ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ. ನಾವೆಲ್ಲ ಸಂವಿಧಾನದ ಮೇಲೆ ನಂಬಿಕೆ ಇಟ್ಟವರು. ಎನ್‌ಡಿಎ ಸರ್ಕಾರದ ಈ ನಿರ್ಧಾರವನ್ನು ನಾವು ವಿರೋಧಿಸುತ್ತೇವೆ ಎಂದರು.

Latest Videos

ಕಾನೂನು ತಜ್ಞ ಸಿದ್ದರಾಮಯ್ಯನವರೇ ಓಟ್‌ಬ್ಯಾಂಕ್ ಹೆದರಿ ಅವರ ಪರ ಹೇಳಿಕೆ ಕೊಡ್ತೀರಾ?: ಯತ್ನಾಳ್ ಪ್ರಶ್ನೆ

ಇನ್ನು ಸಿಎಂ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹ ಮಹಿ ಕೃಷ್ಣ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಕೇಸ್ ಹಾಕ್ತಾರಾ? ಹಾಕಲಿ ಇಂತಹ ಸುಳ್ಳು ಕೇಸ್‌ಗಳಿಗೆ ಉತ್ತರ ಕೊಡುವ ಶಕ್ತಿ ನಮಗಿದೆ. ಕಾನೂನಿನಲ್ಲಿ ಸುಳ್ಳು ಕೇಸ್‌ಗಳು ನಿಲ್ಲುವುದಿಲ್ಲ ಎಂದರು.

click me!