ವಕ್ಫ್‌ ಬೋರ್ಡ್ ಈಸ್ಟ್‌ ಇಂಡಿಯಾ ಕಂಪನಿ ಇದ್ದಂತೆ: ವಿಪಕ್ಷ ನಾಯಕ ಆರ್‌.ಅಶೋಕ್‌

By Kannadaprabha News  |  First Published Nov 8, 2024, 6:52 AM IST

ವಕ್ಫ್‌ ಬೋರ್ಡ್‌ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ರೈತರ ಭೂಮಿಯನ್ನೆಲ್ಲಾ ವಕ್ಫ್‌ ಬೋರ್ಡ್‌ಗೆ ಬರೆದುಕೊಟ್ಟರೆ ಉಳುಮೆ ಮಾಡುವುದು ಎಲ್ಲಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು. 


ಶ್ರೀರಂಗಪಟ್ಟಣ (ನ.08): ವಕ್ಫ್‌ ಬೋರ್ಡ್‌ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ರೈತರ ಭೂಮಿಯನ್ನೆಲ್ಲಾ ವಕ್ಫ್‌ ಬೋರ್ಡ್‌ಗೆ ಬರೆದುಕೊಟ್ಟರೆ ಉಳುಮೆ ಮಾಡುವುದು ಎಲ್ಲಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರಶ್ನಿಸಿದರು. ತಾಲೂಕಿನ ಚಂದಗಾಲು ಗ್ರಾಮದಲ್ಲಿ ದೇಗುಲ ಹಾಗೂ ಸರ್ಕಾರಿ ಶಾಲೆ ಜಾಗಕ್ಕೆ ವಕ್ಫ್‌ ಕನ್ನ ಹಾಕಿರುವುದರ ವಿರುದ್ಧ ಮಾತನಾಡಿ, ಜಮೀರ್‌ಗೆ ಮಾನ-ಮರ್ಯಾದೆಯೇ ಇಲ್ಲ. ಮೊದಲು ಅವನ ಬಾಯಿಗೆ ಪ್ಲಾಸ್ಟರ್‌ ಹಾಕಬೇಕು. ಯಾರ ಜಮೀನನ್ನೂ ನುಂಗಲು ಬಿಡಬಾರದು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಸರ್ಕಾರಿ ಶಾಲೆಯನ್ನು ಉಳಿಸುವುದಕ್ಕಾಗಿ ನಾವಿಲ್ಲಿಗೆ ಬಂದಿದ್ದೇವೆ. ಆದರೆ, ಕಾಂಗ್ರೆಸ್‌ನವರು ಇಲ್ಲಿಗೆ ಯಾಕೆ ಬರುತ್ತಾರೆ ಎಂದು ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ. ನಾನು ವಿಪಕ್ಷ ನಾಯಕ. ನಮ್ಮನ್ನೇ ಪ್ರಶ್ನೆ ಮಾಡುತ್ತೀರಾ. ನೀವು ಇನ್ನು ಎಷ್ಟು ದಿನ ಅಧಿಕಾರದಲ್ಲಿರುತ್ತೀರೋ ನೋಡುತ್ತೇನೆ ಎಂದು ಸವಾಲು ಹಾಕಿದರು. ಜಮೀರ್ ಅಹಮದ್ ಖಾನ್ ಲಿಕೋ ಲಿಕೋ ಅಂತಾನೆ. ಹೀಗಾಗಿ ಎಲ್ಲ ಕಡೆ ವಕ್ಫ್‌ ಹೆಸರಿಗೆ ಆಸ್ತಿಯನ್ನು ಬರೆದಿದ್ದಾರೆ. ಸರ್ಕಾರಿ ಶಾಲೆಯನ್ನ ಹೇಗೆ ಖಬರಸ್ತಾನ್ ಎಂದು ಬರೆದರು?, ದೇಶದಲ್ಲಿ ಆರ್ಮಿ ಅವರಿಗೆ ಆಸ್ತಿ ಜಾಸ್ತಿ ಅಂತಾರೆ. ಅವರನ್ನು ಬಿಟ್ಟರೇ ಈ ಮನೆಹಾಳರದ್ದು ಜಾಸ್ತಿ ಆಸ್ತಿ ಎಂದು ಕಿಡಿಕಾರಿದರು.

Latest Videos

undefined

ಲೋಕಾಯುಕ್ತ ಪೊಲೀಸರ ವಿಚಾರಣೆ ಬಳಿಕ ಸಿಎಂ ಸಿದ್ದರಾಮಯ್ಯಗೆ ಈಗ ಇ.ಡಿ. ನೋಟಿಸ್‌?

ಎಲ್ಲ ರೈತರು ತಮ್ಮ ಜಮೀನುಗಳ ಪಹಣಿಯನ್ನು ಪರಿಶೀಲನೆ ಮಾಡಿಕೊಳ್ಳಿ. ನಮ್ಮ ದೇಶ ಉಳಿಯಬೇಕು. ಸರ್ಕಾರಿ ಶಾಲೆ ವಕ್ಫ್‌ ಹೆಸರು ಬದಲಾವಣೆ ಮಾಡದೇ ಇದ್ದರೇ ನಾನು ಬಿಡುವುದಿಲ್ಲ. ಇಲ್ಲಿಯೇ ನಾನು ಹೋರಾಟ ಮಾಡುತ್ತೇನೆ. ರೈತರ ಜಮೀನು ಉಳಿಯಬೇಕು. ನಮ್ಮ ಶಾಲೆ ನಮ್ಮ ಹಕ್ಕು. ಪ್ರಾಣ ಬಿಟ್ಟರೂ ಈ ಶಾಲೆಯನ್ನ ಬಿಟ್ಟುಕೊಡುವುದಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಹೇಳಿದರು.

ಈಗ ಲ್ಯಾಂಡ್ ಜಿಹಾದ್: ರಾಜ್ಯದಲ್ಲಿ ಲವ್ ಜಿಹಾದ್ ಆಯ್ತು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಲ್ಯಾಂಡ್ ಜಿಹಾದ್ ನಡೆಯುತ್ತಿದೆ, ರೈತರ ಹಾಗೂ ಮಠ ಮಾನ್ಯಗಳ ಜಮೀನುಗಳನ್ನು ರಾತ್ರೋ ರಾತ್ರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಒಂದು ಸಮುದಾಯದ ಒಲೈಕೆಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ, ಇದು ಹೀಗೆ ಮುಂದುವರೆದರೆ ಕನ್ನಡ ರಾಜ್ಯ ಮುಂದಿನ ದಿನಗಳಲ್ಲಿ ಮಿನಿ ಪಾಕಿಸ್ತಾನವಾಗಿ ಬದಲಾವಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.  ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್‌ ಹೆಸರು ದಾಖಲಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅ‍ವರು ಮಾತನಾಡಿದರು.

ಸಿಎಂ ಪತ್ನಿ ಪ್ರಕರಣದ ಎಫೆಕ್ಟ್: ಮುಡಾ ಎಲ್ಲ 50:50 ಸೈಟ್‌ ರದ್ದು!

ರಾಜ್ಯದಲ್ಲಿ ಭೂ ಜಿಹಾದ್‌: ಈಗ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ನಡೆಯುತ್ತಿದೆ, ಸಿಎಂ ಸಿದ್ದರಾಮಯ್ಯ ಇದರ ಪ್ರಯೋಜಕರು. ಮಹಾರಾಷ್ಟ್ರ ಚುನಾವಣೆ, ಮೂರು ಬೈ ಎಲೆಕ್ಷನ್ ಬಳಿಕ ಮತ್ತೆ ಹಳೆ ಸಿದ್ದರಾಮಯ್ಯ ಆಗುತ್ತಾರೆ. ಜನರು ಸಿದ್ದರಾಮಯ್ಯರನ್ನು ನಂಬೋದಿಲ್ಲ. ಕರ್ನಾಟಕ ರಾಜ್ಯವನ್ನು ಸ್ಲೀಪಿಂಗ್ ಸೆಲ್ ಮಾಡಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಸ್ಲೀಪ್ ಲೈಕ್ ಏ ಬೇಬಿ ಅಂತ ಮಾಡಿಕೊಟ್ಟಿದ್ದಾರೆ. ಮತಾಂದ ಮುಸ್ಲಿಮರ ಪಾಲಿಗೆ ಕರ್ನಾಟಕ ಸ್ಲೀಪ್ ಲೈಕ್ ಏ ಬೇಬಿ ಆಗಿದೆ. ಪಾಕಿಸ್ತಾನ ಕ್ಕಿಂತ ಕರ್ನಾಟಕ ಸೇಫ್ ಆಗಿದೆ ಎಂದು ಆಶೋಕ್‌ ಹೇಳಿದರು.

click me!