ನಾನು ಕಣ್ಣೀರು ಹಾಕಿ ಮತ ಪಡೆಯಲು ಬಂದಿಲ್ಲ, ಅಭಿವೃದ್ಧಿಗಾಗಿ ಇಲ್ಲಿಗೆ ಬಂದಿದ್ದೇನೆ. ಯುವಕರಿಗೆ ಉದ್ಯೋಗ ಕೊಡಿಸುವ ಮತ್ತು ಚನ್ನಪಟ್ಟಣ ತಾಲೂಕಿನ ಕೆರೆ ತುಂಬಿಸುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ನನಗೆ ಈ ಬಾರಿ ಅವಕಾಶ ಕೋಡಿ ಎಂದು ಕೇಳುತ್ತಿದ್ದೇನೆ ಎಂದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣ(ನ.08): ಚುನಾವಣಾ ಪ್ರಚಾರ ವೇಳೆ ನಾನು ಕಣ್ಣೀರು ಹಾಕಿರುವುದು ಉದ್ದೇಶಪೂರ್ವಕವಾಗಿ ಅಲ್ಲ, ನಾನಷ್ಟೇ ಅಲ್ಲ ಸಾಕಷ್ಟು ಜನ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಹಾಕಿದ್ದಾರೆ. ಕೆಲ ಸನ್ನಿವೇಶಗಳು ಕಣ್ಣಲ್ಲಿ ನೀರು ತರಿಸುತ್ತೆ. ಕಳೆದ ಚುನಾವಣೆಯಲ್ಲಿ ಸಂಸದ ಡಿ.ಕೆ ಸುರೇಶ್ ಅವರೂ ಕಣ್ಣೀರು ಹಾಕಿದ್ದರು, ಅದನ್ನು ನಾವು ಪ್ರಶ್ನೆ ಮಾಡಿದ್ವಾ? ಎಂದು ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ತಾಲೂಕಿನ ಹುಣಸನಹಳ್ಳಿಯಲ್ಲಿ ಗುರುವಾರ ಪ್ರಚಾರದ ವೇಳೆ ಸುದ್ದಿಗಾರರ ಜತೆ ಮಾತಾನಾಡಿ, ನಾನು ಕಣ್ಣೀರು ಹಾಕಿ ಮತ ಪಡೆಯಲು ಬಂದಿಲ್ಲ, ಅಭಿವೃದ್ಧಿಗಾಗಿ ಇಲ್ಲಿಗೆ ಬಂದಿದ್ದೇನೆ. ಯುವಕರಿಗೆ ಉದ್ಯೋಗ ಕೊಡಿಸುವ ಮತ್ತು ಚನ್ನಪಟ್ಟಣ ತಾಲೂಕಿನ ಕೆರೆ ತುಂಬಿಸುವ ದೊಡ್ಡ ಜವಾಬ್ದಾರಿ ಇದೆ. ಹೀಗಾಗಿ ನನಗೆ ಈ ಬಾರಿ ಅವಕಾಶ ಕೋಡಿ ಎಂದು ಕೇಳುತ್ತಿದ್ದೇನೆ ಎಂದರು.
ಸಾಯುವ ಮುನ್ನ ಮೇಕೆದಾಟಿಗೆ ಒಪ್ಪಿಸ್ತೀನಿ, ಮೋದಿಯಿಂದ ಮಾತ್ರ ಈ ಯೋಜನೆ ಅನುಷ್ಠಾನ ಸಾಧ್ಯ: ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಮತ್ತು ರಾಮನಗರ ಜಿಲ್ಲೆಗೆ ಅವಿನೋಭಾವ ಸಂಬಂಧ ಇದೆ. ದೇವೇಗೌಡರು ರಾಮನಗರ ಜಿಲ್ಲೆಗೆ ಪದಾರ್ಪಣೆ ಮಾಡಿದ್ದು ೧೯೮೩ರಲ್ಲಿ, ನಾನು ಜನಿಸಿದ್ದು ೧೯೮೮ ರಲ್ಲಿ. ಅಂದರೆ ದೇವೇಗೌಡರ ಮತ್ತು ರಾಮನಗರ ಜಿಲ್ಲೆಯ ಸಂಬಂಧ ನಾನು ಹುಟ್ಟುವುದಕ್ಕೂ ಮೊದಲೇ ಇದೆ ಎಂದರು.
ಆತ್ಮ ವಿಶ್ವಾಸ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆತ್ಮ ವಿಶ್ವಾಸ ಇದೆ, ಚುನಾವಣೆಗೆ ಇಳಿದಿದೀವಿ ಎರಡು ಪಕ್ಷದ ಕಾರ್ಯಕರ್ತರುಗಳು ನನಗೆ ಧೈರ್ಯ ತುಂಬಿಸುತ್ತಿದ್ದಾರೆ. ಚನ್ನಪಟ್ಟಣ ತಾಲೂಕಿನ ಹೆಣ್ಣು ಮಕ್ಕಳು, ಯುವಕರು, ಹಿರಿಯರ ಆಶೀರ್ವಾದ ಮಾರ್ಗದರ್ಶನದಂದ ನನಗೆ ಆತ್ಮ ಧೈರ್ಯ ಸಿಕ್ಕಿದೆ ಎಂದರು.