ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆ ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ಸಹಕಾರ ಬ್ಯಾಂಕ್ ಗಳಲ್ಲಿ ಅವರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ ವಸೂಲಾತಿ 2025ರವರೆಗೆ ಮುಂದೂಡಬೇಕು ಎಂದು ಸಹಕಾರ ಮಹಾ ಮಂಡಳದ ಅಧ್ಯಕ್ಷರು ಆದ ಚಾಂಮುಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸರ್ಕಾರವನ್ನು ಒತ್ತಾಯಿಸಿದರು.
ಕೆ.ಆರ್.ನಗರ (ಡಿ.30): ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆ ರಾಜ್ಯದ ರೈತರು ಸಂಕಷ್ಟದಲ್ಲಿದ್ದು, ಸಹಕಾರ ಬ್ಯಾಂಕ್ ಗಳಲ್ಲಿ ಅವರು ಮಾಡಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿ ವಸೂಲಾತಿ 2025ರವರೆಗೆ ಮುಂದೂಡಬೇಕು ಎಂದು ಸಹಕಾರ ಮಹಾ ಮಂಡಳದ ಅಧ್ಯಕ್ಷರು ಆದ ಚಾಂಮುಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದ ನವ ನಗರ ಅರ್ಬನ್ ಬ್ಯಾಂಕಿನ ಪ್ರಧಾನ ಕಛೇರಿಗೆ ಕಾರ್ಯನಿಮಿತ್ತ ಬೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರದ ಬ್ಯಾಂಕು ಮತ್ತು ಸಂಘಗಳಲ್ಲಿ ರೈತರು ಪಡೆದಿರುವ ಸಾಲ ಮತ್ತು ಬಡ್ಡಿಯನ್ನು ಕಟ್ಟಲಾಗದೆ ಸಂಕಷ್ಟದಲ್ಲಿದ್ದು ಅನೇಕ ರೈತರು ಆತ್ಮಹತ್ಯೆ ಹಾದಿಯನ್ನು ಹಿಡಿದಿದ್ದಾರೆ, ಆದ್ದರಿಂದ ರೈತರ ಹಿತ ಕಾಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಸರ್ಕಾರ ರೈತರ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಬೇಕು ಆದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳುತ್ತಿರುವ ನೀವು ಕನಿಷ್ಠ ಬಡ್ಡಿಯನ್ನಾದರು ಮನ್ನಾ ಮಾಡಿ ಸಾಲದ ವಸೂಲಾತಿಯನ್ನು ಮುಂದೂಡಿ ಎಂದು ಅವರು ಆಗ್ರಹಿಸಿದರು.
ಈಗಾಗಲೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರೈತರ ಸಾಲ ಮತ್ತು ಬಡ್ಡಿ ಮನ್ನಾ ಹಾಗೂ ವಸೂಲಾತಿ ಮುಂದೂಡಿಕೆ ಬಗ್ಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತಂದಿದ್ದೇನೆ ಹಾಗಾಗಿ ರೈತರು ಯಾವುದೇ ಆತಂಕ ಪಡಬಾರದು ಎಂದ ಅವರು, ನಿಮ್ಮ ನೆರವಿಗೆ ನಮ್ಮ ಪಕ್ಷ ಸದಾ ಸಿದ್ದವಿದ್ದೇವೆ ಈ ವಿಚಾರವಾಗಿ ಸರ್ಕಾರವು ಕೂಡ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.
ಯತ್ನಾಳ್ ಮಾಹಿತಿ ಮೇಲೆ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಜಗದೀಶ್ ಶೆಟ್ಟರ್
ಶಾಸಕ ಜಿ.ಟಿ. ದೇವೇಗೌಡ ಅವರನ್ನು ಬ್ಯಾಂಕಿನ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿತು. ಅಧ್ಯಕ್ಷ ಕೆ.ಎನ್. ಬಸಂತ್ ನಂಜಪ್ಪ, ನಿರ್ದೇಶಕರಾದ ವೈ.ಎಸ್. ಕುಮಾರ್, ಕೇಶವ, ಅಪ್ಸರ್ ಬಾಬು, ತಂಬಾಕು ಬೋರ್ಡ್ ನಿವೃತ್ತ ಅಧಿಕಾರಿ ಕೆ.ಎನ್. ದಿನೇಶ್, ಶಿವಕುಮಾರ್, ಪುರಸಭೆ ಮಾಜಿ ಸದಸ್ಯ ಸೈಯದ್ ಅಸ್ಲಂ, ವಕೀಲ ಶರತ್, ಮುಖಂಡ ಸುಜಯ್ ಗೌಡ, ಮಂಜುನಾಥ್, ಮರಿಗೌಡ ಇದ್ದರು.