ರಾಜಕಾರಣ ಅಂದ್ರೆ ಫುಟ್ಬಾಲ್ ಅಲ್ಲ, ಚೆಸ್ ಗೇಮ್, ಬಿಜೆಪಿ ಪಟ್ಟಿ ಬರಲಿ ಬಳಿಕ ಮಾತಾಡ್ತೇನೆ: ಡಿಕೆಶಿ

By Gowthami K  |  First Published Apr 7, 2023, 10:10 PM IST

ಟಿಕೆಟ್ ಸಿಗದವರ ಬಂಡಾಯ, ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಯಾರಿಗೂ ನಾವು ಟಿಕೆಟ್ ನೀಡುವ ಭರವಸೆ ನೀಡರಲಿಲ್ಲ ಎಂದಿದ್ದಾರೆ.


ಬೆಂಗಳೂರು (ಏ.7): ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಬಗ್ಗೆ  ಸದಾಶಿವನಗರದ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ,  ಸಿಇಸಿ ಮೀಟಿಂಗ್ ಮುಗಿದಿದೆ. ರಾಜಕಾರಣ ಅಂದ್ರೆ ಫುಟ್ಬಾಲ್ ಅಲ್ಲ, ಚೆಸ್ ಗೇಮ್. ದಳದವರು ಒಂದೇ ಲೀಸ್ಟ್ ನಲ್ಲಿ ಬಿಡುಗಡೆ ಮಾಡಿದ್ರಾ?  ಎಂದಿದ್ದಾರೆ. ಇನ್ನು ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಸಿಗದವರ ಬಂಡಾಯ, ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಕೆಶಿ, ಯಾರಿಗೂ ನಾವು ಟಿಕೆಟ್ ನೀಡುವ ಭರವಸೆ ನೀಡರಲಿಲ್ಲ  ಅನ್ ಕಂಡೀಶನಲ್ ಆಗಿ ಪಾರ್ಟಿ ಸೇರ್ಪಡೆ ಮಾಡ್ಕೋಂಡಿದ್ದೇವೆ. ನಮ್ಮದೇ ಆದ ಕೆಲವು ರಾಜಕೀಯ ಲೆಕ್ಕಾಚಾರ ಇರುತ್ತದೆ. ಬಿಜೆಪಿ ಪಟ್ಟಿ ಬರಲಿ ನಂತರ ಮಾತಾಡ್ತೇನೆ ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆ ಘೋಷಣೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಮ್ಮ ನೆಲ ಜಲ ಉಳಿಸುವವರು  ಮಾತೇ ಆಡ್ತಿಲ್ಲ. ನಾವೇನು ಚುನಾವಣೆ ಬಿಜಿಯಲ್ಲಿ ಇದ್ದೇವೆ . ನಮ್ಮ ಸಿನಿಮಾ ನಟರು, ಕನ್ನಡ ಪರ ಹೋರಾಟಗಾರರು ಈ ಬಗ್ಗೆ ಧ್ವನಿ ಎತ್ತಬೇಕು. ಟಿಕೆಟ್ ಗೊಂದಲ ವಿಚಾರ  ಎಲ್ಲಾ ಸರಿ ಮಾಡ್ತೀವಿ. ನಿಮ್ಮ ಹತ್ರ (ಮಾಧ್ಯಮಗಳನ್ನ) ಮುಹೂರ್ತ ಕೇಳಿ ಮೂರನೇ ಪಟ್ಟಿ ಬಿಡುಗಡೆ ಮಾಡ್ತೇನೆ ಎಂದು ಹೇಳಿದ್ದಾರೆ.

Tap to resize

Latest Videos

ಅಮುಲ್ ಹೇರಿಕೆ ವಿಚಾರಕ್ಕೆ ಸಂಬಂಧಿದಂತೆ ಮಾತನಾಡಿ, ಗುಜರಾತ್ ಬೆಳಿಬೇಕು ಕರ್ನಾಟಕ ಮುಚ್ಚಬೇಕು, ಅಮುಲ್ ಬೆಳಿಬೇಕು , ಕೆಎಂಎಫ್  ಮುಚ್ಚಬೇಕು ಎಂಬ ನೀತಿ ಅವರದ್ದಾಗಿದೆ ಎಂದರು.

ವೈ ಎಸ್ ವಿ ದತ್ತ ಅವರಿಗೆ ಟಿಕೆಟ್ ಮಿಸ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಾವು ಟಿಕೆಟ್ ಕೊಡ್ತೀವಿ ಅಂತ ಕರೆದುಕೊಂಡಿಲ್ಲ. ಯಾರನ್ನೇ ಆಗಲಿ ಭರವಸೆ ಕೊಟ್ಟು ಕರೆದುಕೊಂಡಿರಲ್ಲ. ಎಲ್ರೂ ಕಾರ್ಯಕರ್ತರಾಗಿ ಕೆಲಸ ಮಾಡಬೇಕು. ಗೋಪಾಲಗೌಡ ಸೇರಿದಂತೆ ಯಾರೇ ಆದರೂ ಟಿಕೆಟ್ ಗಾಗಿ ಪಕ್ಷದಲ್ಲಿ ಉಳಿದುಕೊಂಡಿರಲಿಲ್ಲ. ರಾಜಕಾರಣದಲ್ಲಿ ಎಲ್ರಿಗೂ ಅವರದ್ದೇ ಆದ ಲೆಕ್ಕಾಚಾರ ಇರುತ್ತವೆ. ಕಾದು ನೋಡಿ ಮುಂದೆ ಎಂದು ಹೇಳಿದರು.

ಕಾಂಗ್ರೆಸ್ ಕೈ ಕೊಟ್ಟಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್ ಆಕಾಂಕ್ಷಿಗಳು, ಭುಗಿಲೆದ್ದ ಆಕ್ರೋಶ!

ದತ್ತಾ  ಬಂಡಾಯ ಶಮನ ಯತ್ನ ವಿಫಲ!
ವೈ ಎಸ್ ವಿ ದತ್ತಾ ನಿವಾಸದಲ್ಲಿ ನಡೆದ ಬಂಡಾಯ ಶಮನ ಯತ್ನ ವಿಫಲವಾಗಿದೆ. ಕಡೂರು ಕ್ಷೇತ್ರದ  ಕಾಂಗ್ರೆಸ್ ಅಭ್ಯರ್ಥಿ ಕೆ ಎಸ್ ಆನಂದ್ ರಿಂದ ಬಂಡಾಯ ಶಮನಕ್ಕೆ ಯತ್ನ ನಡೆಯಿತು. ಒಂದು ಗಂಟೆಗಳ ಕಾಲ ಆನಂದ್ ಮತ್ತು  ವೈ ಎಸ್ ವಿ ದತ್ತಾ ಮಾತುಕತೆ ನಡೆಸಿದರು. ಈ ವೇಳೆ ಕಾಂಗ್ರೆಸ್ ವರಿಷ್ಠರ ನಡೆ ಬಗ್ಗೆ ವೈಎಸ್ ವಿ ದತ್ತಾ ಅಸಮಾಧಾನ ಹೊರ ಹಾಕಿದರು. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆವಿಲ್ಲ ಎಂದರು.  ಇದೇ ತಿಂಗಳು 9 ರಂದು ಕಾರ್ಯಕರ್ತರು,  ಅಭಿಮಾನಿಗಳ ಅಭಿಪ್ರಾಯ ಪಡೆದು ಬಳಿಕ  ರಾಜಕೀಯ ನಿರ್ಧಾರವೆಂದು ದತ್ತಾ ಹೇಳಿದರು. ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದ್ದ ವೈ ಎಸ್ ವಿ ದತ್ತಾ  ಕೈ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಕಡೂರು ಕ್ಷೇತ್ರದಲ್ಲಿ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು.

ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ, 18 ಮಂದಿ ಅರೆಸ್ಟ್, ಸುರಪುರ ಮತಕ್ಷೇತ್ರ ಬೂದಿ

ಇನ್ನು  ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!