ಬಾಗಲಕೋಟೆ: ರಹಸ್ಯ ಕಾಯ್ದುಕೊಂಡ ‘ತೇರದಾಳ’ ಕಾಂಗ್ರೆಸ್‌ ಟಿಕೆಟ್‌..!

By Kannadaprabha News  |  First Published Apr 7, 2023, 9:33 PM IST

ಬಾಗಲಕೋಟೆ ಜಿಲ್ಲೆಯ ಏಳು ವಿಧಾನಸಭೆಯ ಮತಕ್ಷೇತ್ರಗಳಲ್ಲಿ ಬಾಗಲಕೋಟೆಗೆ ಎಚ್‌.ವೈ.ಮೇಟಿ, ಬಾದಾಮಿಗೆ ಭೀಮಸೇನ ಚಿಮ್ಮನಕಟ್ಟಿ, ಬೀಳಗಿಗೆ ಜೆ.ಟಿ.ಪಾಟೀಲ, ಮುಧೋಳ ಮೀಸಲಿಗೆ ಆರ್‌.ಬಿ.ತಿಮ್ಮಾಪೂರ, ಹೆಸರನ್ನು ಪ್ರಕಟಿಸಿದೆ. ಜಮಖಂಡಿ ಕ್ಷೇತ್ರದಿಂದ ಆನಂದ ನ್ಯಾಮಗೌಡ ಮತ್ತು ಹುನಗುಂದ ಕ್ಷೇತ್ರದಿಂದ ವಿಜಯಾನಂದ ಕಾಶಪ್ಪನ್ನವರ ಹೆಸರನ್ನು ಈಗಾಗಲೇ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ. ಆದರೆ ತೇರದಾಳ ಕ್ಷೇತ್ರಕ್ಕೆ ಮಾತ್ರ ಯಾರ ಹೆಸರನ್ನು ಘೋಷಿಸದೇ ಇರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ.


ಈಶ್ವರ ಶೆಟ್ಟರ

ಬಾಗಲಕೋಟೆ(ಏ.07):  ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್‌ ಪಕ್ಷದ ಬಹುತೇಕ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿರುವ ಕಾಂಗ್ರೆಸ್‌ ಪಕ್ಷ ಜಿಲ್ಲೆಯ ತೇರದಾಳ ಕ್ಷೇತ್ರಕ್ಕೆ ಮಾತ್ರ ಯಾರ ಹೆಸರನ್ನು ಘೋಷಿಸದೇ ಇರುವುದು ಆಕಾಂಕ್ಷಿಗಳಲ್ಲಿ ಮಾತ್ರವಲ್ಲದೇ ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿಯೂ ಕುತೂಹಲದ ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Tap to resize

Latest Videos

undefined

ಜಿಲ್ಲೆಯ ಏಳು ವಿಧಾನಸಭೆಯ ಮತಕ್ಷೇತ್ರಗಳಲ್ಲಿ ಬಾಗಲಕೋಟೆಗೆ ಎಚ್‌.ವೈ.ಮೇಟಿ, ಬಾದಾಮಿಗೆ ಭೀಮಸೇನ ಚಿಮ್ಮನಕಟ್ಟಿ, ಬೀಳಗಿಗೆ ಜೆ.ಟಿ.ಪಾಟೀಲ, ಮುಧೋಳ ಮೀಸಲಿಗೆ ಆರ್‌.ಬಿ.ತಿಮ್ಮಾಪೂರ, ಹೆಸರನ್ನು ಪ್ರಕಟಿಸಿದೆ. ಜಮಖಂಡಿ ಕ್ಷೇತ್ರದಿಂದ ಆನಂದ ನ್ಯಾಮಗೌಡ ಮತ್ತು ಹುನಗುಂದ ಕ್ಷೇತ್ರದಿಂದ ವಿಜಯಾನಂದ ಕಾಶಪ್ಪನ್ನವರ ಹೆಸರನ್ನು ಈಗಾಗಲೇ ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ. ಆದರೆ ತೇರದಾಳ ಕ್ಷೇತ್ರಕ್ಕೆ ಮಾತ್ರ ಯಾರ ಹೆಸರನ್ನು ಘೋಷಿಸದೇ ಇರುವುದು ಸಹಜವಾಗಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌: ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್‌ ಕಸರತ್ತು..!

ಸಿದ್ದರಾಮಯ್ಯ ಅವರಿಂದ ಋುಣ ಸಂದಾಯ:

ಕಾಂಗ್ರೆಸ್‌ ಪಕ್ಷ ಇಂದು ಎರಡನೇ ಪಟ್ಟಿಬಿಡುಗಡೆ ಮಾಡಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅದರಲ್ಲಿ ಬಾದಾಮಿ ಮತಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಭೀಮಸೇನ ಚಿಮ್ಮನಕಟ್ಟಿಅವರನ್ನು ಕಣಕ್ಕೆ ಇಳಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಮ್ಮನಕಟ್ಟಿಕುಟುಂಬಕ್ಕೆ ಋುಣ ಸಂದಾಯ ಮಾಡಿದ್ದಾರೆ. ತಮಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ್ದ ಬಾದಾಮಿ ಜನತೆಗೆ ಸಾಕಷ್ಟುಅನುದಾನವನ್ನು ತಂದು ಕ್ಷೇತ್ರದ ಚಿತ್ರಣವನ್ನೇ ಬದಲಿಸಿದ್ದ ಸಿದ್ದರಾಮಯ್ಯ ಅವರು ಇದೀಗ ತಮಗಾಗಿ ಕ್ಷೇತ್ರ ತ್ಯಾಗ ಮಾಡಿದ್ದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಅವರಿಗಾಗಿ ಮಾತು ಕೊಟ್ಟಂತೆ ಅವರ ಪುತ್ರನಿಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಕೊಡಿಸುವ ಮೂಲಕ ಮಾತನ್ನು ಉಳಿಸಿಕೊಂಡಿದ್ದಾರೆ.

ಉಳಿದಂತೆ ಮುಧೋಳ ಮೀಸಲು ಕ್ಷೇತ್ರದಲ್ಲಿಯು ಸಹ ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ಹಾಗೂ ಕಳೆದ ಬಾರಿ ಕಾಗ್ರೆಸ್‌ನಿಂದ ಸಚಿವರಾದ ಗೋವಿಂದ ಕಾರಜೋಳ ಅವರಿದ ಪರಾಭವಗೊಂಡಿದ್ದ ಸತೀಶ ಬಂಡಿವಡ್ಡರ ನಡುವೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಪಡೆಯಲು ಇನ್ನಿಲ್ಲದ ಪೈಪೋಟಿ ಉಂಟಾಗಿತ್ತು. ಆದರೆ ಜಾತಿ ಲೆಕ್ಕಾಚಾರ ಮತ್ತು ಪಕ್ಷದ ವಲಯದಲ್ಲಿನ ಪ್ರಭಾವ ಬಳಸಿ ಟಿಕೆಟ್‌ ತರುವಲ್ಲಿ ಆರ್‌.ಬಿ.ತಿಮ್ಮಾಪುರ ಅವರು ಯಶ ಕಂಡಿದ್ದಾರೆ. ಬರುವ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿ ಚುನಾವಣೆ ಎದುರಿಸುವ ಸವಾಲು ಅವರದ್ದಾಗಿದೆ.

ಬಾಗಲಕೋಟೆಯಲ್ಲಿ ಟಿಕೆಟ್‌ ಪಡೆದಿರುವ ಮಾಜಿ ಸಚಿವ ಎಚ್‌.ವೈ.ಮೇಟಿ ಅವರಿಗೆ ಪರ್ಯಾಯವಾಗಿ ಹಲವರು ಅದರಲ್ಲೂ ಅವರದೇ ಸಮುದಾಯದ ಡಾ.ದೇವರಾಜ ಪಾಟೀಲ, ಮಹಿಳಾ ಕಾಂಗ್ರೆಸ್‌ನ ರಕ್ಷಿತಾ ಈಟಿ ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದರು. ಆದರೆ ಅದಕ್ಕೆ ಪ್ರಾಧಾನ್ಯತೆ ಸಿಕ್ಕಿಲ್ಲ. ಇನ್ನು ಬೀಳಗಿಯಿಂದ ಪಕ್ಷವು ಮಾಜಿ ಶಾಸಕರಾದ ಜೆ.ಟಿ.ಪಾಟೀಲ ಅವರಿಗೆ ಟಿಕೆಟ್‌ ನೀಡಿದೆ. ಅಲ್ಲಿಯು ಸಹ ಯುವ ಮುಖಂಡ ಬಸವಪ್ರಭು ಸರನಾಡಗೌಡರ ಅವರು ಸೇರಿದಂತೆ ಹಲವರು ಪ್ರಯತ್ನ ನಡೆಸಿದ್ದರು. ಅದು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಒಟ್ಟಾರೆ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ ಟಿಕೆಟ್‌ ಪಡೆದ ಅಭ್ಯರ್ಥಿಗಳು ಎಲ್ಲರನ್ನು ವಿಶ್ವಾಸ ಪಡೆದು ಮುನ್ನೆಡೆಯುವ ಅನಿವಾರ್ಯತೆ ಇದೆ.

Karnataka Assembly Elections 2023: ತೇರದಾಳ ಕಾಂಗ್ರೆಸ್‌ ಬಚಾವೋ..ಉಮಾಶ್ರೀ ಹಟಾವೋ..!

ತೇರದಾಳಕ್ಕೆ ಯಾಕಿಷ್ಟು ಪೈಪೋಟಿ?:

2008ರಿಂದ ಹೊಸ ಕ್ಷೇತ್ರವಾದ ತೇರದಾಳದಿಂದ ಮೊದಲ ಚುನಾಚಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪಧಿ​ರ್‍ಸಿ ಸೋಲು ಕಂಡ ಚಿತ್ರನಟಿ ಉಮಾಶ್ರೀ ನಂತರದಲ್ಲಿ ಬಹಳ ಪರಿಶ್ರಮದಿಂದ ಕ್ಷೇತ್ರದಲ್ಲಿಯೇ ಮನೆ ಮಾಡಿ ಹಲವು ಸವಾಲುಗಳ ನಡುವೆ 2013ರ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಗೆಲುವು ಕಂಡಿದ್ದರು. ನಂತರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಆದರೆ, ಉಮಾಶ್ರೀ ಅವರು ಸ್ಥಳೀಯರಲ್ಲ ಅವರು ಹೊರಗಿನವರು. ಹೀಗಾಗಿ ಅವರಿಗೆ ಪಕ್ಷ ಯಾವುದೇ ಕಾರಣಕ್ಕೆ ಟಿಕೆಟ್‌ ಕೊಡಬಾರದು ಎಂಬ ಕೂಗು ಸ್ಥಳೀಯ ಕಾಂಗ್ರೆಸ್‌ನಿಂದ ಆರಂಭವಾಯಿತೋ, ಅಲ್ಲಿಂದ ಸಹಜವಾಗಿ ತೇರದಾಳ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು. ಅಲ್ಲದೇ ಸ್ಥಳೀಯ ಕೂಗಿಗೆ ಬಲ ಬರಲಾರಂಭಿಸಿತು. ಹೀಗಾಗಿ ಉಮಾಶ್ರೀ ಅವರಿಗೆ ಪಕ್ಷ ಟಿಕೆಟ್‌ ನೀಡಿದರೆ ಆಗುವ ಪರಿಣಾಮಗಳನ್ನು ಅವಲೋಕಿಸಿ ಟಿಕೆಟ್‌ ನಿರ್ಧರಿಸಿಲಿದೆ ಎಂಬ ಮಾತುಗಳು ಕೇಳತೊಡಗಿವೆ.

ಅಂತಿಮಗೊಂಡ ಕೈ ಅಭ್ಯರ್ಥಿಗಳು

ಬಾಗಲಕೋಟೆ-ಎಚ್‌.ವೈ.ಮೇಟಿ.
ಬಾದಾಮಿ-ಭೀಮಸೇನ ಚಿಮ್ಮನಕಟ್ಟಿ
ಬೀಳಗಿ-ಜೆ.ಟಿ.ಪಾಟೀಲ
ಮುಧೋಳ ಮೀಸಲು-ಆರ್‌.ಬಿ.ತಿಮ್ಮಾಪೂರ
ಜಮಖಂಡಿ-ಆನಂದ ನ್ಯಾಮಗೌಡ
ಹುನಗುಂದ-ವಿಜಯಾನಂದ ಕಾಶಪ್ಪನವರ

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
 

click me!