ಹೊರಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು: ಆಯನೂರು ಮಂಜುನಾಥ್

By Kannadaprabha News  |  First Published Jan 1, 2024, 3:30 AM IST

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಇದರಂತೆ ಸಮುದಾಯದ ಆರೋಗ್ಯ ಅಧಿಕಾರಿಗಳು, ಹೊರಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದರು. 
 


ಶಿವಮೊಗ್ಗ (ಜ.01): ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಇದರಂತೆ ಸಮುದಾಯದ ಆರೋಗ್ಯ ಅಧಿಕಾರಿಗಳು, ಹೊರಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು ಎಂದು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮುದಾಯದ ಆರೋಗ್ಯ ಅಧಿಕಾರಿಗಳು, ಹೊರಗುತ್ತಿಗೆ ಸಿಬ್ಬಂದಿಗೂ ವೇತನ ಹೆಚ್ಚಳ ಮಾಡಬೇಕು. 

ಕೆಲಸಕ್ಕಾಗಿ ಯಾವುದೋ ಜಿಲ್ಲೆಯಲ್ಲಿ ಇರುವವ ರಿಗೆ ಜೀವನದಲ್ಲಿ ಒಂದು ಸಾರಿ ಮಾತ್ರ ಜಿಲ್ಲೆಗೆ ವರ್ಗಾವಣೆ ಕೊಡಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಆದರೂ ಅವರಿಗೆ ಆರೋಗ್ಯ ವಿಮೆ, ಜೀವ ವಿಮೆ ಇಲ್ಲ. ಎರಡನ್ನೂ ಕೊಡಬೇಕು ಎಂದರು. ಎನ್‌ಹೆಚ್‌ಎಂ ಸಿಬ್ಬಂದಿಗಳ ವೇತನ ಏರಿಕೆ ಪ್ರಮುಖ ಬೇಡಿಕೆ ಯಾಗಿತ್ತು. ಅದನ್ನು ಈಡೇರಿಸಿದ್ದಾರೆ. ಇದರಿಂದ ೫೭ ಕೋಟಿ ಹೊರೆ ಆಗಲಿದೆ. ಈ ಯೋಜನೆಯಲ್ಲಿ ೧೫೦ ವಿವಿಧ ವರ್ಗದ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ತಜ್ಞ ವೈದ್ಯರಿಗೆ ವೇತನ ಜಾಸ್ತಿ ಇತ್ತು. ಶೇ.೧೫ ರಷ್ಟು ಏರಿಕೆ ಮಾಡಿzರೆ. ಹತ್ತು ತಿಂಗಳ ಏರಿಕೆ ಬಾಕಿ ಕೊಡಲು ಕೂಡಾ ಆದೇಶ ಆಗಿದೆ.

Tap to resize

Latest Videos

3ರಿಂದ 4 ಲೋಕಸಭಾ ಕ್ಷೇತ್ರ ಜೆಡಿಎಸ್‌ಗೆ?: ಎಚ್‌.ಡಿ.ಕುಮಾರಸ್ವಾಮಿ

ಹಣ ಬಿಡುಗಡೆ ಆಗಿದೆ. ಆಯುಷ್ ವೈದ್ಯರಿಗೆ ಕೂಡ ವೇತನ ಹೆಚ್ಚಳ ಆಗಿದೆ. ೨೦ ಸಾವಿರ ವೇತನ ಪಡೆಯುವವರಿಗೂ ಏರಿಕೆ ಆಗಿದೆ. ಒಂಭತ್ತು ಸಾವಿರ ಸಿಬ್ಬಂದಿ, ಎರಡು ಸಾವಿರ ಆಯುಷ್ ವೈದ್ಯರು ಸೇರಿ ಹದಿನೇಳು ಸಾವಿರ ಜನರಿಗೆ ಇದರಿಂದ ಸೌಲಭ್ಯ ಸಿಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಹಿರಣ್ಣಯ್ಯ, ಐಡಿಯಲ್ ಗೋಪಿ, ಶಿ.ಜು.ಪಾಷಾ, ಧೀರರಾಜ್ ಹೊನ್ನವಿಲೆ, ಪದ್ಮನಾಭ್, ಜಗದೀಶ್ ಗೌಡ, ತಿಮ್ಲಾಪುರ ಲೋಕೇಶ್, ಪಾಟೀಲ್, ಸಂತೋಷ್ ಮತ್ತಿತರರು ಇದ್ದರು.

ತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ: ಅತಿಥಿ ಉಪನ್ಯಾಸಕರ ಮುಷ್ಕರದ ನಡುವೆಯೂ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರ್ಕಾರದ ಮೇಲೆ ಇದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್., ಎನ್‌ಸಿಸಿ ಇನ್ನಿತರೆ ಚಟುವಟಿಕೆಗಳ ಸಮಾರೋಪ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಕೆಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು, ಇನ್ನು ಕೆಲವು ಬೇಡಿಕೆಗಳು ಈಡೇರಬೇಕಾಗಿದೆ. ಈ ಬಗ್ಗೆ ಸಹ ಸರ್ಕಾರ ಗಮನಹರಿಸಿದೆ ಎಂದರು.

ಬದುಕಿನಲ್ಲಿ ಕಾಲೇಜು ಶಿಕ್ಷಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಸದೃಢ ಹೆಜ್ಜೆ ಇಡಬೇಕು. ಬಾಹ್ಯ ಆಕರ್ಷಣೆಗಳಿಗೆ ಒಳಗಾಗದೇ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಪ್ರಸ್ತುತ ಅನೇಕ ಉದ್ಯೋಗಗಳು ಯುವಜನರಿಗೆ ಸಿಗುತ್ತಿದೆ. ಅದರಲ್ಲಿ ಅರ್ಹವಾದದ್ದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಬಣಜಿಗರು ಸುಮ್ಮನಿರುವುದಿಲ್ಲ: ಜಗದೀಶ್‌ ಶೆಟ್ಟರ್‌

ಕಾಲೇಜು ಹಂತದಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ.ಯಂತಹ ಚಟುವಟಿಕೆಗಳು ಹೆಚ್ಚು ಪೂರಕವಾಗಿವೆ. ಗ್ರಾಮೀಣ ಜನರ ಬದುಕು ಬವಣೆ ತಿಳಿಯಲು ಈ ಘಟಕಗಳಲ್ಲಿ ತೊಡಗಿಕೊಳ್ಳುವುದು ಅವಶ್ಯವಾಗಿದೆ. ಮೊಬೈಲ್ ಟವರ್ ಇಲ್ಲದ ಕಡೆಗಳಲ್ಲಿ ಶಿಬಿರಗಳನ್ನು ಆಯೋಜಿಸುವತ್ತ ಕಾಲೇಜು ಆಡಳಿತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಪ್ರಾಚಾರ್ಯ ಡಾ.ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ವಿಷ್ಣುಮೂರ್ತಿ, ಗಣಪತಿ ಮಂಡಗಳಲೆ, ಚೇತನರಾಜ್ ಕಣ್ಣೂರು, ಈಳಿ ಶ್ರೀಧರ್, ಜಗದೀಶ್ ಗೌಡ, ಪರಿಮಳ, ಪ್ರೊ.ರಾಜು ಇನ್ನಿತರರು ಉಪಸ್ಥಿತರಿದ್ದರು.

click me!