ಡಿಕೆ ಶಿವಕುಮಾರ ಮೇಲೆ ಮತದಾರರಿಗೆ ವಿಶ್ವಾಸವಿದೆ: ಪತ್ನಿ ಉಷಾ ಶಿವಕುಮಾರ

By Kannadaprabha News  |  First Published Apr 26, 2023, 2:37 AM IST

ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ, ಮಮತೆ ಡಿ.ಕೆ.ಶಿವಕುಮಾರ್‌ರವರ ಮೇಲಿದೆ. ಈ ಬಾರಿಯ ಚುನಾ​ವ​ಣೆ​ಯಲ್ಲಿ ಅತಿ ಹೆಚ್ಚಿನ ಮತಗಳಿಂದ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.


ಕನಕಪುರ (ಏ.26) : ಕ್ಷೇತ್ರದ ಮತದಾರರ ಪ್ರೀತಿ, ವಿಶ್ವಾಸ, ಮಮತೆ ಡಿ.ಕೆ.ಶಿವಕುಮಾರ್‌ರವರ ಮೇಲಿದೆ. ಈ ಬಾರಿಯ ಚುನಾ​ವ​ಣೆ​ಯಲ್ಲಿ ಅತಿ ಹೆಚ್ಚಿನ ಮತಗಳಿಂದ ಅವರನ್ನು ಆಯ್ಕೆ ಮಾಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಶಿವಕುಮಾರ್‌(Usha shivakumar) ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹಲವು ಬಡಾವಣೆಗಳಲ್ಲಿ ಬೆಳಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ತಮ್ಮ ಪತಿ ಪರವಾಗಿ ಮತಯಾಚನೆ ಮಾಡಿದ ಅವರು, ಕ್ಷೇತ್ರದಲ್ಲಿ ಶಿವಕುಮಾರ್‌ರವರು ಮಾಡಿರುವ ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದಿವೆ. ಶಿವಕುಮಾರ್‌ ಅವರನ್ನು ಸ್ವಂತ ಮನೆಯ ಮಗನಂತೆ ತಿಳಿದು ಪ್ರಚಾರಕ್ಕೆ ಬರದಿದ್ದರೂ ಸಹ ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಆಶಿರ್ವಾದಿಸಲಿದ್ದಾರೆ ಎಂದ​ರು.

Tap to resize

Latest Videos

Viral video: ಪತ್ರಕರ್ತರಿಗೆ ಡಿಕೆ ಶಿವಕುಮಾರ ಬೆದರಿಕೆ, ಮಾಳವೀಯ ಆರೋಪ

ಕಳೆದ ಮೂವತ್ತು ವರ್ಷಗಳಿಂದ ಹಗಲಿರುಳು ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನನ್ನ ಪತಿಗೆ ಈ ಬಾರಿ ಉತ್ತಮ ಆಡಳಿತ ನಡೆಸುವ ಅವಕಾಶವಿದೆ. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಇಡೀ ರಾಜ್ಯದಲ್ಲಿ ಅವರು ಪ್ರವಾಸ ಮಾಡಬೇಕಾಗಿದೆ. ಆದ್ದ​ರಿಂದ ನಾನು ಇನ್ನೂ 15 ದಿನಗಳ ಕಾಲ ಕ್ಷೇತ್ರದಲ್ಲಿ ಅವರ ಪರವಾಗಿ ಪ್ರಚಾರ ನಡೆಸುವುದಾಗಿ ತಿಳಿಸಿದರು.

ಶಿವಕುಮಾರ್‌(DK Shivakumar) ಅವ​ರಿಗೆ ಯಾರೇ ಎದುರಾಳಿಯಾದರೂ ಕ್ಷೇತ್ರದ ಜನ ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಎದುರಾಳಿ ಅಭ್ಯರ್ಥಿಗಳ ಬಗ್ಗೆ ಮಾತನಾಡುವಷ್ಟುನಾನು ದೊಡ್ಡವಳಲ್ಲ. ನಮ್ಮ ಸಾಹೇಬರ ಗೆಲು​ವಿನ ಕಡೆಗೆ ಮಾತ್ರ ನನ್ನ ಗಮನ ಎಂದು ಉಷಾ ಶಿವ​ಕು​ಮಾರ್‌ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿ​ದ​ರು.

ಎದುರಾಳಿಗಳನ್ನು ಬಿಜೆಪಿಗೆ ಕರೆತಂದು ಹೊರನಡೆದ ಶೆಟ್ಟರ್‌!

ಈ ವೇಳೆ ವಿಧಾನ ಪರಿಷತ್‌ ಮಾಜಿ ಸದಸ್ಯೆ ನಿರ್ಮಲಾ ವೆಂಕಟೇಶ್‌ , ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಆರ್‌. ಕೃಷ್ಣಮೂರ್ತಿ, ಯುವ ಮುಖಂಡರಾದ ಹರೀಶ್‌, ನಗರಸಭಾ ಸದಸ್ಯೆ ಸರಳಾ ಶ್ರೀನಿವಾಸ್‌, ಜಿಲ್ಲಾ ಕಾಂಗ್ರೆಸ್‌ ಮಾಧ್ಯಮ ವಕ್ತಾರ ಮರಸಪ್ಪ ರವಿ ಮತ್ತಿ​ತ​ರರು ಹಾಜ​ರಿ​ದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!