ಇಂಡಿಯಾ ಒಕ್ಕೂಟಕ್ಕಾಗಿ ತಮಿಳುನಾಡಿಗೆ ಕಾವೇರಿ ನೀರು: ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ

By Kannadaprabha News  |  First Published Sep 30, 2023, 10:44 PM IST

ಅರಣ್ಯ ಅತಿಕ್ರಮಣದಾರರ ಕುರಿತಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಪರ ಕಾರ್ಯದರ್ಶಿಗೆ ಬರೆದಿರುವ ಪತ್ರ ಆಘಾತಕಾರಿಯಾಗಿದೆ. ಅತಿಕ್ರಮಣದಾರರ ಬಗ್ಗೆ ಯಾವುದೆ ಕಾಳಜಿ ರಾಜ್ಯ ಸರ್ಕಾರಕ್ಕಿಲ್ಲ ಎಂಬುದನ್ನು ತೋರಿಸುವ ಜತೆಗೆ ಅತಿಕ್ರಮಣದಾರರನ್ನೂ ಅತಂತ್ರ ಮಾಡ ಹೊರಟಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪಿಸಿದರು. 


ಶಿರಸಿ (ಸೆ.30): ಅರಣ್ಯ ಅತಿಕ್ರಮಣದಾರರ ಕುರಿತಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅಪರ ಕಾರ್ಯದರ್ಶಿಗೆ ಬರೆದಿರುವ ಪತ್ರ ಆಘಾತಕಾರಿಯಾಗಿದೆ. ಅತಿಕ್ರಮಣದಾರರ ಬಗ್ಗೆ ಯಾವುದೆ ಕಾಳಜಿ ರಾಜ್ಯ ಸರ್ಕಾರಕ್ಕಿಲ್ಲ ಎಂಬುದನ್ನು ತೋರಿಸುವ ಜತೆಗೆ ಅತಿಕ್ರಮಣದಾರರನ್ನೂ ಅತಂತ್ರ ಮಾಡ ಹೊರಟಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅರಣ್ಯ ಅತಿಕ್ರಮಣದಾರರ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಸೆ. 22ರಂದು ನ್ಯಾಯಾಲಯ ಮತ್ತು ಅರಣ್ಯ ಇಲಾಖೆಯಲ್ಲಿನ ಒತ್ತುವರಿ ಪ್ರಕರಣ ತೆರುವುಗೊಳಿಸಲು ಸಂಬಂಧಿಸಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಟಿಪ್ಪಣಿಯು ಅರಣ್ಯ ಅತಿಕ್ರಮಣದಾರರ ಜೀವನದ ಭದ್ರತೆ ಪ್ರಶ್ನಿಸುವ ಪತ್ರವಾಗಿದೆ. 

ಇದನ್ನು ನಾವು ಖಂಡಿಸುತ್ತೇವೆ. ಈ ಪತ್ರ ರಾಜ್ಯದ ಅರಣ್ಯ ಭೂಮಿಯನ್ನು ಜೀವನದ ನಿರ್ವಹಣೆಗೆ ಮಾಡಿಕೊಂಡು ಬಂದ ಅತಿಕ್ರಮಣದಾರರಿಗೆ ಆಘಾತಕಾರಿ. ಜೀವನದ ಭದ್ರತೆಯನ್ನೇ ಈ ಪತ್ರ ಪ್ರಶ್ನಿಸಿದೆ. ರಾಜ್ಯ ಸಚಿವರಾಗಿ ಸಾಮಾನ್ಯ ಜನರ ಆಶಯ ಅವರು ಅರಿತಿಲ್ಲ. ಪತ್ರದಲ್ಲಿ ಅರಣ್ಯ ಒತ್ತುವರಿ ಪ್ರಕರಣ ತೆರವುಗೊಳಿಸಲು ರಾಜ್ಯ ಮಟ್ಟದ ಕಾರ್ಯಪಡೆ ರಚಿಸಬೇಕು ಎಂದು ಸೂಚಿಸಿದ್ದಾರೆ. ಅತಿಕ್ರಮಣದಾರರನ್ನು ಹೀನಾಯವಾಗಿ ನೋಡಬಾರದು. ಅರಣ್ಯ ಸಚಿವರ ಈ ಪತ್ರ ಜಿಲ್ಲೆಯ ಸೊಪ್ಪಿನ ಬೆಟ್ಟದ ಮಾಲೀಕರಿಗೂ ಆತಂಕ ತಂದಿದೆ ಎಂದರು.

Tap to resize

Latest Videos

Chikkamagaluru: ಹಿಂದೂಸಭಾ ಗಣಪತಿ ವಿಸರ್ಜನಾ ಮೆರವಣಿಗೆ: ಪೊಲೀಸರೊಂದಿಗೆ ಜಟಾಪಟಿ!

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಎಂದೂ ಅತಿಕ್ರಮಣದಾರರಿಗೆ ಅನ್ಯಾಯ ಮಾಡಿಲ್ಲ, ಅವರಿಗೆ ಭೂಮಿ ಪಟ್ಟಾಕ್ಕಾಗಿ ಪ್ರಯತ್ನಿಸಿದ್ದೆವು. ಅಂದು ನಮ್ಮ ವಿರುದ್ಧ ಹೋರಾಟ ಮಾಡಿದವರೆಲ್ಲ ಇಂದು ಸುಮ್ಮನೆ ಕುಳಿತಿರುವುದು ಏಕೆ? ಹಗಲುವೇಷದ ಹೋರಾಟದಿಂದ ನ್ಯಾಯ ಸಿಗುವುದಿಲ್ಲ. ರಾಜಕಾರಣ ಮಾಡದೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಜಿಲ್ಲೆಯ ಕಾಂಗ್ರೆಸ್ ನಾಯಕರು ಎನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ನಾವು ಬಿಡುವುದಿಲ್ಲ. ಅವರ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.

ಜಿಲ್ಲೆಯಲ್ಲಿ 90 ಸಾವಿರ ಅತಿಕ್ರಮಣದಾರರು ಜೀವನ ನಿರ್ವಹಣೆಗೆ ಅತಿಕ್ರಮಣ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಅವರ ಸುರಕ್ಷತೆಗೆ ಕ್ರಮಕೈಗೊಂಡು ಜಿಪಿಎಸ್ ಮಾಡಿಸಿಕೊಟ್ಟಿದ್ದೆವು. ಈ ಪತ್ರ ಅತಿಕ್ರಮಣದಾರರ ಒಕ್ಕಲೆಬ್ಬಿಸುವಂತಿದೆ. ಅತಿಕ್ರಮಣ ಖುಲ್ಲಾ ಪಡಿಸಿಲ್ಲ ಎಂದೇ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತೆರವುಗೊಳಿಸಲು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ಮಾಡುವಂತೆ ಸೂಚಿಸಿದ್ದಾರೆ. ಸೊಪ್ಪಿನ ಬೆಟ್ಟಕ್ಕೂ ಅವರ ಪತ್ರ ಆತಂಕಕಾರಿಯಾಗಿದೆ. ಅರಣ್ಯ ಸಚಿವರೇ ಈ ರೀತಿ ಪತ್ರ ಬರೆದರೆ ಮುಂದೆ ಇಲಾಖೆಯ ಅಧಿಕಾರಿಗಳು ಅತಿಕ್ರಮಣದಾರರಿಗೆ ಕಿರುಕುಳ ನೀಡಲು ಆರಂಭಿಸುತ್ತಾರೆ. ಅದು ಅವರಿಗೆ ಅನಿವಾರ್ಯವಾಗಲಿದೆ ಎಂದು ಕಾಗೇರಿ ಹೇಳಿದ್ದಾರೆ. ಪ್ರಮುಖರಾದ ಗಣಪತಿ ನಾಯ್ಕ, ನಂದನ ಸಾಗರ್, ನಾಗರಾಜ ಶೆಟ್ಟಿ, ರಾಜೇಶ್ ಶೆಟ್ಟಿ, ಉಷಾ ಹೆಗಡೆ, ಸದಾನಂದ ಭಟ್ ಇದ್ದರು.

ರಾಜಕಾರಣವು ಚುನಾವಣೆಗೆ ಮಾತ್ರ ಮೀಸಲಾಗಿರಲಿ: ಸಚಿವ ಬೈರತಿ ಸುರೇಶ್‌

ಇಂಡಿಯಾ ಒಕ್ಕೂಟಕ್ಕಾಗಿ ಕಾವೇರಿ ನೀರು: ರಾಜ್ಯದ ಜನತೆಗೆ ನೀರಿನ ಕೊರತೆ ಈ ಪ್ರಮಾಣದಲ್ಲಿರುವಾಗ ಕಳೆದ ಒಂದು ತಿಂಗಳಿಂದ ಸತತವಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಕೇವಲ ಇಂಡಿಯಾ ಹೆಸರಿನಲ್ಲಿ ಮಾಡಿಕೊಂಡ ಮೈತ್ರಿಯ ಫಲ ಇದಾಗಿದೆ. ಒಕ್ಕೂಟದಲ್ಲಿ ಬಿರುಕು ಮೂಡಬಾರದು ಎಂಬ ಕಾರಣಕ್ಕೆ, ಮೈತ್ರಿ ಉಳಿಸಿಕೊಳ್ಳುವ ಸಲುವಾಗಿ ರಾಜ್ಯದ ಹಿತ ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ ಎಂದು ಮಾಜಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು, ಕೃಷಿ, ನೀರಾವರಿ ಸಚಿವರ ಸಂಪೂರ್ಣ ವಿಫಲತೆ ಕಾಣುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ನೀರು ಬಿಡುವಿಕೆ ಸ್ಥಗಿತಗೊಳಿಸಬೇಕು. ಕಾವೇರಿ ನದಿ ನೀರಿಗಾಗಿ ರಾಜ್ಯದ ಜನತೆ ನಿರಂತರ ಹೋರಾಟ ನಡೆಸುತ್ತಿದೆ. ಈ ಹೋರಾಟಕ್ಕೆ ಬಿಜೆಪಿ ಬೆಂಬಲ ಸೂಚಿಸುತ್ತಿದೆ ಎಂದರು.

click me!