ಭಾರತವು ಸರ್ವಜನಾಂಗಿಯ ಶಾಂತಿಯ ತೋಟವಾಗಿದೆ. ಹಿಂದು, ಮುಸ್ಲಿಂ, ಕ್ರಿಸ್ತರು ಸೇರಿದಂತೆ ಜಾತ್ಯತೀತ ದೇಶವಾಗಿದ್ದು ನಾವೆಲ್ಲಾ ಸಹೋದರತೆ, ಭಾತೃತ್ವದ ಹಾಗೂ ಸೌಹಾರ್ದತೆಯ ಬಾಳ್ವೆ ನಡೆಸುತ್ತಿದ್ದೇವೆ. ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲಾ ಧರ್ಮ ಗ್ರಂಥಗಳಲ್ಲಿನ ಸಾರಾಂಶವು ಒಂದೇ ಅಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ಕೋಲಾರ (ಸೆ.30): ಭಾರತವು ಸರ್ವಜನಾಂಗಿಯ ಶಾಂತಿಯ ತೋಟವಾಗಿದೆ. ಹಿಂದು, ಮುಸ್ಲಿಂ, ಕ್ರಿಸ್ತರು ಸೇರಿದಂತೆ ಜಾತ್ಯತೀತ ದೇಶವಾಗಿದ್ದು ನಾವೆಲ್ಲಾ ಸಹೋದರತೆ, ಭಾತೃತ್ವದ ಹಾಗೂ ಸೌಹಾರ್ದತೆಯ ಬಾಳ್ವೆ ನಡೆಸುತ್ತಿದ್ದೇವೆ. ಭಗವದ್ಗೀತೆ, ಕುರಾನ್, ಬೈಬಲ್ ಎಲ್ಲಾ ಧರ್ಮ ಗ್ರಂಥಗಳಲ್ಲಿನ ಸಾರಾಂಶವು ಒಂದೇ ಅಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ನಗರದಲ್ಲಿ ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಅಂಜುಮನ್ ಸಂಸ್ಥೆಯಿಂದ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮ್ಮೆಲ್ಲಾರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. ರಾಜಕಾರಣವು ಚುನಾವಣೆಗೆ ಮಾತ್ರ ಮೀಸಲಾಗಿರಲಿ, ಯಾವುದೇ ಪಕ್ಷ ಮತ್ತು ಯಾವುದೇ ಜಾತಿಗಳು ಆದರೂ ನಾವೇಲ್ಲಾ ಒಂದೇ ತಾಯಿಯ ಮಕ್ಕಳಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಶುಚಿಸಂಭ್ರಮ ಕಿಟ್ ಗುಣಮಟ್ಟದ ಬಗ್ಗೆ ಗರಂ ಆದ ಸಿಎಂ: ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ!
ಜಾತ್ಯತೀತ ಹೆಸರಿನಲ್ಲಿ ಜಾತಿ ಕಲಹ: ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷವೆಂದು ಜಾತಿ, ಧರ್ಮ ಜನಾಂಗಗಳನ್ನು ಮುಂದಿಟ್ಟು ನಡುವೇ ಕಲಹಗಳನ್ನು ಸೃಷ್ಟಿಸುವಂತ ಕೆಲಸಗಳನ್ನು ಮಾಡಲಾಗುತ್ತಿದೆ. ಜಾತ್ಯಾತೀತ ಎಂದರೆ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೆ ನಾವೆಲ್ಲಾ ಒಂದೇ ಎಂಬ ಭಾವನೆ ಹೊಂದಿರಬೇಕು, ಯಾರು ಮೇಲೂ ಇಲ್ಲ, ಯಾರು ಕೆಳಗೂ ಇಲ್ಲ, ನಾವೆಲ್ಲಾ ಭಾರತೀಯರು, ನಮಗೆಲ್ಲಾ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಅಡಿಯಲ್ಲಿಯೇ ನಾವೆಲ್ಲಾ ಹೋಗಬೇಕಾಗಿದೆ. ನಮಗೆ ಕಾನೂನು ದೊಡ್ಡದು ಎಂದರು.
ನಾನು ಜಿಲ್ಲಾ ಸಚಿವನಾದ ಮೇಲೆ 9ನೇ ಭಾರಿಗೆ ನಿಮ್ಮ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಯಾರೂ ಸಹ ಭಯ ಭೀತಿಯಿಲ್ಲದೆ ಮುಕ್ತವಾಗಿ ಶಾಂತಿಯುತವಾದ ಜೀವನ ನಡೆಸಬಹುದಾಗಿದೆ ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯವಾಗಿರ ಬಹುದು. ಆದರೆ ಜಗಳಬೇಕಾಗಿರುವುದು ಕೆಲವು ದುಷ್ಟರಿಗೆ ಮಾತ್ರವಾಗಿದೆ ಎಂದು ಹೇಳಿದರು.
ಹಿಂದೂ- ಮುಸ್ಲಿಂ ಭಾಯಿ ಭಾಯಿ: ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೋಲಾರದಲ್ಲಿ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬಾಳ್ವೆ ನಡೆಸ ಬೇಕು, ನಮಗೆಲ್ಲಾ ತಂದೆಯೇ ಅಕಾಶ, ತಾಯಿ ಭೂಮಿಯಾಗಿದೆ ಎಂದು ಹೇಳಿದರು. ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ರಾಜಕಾರಣ ಚುನಾವಣೆಗೆ ಸೀಮಿತವಾಗಲಿ, ಕೆಲವರು ರಾಜಕೀಯದಲ್ಲಿ ಜಾತಿ, ಧರ್ಮದ ಹೆಸರು ಮುಂದಿಟ್ಟುಕೊಂಡು ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆಯುಂಟು ಮಾಡಲು ಪ್ರಯತ್ನಿಸುವುದ ಸಮಂಜಸಲ್ಲ ಎಂದು ನುಡಿದರು.
ಸಂಸದ ಮುನಿಸ್ವಾಮಿ ಒಬ್ಬ ಸೈಕೋ: ಶಾಸಕ ನಾರಾಯಣಸ್ವಾಮಿ
ಅಂಜುಮನ್ ಸಂಸ್ಥೆಗೆ 50 ಎಕರೆ: ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹಮದ್ ಮಾತನಾಡಿ, ಮಾಲೂರಿನ ಬಳಿ ೫೦ ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದೆ. ಇದನ್ನು ಅಂಜುಮನ್ ಸಂಸ್ಥೆಯ ಅಭಿವೃದ್ದಿಯ ಕಾರ್ಯಗಳಿಗೆ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಎಂಎಲ್‌ಸಿಗಳಾದ ಎಂ.ಎಲ್.ಅನಿಲ್ ಕುಮಾರ್, ಇಂಚರ ಗೋವಿಂದರಾಜು ಇದ್ದರು.