ಮಕ್ಕಳ ಭವಿಷ್ಯದ ಜೊತೆ ಕಾಂಗ್ರೆಸ್‌ ಸರ್ಕಾರ ಚೆಲ್ಲಾಟ: ವಿಶ್ವೇಶ್ವರ ಹೆಗಡೆ ಕಾಗೇರಿ

By Kannadaprabha News  |  First Published May 29, 2024, 6:29 PM IST

ಶಿಕ್ಷಣ ಸಚಿವರಿಗೆ ಈ ಖಾತೆಯ ಮಹತ್ವ ತಿಳಿದಿಲ್ಲ. ಸಾರ್ವಜನಿಕ ಜೀವನದ ಕನಿಷ್ಟ ಮಾಹಿತಿ ಇಲ್ಲದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜರಿದರು. 


ಸಾಗರ (ಮೇ.29): ವಿಧಾನ ಪರಿಷತ್ ಚಿಂತಕರ ಚಾವಡಿಯಾಗಿದ್ದು ಅದರ ಮೌಲ್ಯ ಹೆಚ್ಚಿಸುವ ಅಭ್ಯರ್ಥಿಗಳ ಮತದಾರರು ಆಯ್ಕೆ ಮಾಡಬೇಕು ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ತಾಲೂಕಿನ ಮಂಕಳಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಮಾತನಾಡಿ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಡಾ.ಧನಂಜಯ ಸರ್ಜಿ ಮತ್ತು ಭೋಜೇಗೌಡರನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಆಡಳಿತದಲ್ಲಿ ಆರ್ಥಿಕ ಶಿಸ್ತು ಇಲ್ಲವಾಗಿದೆ. ಹೊಸ ಕಾಮಗಾರಿಗಳು ಯಾವುದೂ ನಡೆಯುತ್ತಿಲ್ಲ. ಗುತ್ತಿಗೆದಾರರಿಗೆ ಬಿಲ್ ಪಾವತಿ ಅಗುತ್ತಿಲ್ಲ. ಇದೊಂದು ಅಪರಾಧಿಗಳಿಗೆ ರಕ್ಷಣೆ ನೀಡುವ ಸರ್ಕಾರವಾಗಿದೆ.

ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ: ಶಿಕ್ಷಣ ಸಚಿವರಿಗೆ ಈ ಖಾತೆಯ ಮಹತ್ವ ತಿಳಿದಿಲ್ಲ. ಸಾರ್ವಜನಿಕ ಜೀವನದ ಕನಿಷ್ಟ ಮಾಹಿತಿ ಇಲ್ಲದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಜರಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಮರ್ಥ್ಯ ಕಡಿಮೆ ಆಗುತ್ತಿದೆ. ಸಿಇಟಿ ಗೊಂದಲ, 5 ಮತ್ತು 8, 9ನೇ ತರಗತಿ ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಆಟವಾಡಿದೆ. ತುಷ್ಟೀಕರಣ ನೀತಿ ಅನುಸರಿಸಿ ಕಾನೂನನ್ನು ಗಾಳಿಗೆ ತೂರಿದೆ. ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ ಎಂದು ಹೇಳಿದರು. ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಪ್ರಮುಖರಾದ ಪ್ರಸನ್ನ ಕೆರೆಕೈ, ರಾಜೇಶ್ ಮಾವಿನಸರ, ವ.ಶಂ.ರಾಮಚಂದ್ರ ಭಟ್, ಕೆ.ಎನ್.ಶ್ರೀಧರ್ ಇನ್ನಿತರರಿದ್ದರು. ಗಿರೀಶ್ ಎನ್.ಹೆಗಡೆ ಸ್ವಾಗತಿಸಿದರು. ರಮೇಶ್ ಹಾರೆಗೊಪ್ಪ ವಂದಿಸಿದರು. ಹು.ಭಾ.ಅಶೋಕ್ ನಿರೂಪಿಸಿದರು.

Tap to resize

Latest Videos

undefined

ಕುಟುಂಬ ರಾಜಕಾರಣದಿಂದ ಬಿಜೆಪಿ ಶುದ್ಧೀಕರಣಗೊಳಿಸಿ: ಮಾಜಿ ಸಚಿವ ಈಶ್ವರಪ್ಪ

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಜನ ಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದ ಬೇಸತ್ತು ಹೋಗಿರುವ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಬಿಜೆಪಿ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಅವಲೋಕನ ಸಭೆಯಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರಿಂದ ಚುನಾವಣೆ ಮತದಾನದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಬಳಿಕ ಮಾತನಾಡಿದ ಅವರು, ಮುಂಡಗೋಡ ತಾಲೂಕಿನಲ್ಲಿ ೫ ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಸಾಧಿಸಲಿದ್ದು, ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಲಿದ್ದೇವೆ. 

ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣವಿದೆ: ಮಾಜಿ ಸಚಿವ ಸಾ.ರಾ.ಮಹೇಶ್‌

ಕಾರ್ಯಕರ್ತರು ಯಾವುದೇ ರೀತಿ ಆತಂಕಪಡುವ ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಸಂಸದರು ಮಾತ್ರವಲ್ಲ, ಶಾಸಕರು ಕೂಡ ನಾವೇ ಎಂದುಕೊಳ್ಳಿ. ಏಕೆಂದರೆ ಸಂಸದನಾದರೂ ಶಾಸಕನಂತೆ ಕೆಲಸ ಮಾಡುವ ಭರವಸೆ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಬಿಜೆಪಿ ಮುಂಡಗೋಡ ಮಂಡಳದ ಅಧ್ಯಕ್ಷ ಮಂಜುನಾಥ ಪಾಟೀಲ, ಅಶೋಕ ಚಲವಾದಿ, ಮಹೇಶ ಹೊಸಕೊಪ್ಪ, ತುಕಾರಾಮ ಇಂಗಳೆ, ಬಸವರಾಜ ಓಶಿಮಠ, ಬಸವರಾಜ ಠಣಕೆದಾರ, ಗುರುರಾಜ ಕಾಮತ, ಸಂತೋಷ ತಳವಾರ, ಮಂಜುನಾಥ ಶೇಟ್, ವಿಠ್ಠಲ ಬಾಳಂಬೀಡ, ಭರತರಾಜ ಹದಳಗಿ, ನಾಗರಾಜ ಬೆಣ್ಣಿ ಮುಂತಾದವರು ಉಪಸ್ಥಿತರಿದ್ದರು.

click me!