ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣವಿದೆ: ಮಾಜಿ ಸಚಿವ ಸಾ.ರಾ.ಮಹೇಶ್‌

By Kannadaprabha News  |  First Published May 29, 2024, 6:17 PM IST

ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣವಿದ್ದು, ಈ ಹಿಂದೆ ಇದ್ದಂತಹ ಕಾಂಗ್ರೆಸ್‌ ಸರ್ಕಾರದಲ್ಲಿದ್ದ ವಾತಾವರಣವು ಈಗಿನ ಸರ್ಕಾರದಲ್ಲಿ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಆರೋಪಿಸಿದರು. 
 


ಮೈಸೂರು (ಮೇ.29): ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣವಿದ್ದು, ಈ ಹಿಂದೆ ಇದ್ದಂತಹ ಕಾಂಗ್ರೆಸ್‌ ಸರ್ಕಾರದಲ್ಲಿದ್ದ ವಾತಾವರಣವು ಈಗಿನ ಸರ್ಕಾರದಲ್ಲಿ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಸಾ.ರಾ. ಮಹೇಶ್‌ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2013- 2018ರವರೆಗೆ ಇದ್ದಂತಹ ಸರ್ಕಾರದಲ್ಲಿನ ವ್ಯವಸ್ಥೆ ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕಾಣಿಸುತ್ತಿಲ್ಲ ಎಂದು ದೂರಿದರು. ಸರ್ಕಾರದಿಂದ ನನ್ನ ಕ್ಷೇತ್ರಕ್ಕೆ ಈವರೆಗೂ ಒಂದು ಪೈಸೆ ಹಣ ಬಂದಿಲ್ಲ. ನಾನು ಗುದ್ದಲಿಪೂಜೆ ಮಾಡಿ ಕಾಮಗಾರಿ ಪ್ರಾರಂಭಿಸಿದ ಕೆಲಸ ಕಾರ್ಯಗಳು ಕೂಡ ಮುಂದುವರಿಯುತ್ತಿಲ್ಲ. ಅಧಿಕಾರಿಗಳಿಗೂ ಕೆಲಸ ಮಾಡಲು ಉಸಿರುಗಟ್ಟಿದ ವಾತಾವರಣ ಇದೆ. 

ಅದೇ ರೀತಿ ಎಸ್‌ಐಟಿಯಲ್ಲಿ ಸಹ ಕೆಲವು ಪ್ರಾಮಾಣಿಕ ಅಧಿಕಾರಿಗಳಿದ್ದರೂ ಕೆಲವರು ಒತ್ತಡಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಈಗಾಗಲೇ ನಾನು ಹೇಳಿದ್ದೇನೆ ಎಂದರು. ಇದೇ ವೇಳೆ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ಈಗ ಗೊತ್ತಾಗುತ್ತಿದೆ. ಘಟನೆಯ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳೇ ತೆಗೆದುಕೊಳ್ಳಬೇಕಿದ್ದು, ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಗುರುತಿಸಿ, ಅವರ ತಲೆ ದಂಡವಾಗಬೇಕಿದೆ. ಒಟ್ಟಿನಲ್ಲಿ ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿದ್ದ ವ್ಯವಸ್ಥೆಗಳು ಈಗ ಇಲ್ಲ ಎಂಬುದು ಬಹಿರಂಗವಾಗಿದ್ದು, ಇದೆಲ್ಲವನ್ನೂ ರಾಜ್ಯದ ಜನೆತೆ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದರು.

Tap to resize

Latest Videos

ಸಚಿವ ಮಧು ಬಂಗಾರಪ್ಪ ಹೇರ್‌ ಕಟಿಂಗ್‌ ಖರ್ಚನ್ನ ಯುವ ಮೋರ್ಚಾದಿಂದ ಕೊಡಿಸುತ್ತೇವೆ: ವಿಜಯೇಂದ್ರ

ಪ್ರಜ್ವಲ್ ವಿಚಾರದಲ್ಲಿ ನನ್ನ ಮನಸ್ಸು ಒಪ್ಪುತ್ತಿಲ್ಲ: ಪ್ರಜ್ವಲ್‌ ರೇವಣ್ಣ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಅವರು, ಎಚ್‌.ಡಿ. ದೇವೇಗೌಡರು ಈಗಾಗಲೇ ಖಡಕ್‌ವಾರ್ನಿಂಗ್‌ಕೊಟ್ಟಿದ್ದರು, ಅದರಂತೆ ಪ್ರಜ್ವಲ್‌ಈಗಾಗಲೇ ಬರಬೇಕಿತ್ತು. ಆದರೆ ಇದೀಗ ಬರುವುದಾಗಿ ಹೇಳಿದ್ದಾರೆ. ಈ ನೆಲದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಹೀಗಾಗಿ, ಅವರು ಬಂದ ನಂತರದಲ್ಲಿ ಸತ್ಯಾಸತ್ಯತೆ ಏನೆಂಬುದು ಜನರಿಗೆ ಗೊತ್ತಾಗಲಿದ್ದು, ನಾವು ಸಹ ಅದನ್ನೇ ಕಾಯುತ್ತಿದ್ದೇವೆ. ಆದರೆ, ನಾನು ಈಗಾಗಲೇ ಸ್ಪಷ್ಟವಾಗಿ ತಿಳಿಸಿರುವಂತೆ, ಎಚ್‌.ಡಿ. ರೇವಣ್ಣ ಬಂಧನ ವಿಚಾರದಲ್ಲಿ ಷಡ್ಯಂತ್ರ ನಡೆದಿದೆ. ಆದರೆ ಪ್ರಜ್ವಲ್ ವಿಚಾರದಲ್ಲಿ ಮಾತನಾಡಲು ಈಗಲೂ ನನಗೆ ಮನಸ್ಸು ಒಪ್ಪುತ್ತಿಲ್ಲ ಎಂದರು. ಪೆನ್ ಡ್ರೈವ್ ಪ್ರಕರಣದಲ್ಲಿ ಏನೇನು ಆಗುತ್ತಿದೆ ಎಂಬುದನ್ನು ಜನ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಎಚ್‌.ಡಿ. ರೇವಣ್ಣ ಅವರ ಬಂಧನ ವಿಚಾರದಲ್ಲಿ ಎಸ್ಐಟಿ ಅಧಿಕಾರಿಗಳು ಹೇಗೆ ವರ್ತಿಸಿದರು, ಯಾರ ಒತ್ತಡದಲ್ಲಿ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದ ಕಾಂಗ್ರೆಸ್‌: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಯಾವುದೇ ವ್ಯಕ್ತಿ ಒಳ್ಳೆಯ ಅಥವಾ ಕೆಟ್ಟ ಕೆಲಸ ಮಾಡಿದಾಗ ಅದರಲ್ಲಿ ಅವರ ವೈಯಕ್ತಿಕ ವಿಚಾರ ಸಹ ಇರಲಿದೆ. ಆದರೆ, ಎಲ್ಲವನ್ನೂ ಪಕ್ಷಕ್ಕೆ ಅಂಟಿಸುವುದು ಅಥವಾ ಪಕ್ಷವನ್ನೇ ಜವಾಬ್ದಾರಿಯನ್ನಾಗಿ ಮಾಡುವುದು ಸರಿಯಲ್ಲ. ಎಲ್ಲಾ ಪಕ್ಷದಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ. ದೇವರಾಜೇಗೌಡ ಅವರು ಈಗಾಗಲೇ ಕಾಂಗ್ರೆಸ್‌ ನ ಉದ್ದೇಶ ಏನೆಂದು ಹೇಳಿದ್ದಾರೆ. ನಮಗೆ ವಿಶ್ವಾಸವಿದ್ದು, ದೇಶದಲ್ಲಿ ಮೋದಿ ಹಾಗೂ ಎಚ್‌.ಡಿ. ದೇವೇಗೌಡರು, ರಾಜ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್.‌ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರೊಂದಿಗೆ ಜೆಡಿಎಸ್‌ ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಈ ಚುನಾವಣೆ ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

click me!