ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ-ಟಿಎಂಸಿ ಶಾಸಕರ ಮಾರಾಮಾರಿ, ಐವರು ಬಿಜೆಪಿ ಶಾಸಕರು ಸಸ್ಪೆಂಡ್!

Published : Mar 28, 2022, 01:13 PM ISTUpdated : Mar 28, 2022, 05:46 PM IST
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ-ಟಿಎಂಸಿ ಶಾಸಕರ ಮಾರಾಮಾರಿ, ಐವರು ಬಿಜೆಪಿ ಶಾಸಕರು ಸಸ್ಪೆಂಡ್!

ಸಾರಾಂಶ

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾರಾಮಾರಿ ಶುಭೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರು ಸಸ್ಪೆಂಡ್ ಭಿರ್ಭೂಮ್ ಹಿಂಸಾಚಾರದ ಕುರಿತಾಗಿ ಚರ್ಚೆಯ ವೇಳೆ ನಡೆದ ಘಟನೆ

ಕೋಲ್ಕತ್ತಾ (ಮಾ.28): ಇತ್ತೀಚೆಗೆ ಭಿರ್ಭೂಮ್ ನಲ್ಲಿ ನಡೆದ ಹಿಂಸಾಚಾರ (Birbhum Violence) ಪ್ರಕರಣದ ಕುರಿತಾಗಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿಯೇ ಭಾರತೀಯ ಜನತಾ ಪಕ್ಷ (Bharatiya Janata Party ) ಹಾಗೂ ಆಡಳಿತಾರೂಡ ತೃಣಮೂಲ ಕಾಂಗ್ರೆಸ್ (Trinamool Congress) ಪಕ್ಷದ ಶಾಸಕರ ನಡುವೆ ಮಾರಾಮಾರಿ ನಡೆದಿದೆ. ಮೊದಲು ವಾಗ್ವಾದದಲ್ಲಿ ಆರಂಭವಾದ ಹೋರಾಟ ಬಳಿಕ ಎರಡೂ ಕಡೆಯ ಶಾಸಕರು ವಿಧಾನಸಭೆಯಲ್ಲಿಯೇ (Assembly) ಹೊಡೆದಾಟಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಯಿತು.

ಮಾಹಿತಿ ಪ್ರಕಾರ, ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮನೋಜ್ ತಿಗ್ಗಾ ಮತ್ತು ಟಿಎಂಸಿ ಶಾಸಕ ಅಸಿತ್ ಮಜುಂದಾರ್ ನಡುವೆ ಮಾರಾಮಾರಿ ನಡೆದಿದೆ. ಈ ಹೋರಾಟದಲ್ಲಿ ಅಸಿತ್ ಮಜುಂದಾರ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.    

"

ಇತ್ತೀಚಿನ ಮಾಹಿತಿಯ ಪ್ರಕಾರ, ಶುಭೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡಿರುವ ಶಾಸಕರ ಹೆಸರುಗಳಲ್ಲಿ ಶುಭೇಂದು ಅಧಿಕಾರಿ, ಮನೋಜ್ ತಿಗ್ಗಾ, ನರಹರಿ ಮಹತೋ, ಶಂಕರ್ ಘೋಷ್, ದೀಪಕ್ ಬರ್ಮನ್ ಎನ್ನಲಾಗಿದೆ. ಮುಂದಿನ ಆದೇಶದವರೆಗೆ ಅವರನ್ನು ಅಮಾನತುಗೊಳಿಸಲಾಗಿದೆ.

ಇಂದು ಬಂಗಾಳ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನವಾಗಿತ್ತು. ಹಲ್ಲೆ ಆರೋಪದ ನಂತರ ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರಬಂದಿದ್ದಾರೆ. ಭಿರ್ಬೂಮ್ ನಲ್ಲಿ ನಡೆದ ಹಿಂಸಾಚರ ಪ್ರಕರಣದ ಕುರಿತಾಗಿ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಬಿಜೆಪಿ ಶಾಸಕರು ಬಯಸಿದ್ದರು. ಆದರೆ, ಇದಕ್ಕೆ ಟಿಎಂಸಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಹಲ್ಲೆಗೆ ಕೂಡ ಮುಂದಾದರು. ಇದರಿಂದಾಗಿ ಮಾರಾಮಾರಿ ನಡೆದಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದಾರೆ.

Birbhum Violence ಸಿಬಿಐ ತನಿಖೆಗೆ ಆದೇಶ ನೀಡಿದ ಕಲ್ಕತ್ತಾ ಹೈಕೋರ್ಟ್!

ವಿಧಾನಸಭೆಯ ಹೊರಗೆ ನಡೆದ ಪ್ರತಿಭಟನೆಯಲ್ಲಿ ಟಿಎಂಸಿ ಶಾಸಕರು ನನ್ನನ್ನು ತಳ್ಳಿದ್ದಯ ಮಾತ್ರವಲ್ಲದೆ, ಕೈ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮನೋಜ್ ತಿಗ್ಗಾ ಆರೋಪಿಸಿದ್ದಾರೆ. ತಮ್ಮ ಅಂಗಿಯನ್ನೂ ಹರಿಯುವ ಪ್ರಯತ್ನ ಮಾಡಿದ್ದಾರೆ. ಇದಾದ ನಂತರ ಬಿಜೆಪಿ ಶಾಸಕ ಮತ್ತು ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಶುಭೇಂದು ಅಧಿಕಾರಿ ವಿಧಾನಸಭೆಯ ಹೊರಗೆ ಘೋಷಣೆಗಳನ್ನು ಕೂಗಿದರು.

Birbhum Violence: ಬಂಗಾಳ ಹತ್ಯಾಕಾಂಡದ ಪ್ರಮುಖ ಆರೋಪಿ ಸೆರೆ
ದ್ದಲದ ನಂತರ ಬಿಜೆಪಿ ನಾಯಕರು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಂಗಾಳದ ರಾಜಕೀಯದಲ್ಲಿ ಇದೊಂದು ಅವಮಾನದ ದಿನ ಎಂದು ಬಿಜೆಪಿಯ ಹಿರಿಯ ನಾಯಕ ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಸಿಎಂ ಆದ ನಂತರ ಬಂಗಾಳದದ ರಾಜಕೀಯ ಈ ಮಟ್ಟಕ್ಕೆ ಕುಸಿಯುತ್ತಿದೆ. ಇಂದು ಬಿಜೆಪಿ ಶಾಸಕ ಮನೋಜ್ ತಿಗ್ಗಾ ಮತ್ತಿತರರ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

ಬಿರ್ಭೂಮ್‌ನಲ್ಲಿ ಎಂಟು ಜನರನ್ನು ಸಜೀವ ದಹನ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕಲ್ಕತ್ತಾ ಹೈಕೋರ್ಟ್,  ಮಮತಾ ಬ್ಯಾನರ್ಜಿ ಸರ್ಕಾರವು ತನಿಖೆಯನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸದಂತೆ ಮಾಡಿದ ಮನವಿಯನ್ನು ನಿರಾಕರಿಸಿತ್ತು. ಎಸ್ ಐಟಿ ತನಿಖೆಯನ್ನು ರದ್ದು ಮಾಡಿದ ಕೋರ್ ಕೇಂದ್ರೀಯ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿದೆ. ಎಂಟು ಜನ ಮಹಿಳೆಯರು ಹಾಗೂ ಮಕ್ಕಳನ್ನು ಉದ್ರಿಕ್ತ ಗುಂಪೊಂದು ಹೊಡೆದು, ಬೆಂಕಿ ಹಚ್ಚಿ ಸುಟ್ಟುಹಾಕಿತ್ತು. ಇನ್ನೊಂದೆಡೆ ಪಶ್ಚಿಮ ಬಂಗಾಳದ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ, ಈ ಕುರಿತಾಗಿ ಆಡಳಿತಾರೂಢ ಟಿಎಂಸಿ ಪಕ್ಷವನ್ನು ಟೀಕೆ ಮಾಡಿದ್ದು, ರಾಜಕೀಯ ಹಿಂಸಾಚಾರ ಟಿಎಂಸಿ ನೇತೃತ್ವದಲ್ಲಿಯೇ ನಡೆದಿದೆ ಎಂದು ಆರೋಪ ಮಾಡಿದೆ. ಇನ್ನೊಂದೆಡೆ ಮಮತಾ ಬ್ಯಾನರ್ಜಿ ಈ ಘಟನೆಯ ಹಿಂದೆ ದೊಡ್ಡ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಚಿಕ್ಕಮಗಳೂರು - ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!