ಡಿಸಿಎಂ ಡಿಕೆ ಶಿವಕುಮಾರ್ ಅವರ 'ಅಧಿಕಾರ ಒದ್ದು ಕಿತ್ಕೋಬೇಕು' ಎಂಬ ಹೇಳಿಕೆ ರಾಜಕೀಯ ಸಂಚಲನ ಮೂಡಿಸಿದ್ದು, ಸಿದ್ದರಾಮಯ್ಯ ಬಳಿಕ ಡಿಕೆಶಿ ಸಿಎಂ ಆಗುತ್ತಾರಾ ಎಂಬ ಚರ್ಚೆಗೆ ಮತ್ತೆ ಜೀವ ಬಂದಿದೆ. ಚಿಕ್ಕಮಗಳೂರಿನ ವಿನಯ್ ಗುರೂಜಿ, ಡಿಕೆಶಿ ಸಿಎಂ ಆಗುವುದು ಖಚಿತ ಎಂದು ಭವಿಷ್ಯ ನುಡಿದಿದ್ದಾರೆ.
ಚಿಕ್ಕೋಡಿ (ಜ.10): ಅಧಿಕಾರವನ್ನ ಒದ್ದು ಕಿತ್ಕೋಬೇಕು ಎಂದು ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆ ರಾಜಕೀಯ ಸಂಚಲನ ಸೃಷ್ಟಿಸಿದೆ. ಡಿಕೆ ಶಿವಕುಮಾರ್ ಈ ಮಾತನ್ನು ಹೇಳಿ ಹಲವು ದಿನಗಳಾದರೂ, ಇಂದು ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ತಲ್ಲಣಗಳಿಗೆ ಡಿಕೆ ಹೇಳಿದ ಈ ಮಾತೇ ಕಾರಣ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಮೊದಲು ಆಂತರಿಕವಾಗಿ ಕಾಣುತ್ತಿದ್ದ ಕಾಂಗ್ರೆಸ್‌ನ ಜಟಾಪಟಿ ಈಗ ಹೆಚ್ಚೂಕಡಿಮೆ ನೇರವಾಗಿಯೇ ಕಾಣುವಂತಾಗಿದೆ. ಒಂದೆಡೆ ಡಿಕೆ ಶಿವಕುಮಾರ್ ಬಣ, ಡಿಕೆಶಿ ಸಿಎಂ ಆಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರೆ, ಸಿದ್ದರಾಮಯ್ಯ ಬಣದ್ದು ಲೆಕ್ಕಾಚಾರದ ಆಟ. ಹಲವು ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಾಯಕರ ಆಶಯದಂತೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರಾ? ಅದು ಗೊತ್ತಿಲ್ಲ. ಆದರೆ, ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಇನ್ನು ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಗುರೂಜಿ ಭವಿಷ್ಯ (Vinay Guruji Prediction) ನುಡಿದಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆದಾಗ, ಇದು ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ. ಎರಡೂವರೆ ವರ್ಷವಾದ ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎನ್ನಲಾಗಿತ್ತು. ಆ ನಿಟ್ಟಿನಲ್ಲಿ ಮತ್ತೊಮ್ಮೆ ಸಿಎಂ ಕುರ್ಚಿ ವಿಚಾರ ಮುನ್ನಲೆಗೆ ಬಂದಿದೆ.
ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗುರೂಜಿ, ಸಿದ್ದರಾಮಯ್ಯ ಅವರ ನಂತರ ಅವಕಾಶ ಸಿಕ್ಕರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ನಾಯಕರು ಕೆಲಸ ಮಾಡಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಮಾಡಿರುವ ಕೆಲಸ ಕಂಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ, ಪಕ್ಷವನ್ನು ಒಂದುಗೂಡಿಸಿ, ಪಾದಯಾತ್ರೆ ಕಾರ್ಯ, ಅಜ್ಜಯ್ಯನ ಮೇಲಿರುವ ಗುರು ನಿಷ್ಠೆ, ಪಕ್ಷನಿಷ್ಠೆ, ಹಿರಿಯರ ಮೇಲಿನ ಭಕ್ತಿ, ನಾಟಕೀಯವಿಲ್ಲದ ಮಾತು ಇವೆಲ್ಲವನ್ನೂ ನೋಡುವಾಗ ಅವರನ್ನು ಸಿಎಂ ಆಗಿ ಸೇವೆ ಮಾಡುವ ಅವಕಾಶ ಆ ಭಗವಂತ ನೀಡ್ಬೇಕು. ಅವರ ಗುರುಗಳ ದಯೆಯಿಂದಲೂ ಅವರು ಸಿಎಂ ಆಗ್ತಾರೆ ಅನ್ನೋದು ನನ್ನ ನಂಬಿಕೆ ಎಂದು ಗುರೂಜಿ ಹೇಳಿದ್ದಾರೆ.
ಡಿಕೆ ಸಾಹೇಬನಿಗೆ ಬಗಲ್ ಮೇ ದುಷ್ಮನ್ಸ್ ಕಡು ಕಾಟ: ಶತ್ರುನಾಶಕ್ಕೆ ಪ್ರತ್ಯಂಗಿರಾ ದೇವಿ ಮೊರೆ ಹೋದ್ರಾ ಡಿಸಿಎಂ?
ಡಿಕೆ ಶಿವಕುಮಾರ್ ಸಿಎಂ ಆಗೋದು ನಿಶ್ಚಿತ ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ. ಒಬ್ಬ ನಾಯಕ ಮಾಡಬೇಕಾದ ಎಲ್ಲಾ ಕೆಲಸವನ್ನೂ ಅವರು ಮಾಡಿದ್ದಾರೆ. ಸಿಎಂ ಆಗುವ ಅವಕಾಶ ಸಿಗಲಿದೆ. ಅವರ ಗುರುಗಳ ದಯೆಯಿಂದ ಇದು ಖಂಡಿತ ಆಗಲಿದೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ, ಬೇರೆ ಬೇರೆ ಹೇಳಿಕೆಗೆ ಬೆಲೆ ಇಲ್ಲ: ಡಿಕೆಶಿ ಸ್ಪಷ್ಟನೆ