
ವಿಜಯಪುರ(ನ.03): ಯಡಿಯೂರಪ್ಪ ಒಬ್ಬರೆ ಪಕ್ಷ ಕಟ್ಟಿಲ್ಲ. ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಹಲವರು ಪಕ್ಷ ಕಟ್ಟಿದ್ದಾರೆ. ರಾಜ್ಯದಲ್ಲಿ ಬಿ.ಬಿ. ಶಿವಪ್ಪನವರು ಪಕ್ಷ ಕಟ್ಟಿದ್ದಾರೆ. ಪಾಪ ಪಕ್ಷ ಕಟ್ಟಿದ ಅವರನ್ನೆಲ್ಲ ಮುಗಿಸಿದ್ದಾರೆ. ವಿಜಯೇಂದ್ರ ಏನ್ ಕಟ್ಟಿದ್ದಾನಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. \
ವಿಜಯೆಂದ್ರ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಏ ನಾನು ವೈಲೆಂಟ್ ಆಗಿದ್ದೇನೆ ಅಥವಾ ಸೈಲೆಂಟ್ ಇಲ್ಲ ಅಂದ್ರೆ ನಾನು ವೈಲೆಂಟ್ ಎಂದು ಹೇಳಿದ್ದಾರೆ.
ನಾಳೆಯಿಂದ ಅನಿರ್ಷ್ಟಾವಧಿ ಧರಣಿ ಸತ್ಯಗ್ರಹ ವಿಚಾರ ಬಗ್ಗೆ ಮಾತನಾಡಿದ ಯತ್ನಾಳ್, ನಾಳೆಯಿಂದ ಧರಣಿ ಸತ್ಯಾಗ್ರಹ ನಡೆಯುತ್ತದೆ. 1974-75 ರ ವಕ್ಫ್ ಗೆಜೆಟ್ ನೋಟಿಫೀಕೇಶನ್ ರದ್ದತಿ ಮಾಡಬೇಕು. ನಾಳೆ ವಕ್ಫ್ ವಿರುದ್ದ ಅಹೊರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆ. ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹಿಂದೂಗಳನ್ನ ಶೈತಾನ್ ಎಂದು ಸಚಿವ ಜಮೀರ್ ಅಹಮದ್ ಖಾನ್ ಕರೆದಿದ್ದಾರೆ. ವಕ್ಫ್ ಆಸ್ತಿಗೆ ಹಸಿರು ಬಣ್ಣ ಹಚ್ಚಿ ಶೈತಾನಗಳು ನೋಡಲಿ ಎಂದಿದ್ದಾನೆ. ಶೈತಾನಗಳು ಎಂದು ಜಮೀರ್ ಹೇಳಿದ್ದು ಯಾರಿಗೆ?. ಎಲ್ಲಾ ಆಸ್ತಿಗಳನ್ನು ವಕ್ಫ್ ಎನ್ನುತ್ತಿದ್ದಾರೆ. ಪ್ರಾಚೀನ ಸ್ಮಾರಕಗಳು ಕೂಡಾ ವಕ್ಫ್ ಎಂದು ಹೇಳುತ್ತಿದ್ದಾರೆ. ಗೆಜೆಟ್ ರದ್ದು ಮಾಡುವವರೆಗೂ ನಮ್ಮ ಹೋರಾಟ ನಿರಂತರ ಎಂದ ಶಾಸಕ ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.