ಶಿಗ್ಗಾಂವಿಯಲ್ಲಿ ನಾವೇ ಗೆಲ್ಲೋದು: ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ

By Girish Goudar  |  First Published Nov 3, 2024, 6:50 PM IST

ಉಪಚುನಾವಣೆಯ ಕಾರಣಕ್ಕೆ ಗೊಂದಲ ಮಾಡುತ್ತಿದ್ದಾರೆ. ಚುನಾವಣೆ ಇಲ್ಲದೆ ಇದ್ರೆ ಮಾತನಾಡುತ್ತಿರಲಿಲ್ಲ. ಉಪಚುನಾವಣೆ ಇರೋ ಕಾರಣಕ್ಕೆ ವಕ್ಫ್‌ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಶಾಸಕ ಲಕ್ಷ್ಮಣ ಸವದಿ 
 


ಹುಬ್ಬಳ್ಳಿ(ನ.03):  ಶಿಗ್ಗಾಂವಿ ಉಪಚುನಾವಣೆ ಗೆಲುವಿಗಾಗಿ ಸಭೆ ಮಾಡಲಾಗಿದೆ. ಮೂರು ಪುರಸಭೆ, ಆರು ಜಿಲ್ಲಾ ಪಂಚಾಯತ್‌, 23 ತಾಲೂಕ ಪಂಚಾಯತ್‌ ಸಭೆ ಮಾಡಿದ್ದೇವೆ. ಸಭೆಯಲ್ಲಿ ಅನೇಕ ಹಿರಿಯರು ಭಾಗಿಯಾಗಿದ್ದರು. ಪದಾಧಿಕಾರಿಗಳಿಗೆ ಅನೇಕ ಸೂಚನೆ ಕೊಟ್ಟಿದ್ದೇವೆ. ನಮ್ಮ ಪ್ರಕಾರ ಶಿಗ್ಗಾಂವಿಯಲ್ಲಿ ನಾವೇ ಗೆಲ್ತೀವಿ ಎಂದು ಅಥಣಿ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.  

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವಿರೋಧಿ ಅಲೆ ಇದೆ. ನಾನು ಬಿಜೆಪಿಯವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಏನೋ ಒಂದು ಸತ್ತು ಹೋಗಿದೆ ಅಂದರೂ ಹಲ್ಲು ಕಿಸಿಯುತ್ತಾರೆ. ಹಾಗೆ ವಕ್ಫ್‌ ವಿಚಾರ ಮುಗಿದು ಹೋಗಿದೆ  ಎಂದು ಹೇಳಿದ್ದಾರೆ. 

Tap to resize

Latest Videos

undefined

ಕರ್ನಾಟಕ ರಾಜ್ಯೋತ್ಸವ ದಿನವೇ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ರಾ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ?

ಉಪಚುನಾವಣೆಯ ಕಾರಣಕ್ಕೆ ಗೊಂದಲ ಮಾಡುತ್ತಿದ್ದಾರೆ. ಚುನಾವಣೆ ಇಲ್ಲದೆ ಇದ್ರೆ ಮಾತನಾಡುತ್ತಿರಲಿಲ್ಲ. ಉಪಚುನಾವಣೆ ಇರೋ ಕಾರಣಕ್ಕೆ ವಕ್ಫ್‌ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಲಕ್ಷ್ಮಣ ಸವದಿ ಹರಿಹಾಯ್ದಿದ್ದಾರೆ. 

ಗ್ಯಾರಂಟಿ ಪರಿಷ್ಕರಣೆ ವಿಚಾರದ ಬಗ್ಗೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅವರು, ಡಿಸಿಎಂ, ಸಿಎಂ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯವರು ಅದರಲ್ಲೂ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

click me!