ಯತ್ನಾಳ್ ವಿಜಯೇಂದ್ರ ವಿರುದ್ಧ ಅನವಶ್ಯಕವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದಕ್ಕೆ ಯತ್ನಾಳ್‌ಗೆ ನೈತಿಕತೆ ಇಲ್ಲ. ನೀವು ಹೀಗೆಯೇ ಮಾತನಾಡುತ್ತಿದ್ದರೆ ನಿಮಗೆ ಪೊರಕೆ ಸೇವೆ, ಒನಕೆ ಸೇವೆ ಮಾಡುವುದಕ್ಕೆ ಮಹಿಳೆಯರು ರೆಡಿಯಾಗಿದ್ದಾರೆ ಎಂದ ಮಾಡಾಳ್ ಮಲ್ಲಿಕಾರ್ಜುನ್
ದಾವಣಗೆರೆ(ನ.03): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿದ್ರೆ ಇನ್ನು ಮುಂದೆ ಪೊರಕೆ ಸೇವೆ ಮಾಡುವುದಕ್ಕೆ ಹೆಣ್ಮಕ್ಕಳು ಮುಂದಾಗಿದ್ದಾರೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ವಾಗ್ದಾಳಿ ನಡೆಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಪಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ, ಯತ್ನಾಳ್ ವಿಜಯೇಂದ್ರ ವಿರುದ್ಧ ಅನವಶ್ಯಕವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದಕ್ಕೆ ಯತ್ನಾಳ್‌ಗೆ ನೈತಿಕತೆ ಇಲ್ಲ. ನೀವು ಹೀಗೆಯೇ ಮಾತನಾಡುತ್ತಿದ್ದರೆ ನಿಮಗೆ ಪೊರಕೆ ಸೇವೆ, ಒನಕೆ ಸೇವೆ ಮಾಡುವುದಕ್ಕೆ ಮಹಿಳೆಯರು ರೆಡಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
undefined
ನಿಮಗೆ ತಾಕತ್ತಿದ್ರೆ ವಿಜಯೇಂದ್ರರನ್ನು ಕೆಳಗಿಳಿಸಿ: ಯತ್ನಾಳ್, ರಮೇಶ್ ಜಾರಕಿಹೊಳಿಗೆ ರೇಣುಕಾಚಾರ್ಯ ಸವಾಲ್!
ಹೊಂದಾಣಿಕೆ ರಾಜಕಾರಣ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ನೀವು ಕಾರಣ. ನೀವು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಂಚಮಸಾಲಿ ಹೋರಾಟ ಹಮ್ಮಿಕೊಂಡು ಜನರ ದಾರಿ ತಪ್ಪಿಸಿದ್ರಿ . ಈಗ ಏಕೆ ಪಂಚಮಸಾಲಿ ಹೋರಾಟವಿಲ್ಲ. ಲಿಂಗಾಯತರಿಗೆ 2 ಎ ಕೊಡಿಸೋದಕ್ಕೆ ಕೇಂದ್ರದಲ್ಲಿ ಓಬಿಸಿ ಕೊಡಿಸುವುದಕ್ಕೆ ಯಡಿಯೂರಪ್ಪ ಹೋರಾಟ ಮಾಡಿಲ್ವಾ?. ಯಡಿಯೂರಪ್ಪನವರ ಮನೆಯಲ್ಲೇ ತಿಂದು ಅವರ ಮನೆ ಗಣಿ ಎಣಿಸುತ್ತೀರಾ?. ತಿಂದ ಮನೆಯಲ್ಲಿ ಗಣಿ ಎಣಿಸೋದು ಅಂದ್ರೆ ಇದೇನಾ? ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರ ವಿರುದ್ಧ ರಾಜ್ಯದಲ್ಲಿ ಎಷ್ಟೋ ಷಡ್ಯಂತ್ರಗಳಾಗಿದ್ದಾವೆ. ಬೇರೆ ಯಾರೋ ಆಗಿದ್ದರೆ ಇಷ್ಟೋತ್ತಿಗೆ ಸಾವನ್ನಪ್ಪಿರೋರು. ಯತ್ನಾಳ್ ನಿಮಗೆ ನಾಚಿಕೆ ಆಗೋಲ್ವಾ?. ಇನ್ನಾದ್ರು ನಿಮ್ಮ ನಡವಳಿಕೆ ತಿದ್ದಿಕೊಳ್ಳಿ ಇಲ್ಲಾ ಅಂದ್ರೆ ಪೊರಕೆ ಸೇವೆ ಖಚಿತ ಎಂದ ಮಾಡಾಳ್ ಮಲ್ಲಿಕಾರ್ಜುನ್ ಖಾರವಾಗಿ ಹೇಳಿದ್ದಾರೆ.