ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ

Published : Dec 03, 2023, 03:00 AM IST
ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತ ಪ್ರಧಾನಿ ಮೋದಿ: ಸಂಸದ ರಮೇಶ ಜಿಗಜಿಣಗಿ

ಸಾರಾಂಶ

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತುಂದು ಇದರಲ್ಲಿ ಕುಲಕಸಬು ಮಾಡುವ 18 ಸಮುದಾಯಗಳನ್ನು ಸೇರ್ಪಡೆ ಮಾಡಿ ಅವರು ಸ್ವಾಭಿಮಾನದಿಂದ ಬದುಕು ಸಾಗಿಸಲು ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಕಾರ್ಯಕರ್ತರು ಈ ಯೋಜನೆಯ ಪ್ರಯೋಜನವನ್ನು ತಲುಪಿಸುವ ಕೆಲಸ ಮಾಡಬೇಕು. ಈ ಜವಾಬ್ದಾರಿ ಕಾರ್ಯಕರ್ತರ ಮೇಲೆ ಇದೆ: ಸಂಸದ ರಮೇಶ ಜಿಗಜಿಣಗಿ 

ಇಂಡಿ(ಡಿ.04):  ಪ್ರಧಾನಿ ನರೇಂದ್ರ ಮೋದಿ ಅವರಂತ ನಾಯಕ ದೇಶದಲ್ಲಿ ಯಾರೂ ಇಲ್ಲ. ಬಡತನದಲ್ಲಿ ಹುಟ್ಟಿ, ಚಹಾ ಮಾರಿ ಮೇಲೆತ್ತರಕ್ಕೆ ಬಂದಿರುವ ಮೋದಿ ಅವರು ಬಡವರ ಬಗ್ಗೆ ಚಿಂತನೆ ಹೊಂದಿದ್ದಾರೆ. ಬಡವರ ಏಳ್ಗೆಗೆ ಟೊಂಕಕಟ್ಟಿ ನಿಂತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಅವರು ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಶನಿವಾರ ನಡೆದ ಬಿಜೆಪಿ ಇಂಡಿ ಹಾಗೂ ಚಡಚಣ ಮಂಡಲ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾ ಸಭೆ ವಿಜಯಪುರ ಜಿಲ್ಲೆ ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಜಯೇಂದ್ರ ನೇಮಕ ದೊಡ್ಡವರ ಕೆಲಸ ನಾವು ಜೈ ಅನ್ನೋದಷ್ಟೇ: ಸಂಸದ ರಮೇಶ ಜಿಗಜಿಣಗಿ

70 ವರ್ಷ ದೇಶವನ್ನಾಳಿದ ಇತರೆ ಪಕ್ಷದವರಿಗೆ ಬಡವರ ಬಗ್ಗೆ ಏಕೆ ಕನಿಕರ ಹುಟ್ಟಲಿಲ್ಲ. ಹೊಟ್ಟೆ ತುಂಬಿದವರಿಗೆ ಹಸಿದವರ ಕಷ್ಟ ಗೊತ್ತಾಗುವುದಿಲ್ಲ. ಹಿಂದಿನವರು ಬಡವರ ಬಗ್ಗೆ ವಿಚಾರ ಮಾಡಿಲ್ಲ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತುಂದು ಇದರಲ್ಲಿ ಕುಲಕಸಬು ಮಾಡುವ 18 ಸಮುದಾಯಗಳನ್ನು ಸೇರ್ಪಡೆ ಮಾಡಿ ಅವರು ಸ್ವಾಭಿಮಾನದಿಂದ ಬದುಕು ಸಾಗಿಸಲು ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲು ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು. ಕಾರ್ಯಕರ್ತರು ಈ ಯೋಜನೆಯ ಪ್ರಯೋಜನವನ್ನು ತಲುಪಿಸುವ ಕೆಲಸ ಮಾಡಬೇಕು. ಈ ಜವಾಬ್ದಾರಿ ಕಾರ್ಯಕರ್ತರ ಮೇಲೆ ಇದೆ ಎಂದು ಹೇಳಿದರು.

ಗಂಗಾ ಕಲ್ಯಾಣ ಜಾರಿ:

ಕಾಂಗ್ರೆಸ್‌ ಪಕ್ಷ ದಲಿತರನ್ನು ಆರ್ಥಿಕವಾಗಿ ಮುಂದೆ ತರಬೇಕು ಎಂದು ಕುರಿ, ಕೋಳಿ ಸಾಕಾಣಿಕೆ ಮಾಡಲು ಸಾಲ ನೀಡುವ ಯೋಜನೆ ಮಾಡಿದ್ದರು. ಕುರಿ,ಕೋಳಿ ಸಾಗಾಣಿಕೆಯಿಂದ ದಲಿತರು ಉದ್ಧಾರ ಆಗಲ್ಲ ಎಂದು ತಿಳಿದು ನಾನು ಜನತಾದಳ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ರಾಜ್ಯದಲ್ಲಿ ಗಂಗಾಕಲ್ಯಾಣ ಯೋಜನೆ ಜಾರಿಗೆ ತಂದಿದ್ದೇನೆ. ದಲಿತರಿಗೆ 2 ಎಕರೆ ಭೂಮಿಯನ್ನು ನೀಡಿ, ಅದಕ್ಕೆ ಬೋರ್‌ವೆಲ್‌ ಕೊರೆಯಿಸಿ ಬದುಕು ಸಾಗಿಸಿ ಆರ್ಥಿಕವಾಗಿ ಮುಂದೆ ಬರುವಂತೆ ಮಾಡಿದ್ದೇನೆ ಎಂದು ಹೇಳಿದರು.

240 ಕೋಟಿ ಅನುದಾನ ಮಂಜೂರು:

1977ರಿಂದ ಇಲ್ಲಿಯವರೆಗೆ ನನ್ನನ್ನು ಈ ಮಟ್ಟಕ್ಕೆ ಬೆಳೆಸಿರುವ ಇಂಡಿ ತಾಲೂಕಿನ ಹಿರಿಯರಿಗೆ ಅಭಿನಂದಿಸುತ್ತೇನೆ. ನನ್ನ ಜೀವನ ಉದ್ಧಾರ ಮಾಡಿದವರು ಇಂಡಿ ತಾಲೂಕಿನ ಹಿರಿಯರು. ಅವರನ್ನು ನೆನಪಿಸಿಕೊಳ್ಳುವುದು ನನ್ನ ಧರ್ಮ ಎಂದು ಹೇಳಿದರು. ಚಿಕ್ಕೊಡಿಯಿಂದ 3 ಬಾರಿ ಬೇರೆ ಬೇರೆ ಪಕ್ಷದಿಂದ ಗೆಲ್ಲಿಸಿದ್ದಾರೆ. ಇದಕ್ಕೆಲ್ಲಾ ನನ್ನ ವರ್ತನೆಯೇ ಕಾರಣ. ನಾನು ಇಷ್ಟು ಬೆಳವಣಿಗೆ ಹೊಂದಲು ನನ್ನ ವರ್ತನೆಯೇ ಕಾರಣ ಎಂದು ಹೇಳಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಕಾಲು ಹಿಡಿದು ₹60 ಕೋಟಿ ಅನುದಾನ ಬಿಡುಗಡೆಗೊಳಿಸಿದ್ದರಿಂದ ಇಂದು ಇಂಡಿಗೆ ಕಾಲುವೆ ಮೂಲಕ ನೀರು ಬಂದಿದೆ. ಚಡಚಣದ 9 ಗ್ರಾಮಗಳು ನೀರಾವರಿಗೆ ಒಳಪಡೆ ಇರುವುದರಿಂದ ಅವುಗಳನ್ನು ನೀರಾವರಿಗೆ ಒಳಪಡಿಸಲು ನಾಗಠಾಣ ಶಾಸಕ ಹಾಗೂ ನಾನು ಚಿಂತನೆ ಮಾಡಿದ್ದೇವೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಪೈಪ್‌ಲೈನ್‌ ಕಾಮಗಾರಿ ಆರಂಭಗೊಂಡಿದೆ. ಕಾರಜೋಳ ಅವರು ನೀರಾವರಿ ಸಚಿವರಿದ್ದಾಗ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ₹280 ಕೋಟಿ ಹಾಗೂ ಇಂಡಿ ತಾಲೂಕಿನ 4 ಕೆರೆಗಳನ್ನು ತುಂಬಿಸಲು ₹240 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ವಿವೇಕ ಡಬ್ಬಿ ,ಅನಿಲ ಜಮಾದಾರ, ಮಲ್ಲಿಕಾರ್ಜುನ ಕಿವಡೆ, ಸಾಬು ಮಾಶ್ಯಾಳ, ಸಿದ್ದಲಿಂಗ ಹಂಜಗಿ, ಕಾಸುಗೌಡ ಬಿರಾದಾರ ಮಾತನಾಡಿದರು.

ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ

ಚಡಚಣ ಮಂಡಲ ಅಧ್ಯಕ್ಷ ರಾಮ ಅವಟಿ, ಹಣಮಂತ್ರಾಯಗೌಡ ಪಾಟೀಲ, ರಾಜಕುಮಾರ ಸಗಾಯಿ,ರವಿ ವಗ್ಗೆ, ಯಲ್ಲಪ್ಪ ಹದರಿ,ಶ್ರೀಶೈಲ ಮದರಿ, ವಿಜಯಲಕ್ಷ್ಮಿ ರೂಗಿಮಠ, ಸಂಜು ಐಹೋಳೆ ವೇದಿಕೆ ಮೇಲಿದ್ದರು.
ಈ ವೇಳೆ ಭೀಮರಾಯಗೌಡ ಮದರಖಂಡಿ, ವಿಜು ಮಾನೆ, ಅನಿಲಗೌಡ ಬಿರಾದಾರ, ರಾಚು ಬಡಿಗೇರ, ಪ್ರಶಾಂತ ಗವಳಿ, ಸುರೇಶ ಕುಲಕರ್ಣಿ, ದೇವೆಂದ್ರ ಕುಂಬಾರ, ಶಾಂತು ಕಂಬಾರ, ಮಹಾದೇವ ಗುಡ್ಡೊಡಗಿ, ರಾಮಸಿಂಗ ಕನ್ನೊಳ್ಳಿ,ಸಂತೋಷಗೌಡ ಪಾಟೀಲ, ರಮೇಶ ಧರೆನವರ, ಅಶೋಕಗೌಡ ಬಿರಾದಾರ, ಮಲ್ಲು ವಾಲೀಕಾರ, ವಿಜು ಮೂರಮನ, ಸುನಂದಾ ಗಿರಣಿವಡ್ಡರ, ರಾಜಶೇಖರ ಯರಗಲ್ಲ, ಅಶೋಕ ಅಕಲಾದಿ,ಧರ್ಮು ಮದರಖಂಡಿ,ದತ್ತಾ ಬಂಡೆನವರ, ಸತೀಶ ಬೊಳೆಗಾಂವ ಮೊದಲಾದವರು ಸಭೆಯಲ್ಲಿ ಇದ್ದರು.

ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಹಾಗೂ ಜಿಲ್ಲೆಯಲ್ಲಿ ರಮೇಶ ಜಿಗಜಿಣಗಿ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಕಳುಹಿಸಲು ಕಾರ್ಯಕರ್ತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಸಂಸದ ರಮೇಶ ಜಿಗಜಿಣಗಿ ಅವರು ಸರಳ ವ್ಯಕ್ತಿತ್ವ ಹೊಂದಿದ್ದವರು. ಜಿಲ್ಲೆಯ ಅಭಿವೃದ್ಧಿಗೆ ₹1 ಲಕ್ಷ ಕೋಟಿ ಅನುದಾನ ತಂದರೂ ಪ್ರಚಾರ ಬಯಸದೇ ಇದ್ದವರು. ಧರ್ಮ,ಜಾತಿ ಎತ್ತಿಕಟ್ಟಿ ಎಂದೂ ರಾಜಕಾರಣ ಮಾಡಿದವರಲ್ಲ. ಬಸವಣ್ಣನವರ ಹಾಕಿದ ಮಾರ್ಗದಲ್ಲಿ ನಡೆದು, ಎಲ್ಲರ ಜೊತೆ ಬೆರೆತು ರಾಜಕಾರಣ ಮಾಡುತ್ತಿದ್ದು, ಅವರನ್ನು ಮತ್ತೊಮ್ಮೆ ಸಂಸದರನ್ನಾಗಿ ಮಾಡೋಣ ಎಂದು ಬಿಜೆಪಿ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಜೋಗೂರ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!