ಗುತ್ತಿಗೆದಾರನ ಆತ್ಮಹತ್ಯೆ ಕಾಂಗ್ರೆಸ್ಸಿನ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈಗಲಾದರೂ ಕೆಂಪಯ್ಯನವರು ಗುತ್ತಿಗೆದಾರರ ಪರವಾಗಿ ಮಾತನಾಡುತ್ತಾರಾ, ಗುತ್ತಿಗೆದಾರರ ಕ್ಷೇಮದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗೇಕೆ ಮೌನವಹಿಸಿದ್ದಾರೆ, ಬ್ರದರ್‌ಗೆ ಈಗ ಗುತ್ತಿಗೆದಾರರ ಮಾತು ಕೇಳುತ್ತಿಲ್ಲವಾ? ಎಂದು ಪರೋಕ್ಷವಾಗಿ ಡಿಕೆಶಿಗೂ ಟಾಂಗ್ ನೀಡಿದ ಯತ್ನಾಳ
ವಿಜಯಪುರ(ಆ.11): ಬೆಂಗಳೂರಿನ ವಿಜಯನಗರದಲ್ಲಿ ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಯತ್ನಾಳ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇವೇ ವೇಳೆ ಯತ್ನಾಳ ಅವರು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೂ ಟಾಂಗ್ ನೀಡಿದ್ದಾರೆ.
ಗುತ್ತಿಗೆದಾರನ ಆತ್ಮಹತ್ಯೆ ಕಾಂಗ್ರೆಸ್ಸಿನ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈಗಲಾದರೂ ಕೆಂಪಯ್ಯನವರು ಗುತ್ತಿಗೆದಾರರ ಪರವಾಗಿ ಮಾತನಾಡುತ್ತಾರಾ, ಗುತ್ತಿಗೆದಾರರ ಕ್ಷೇಮದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗೇಕೆ ಮೌನವಹಿಸಿದ್ದಾರೆ ಎಂದು ಯತ್ನಾಳ ಪ್ರಶ್ನಿಸಿದ್ದಾರೆ. ಬ್ರದರ್‌ಗೆ ಈಗ ಗುತ್ತಿಗೆದಾರರ ಮಾತು ಕೇಳುತ್ತಿಲ್ಲವಾ? ಎಂದು ಪರೋಕ್ಷವಾಗಿ ಡಿಕೆಶಿಗೂ ಯತ್ನಾಳ ಟಾಂಗ್ ನೀಡಿದ್ದಾರೆ.
undefined
ಯತ್ನಾಳ್ ಅವರೇ ವಿರೋಧ ಪಕ್ಷದ ನಾಯಕ, ನೊಣವಿನಕೆರೆ ಯಶ್ವಂತ ಗುರೂಜಿ ಸ್ಟೋಟಕ ಭವಿಷ್ಯ
ಮತ್ತೊಂದು ಟ್ವಿಟ್‌ನಲ್ಲಿ ಶಾಸಕ ಯತ್ನಾಳ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಪ್ರಾಯೋಜಿತ ಆತ್ಮಹತ್ಯಾ ಭಾಗ್ಯ ಈಗ ಜಾರಿಯಲ್ಲಿದೆ ಎಂದು ಕುಟುಕಿದ್ದಾರೆ. ಹಿಂದೆ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಒದಗಿಸಿದ್ದ ಕಾಂಗ್ರೆಸ್ ಡಿವೈಎಸ್ಪಿ ಗಣಪತಿ, ಡಿಸಿ ಡಿ.ಕೆ.ರವಿ ಅವರನ್ನು ಬಲಿ ಪಡೆದಿತ್ತು. ಈಗ ಗುತ್ತಿಗೆದಾರರಿಗೆ ಕಾಂಗ್ರೆಸ್ ಸರ್ಕಾರ ಆತ್ಮಹತ್ಯೆಯ ಭಾಗ್ಯ ನಿಡುತ್ತಿದೆ. ಗುತ್ತಿಗೆದಾರ ಗೌತಮ ಸಾವಿಗೆ ನ್ಯಾಯ ಕೊಡಿಸುವವರು ಯಾರು? ಕೆಂಪಯ್ಯನಾ, ಸಿದ್ದರಾಮಯ್ಯ ಅವರಾ ಅಥವಾ ಬ್ರದರಾ? ಎಂದು ಯತ್ನಾಳ ಟ್ವಿಟ್‌ನಲ್ಲಿ ಪ್ರಶ್ನಿಸಿದ್ದಾರೆ.