ತಲಪಾಡಿ: ಬಿಜೆಪಿ-ಎಸ್ಡಿಪಿಐ ಒಪ್ಪಂದ: ಎಚ್ಚೆತ್ತ ಬಿಜೆಪಿ ನಾಯಕರಿಂದ ಪಕ್ಷ ವಿರೋಧಿಗಳಿಗೆ ಗೇಟ್ ಪಾಸ್!

By Govindaraj S  |  First Published Aug 11, 2023, 10:02 PM IST

ತಲಪಾಡಿಯಲ್ಲಿ ಎಸ್ಡಿಪಿಐ-ಬಿಜೆಪಿ ಒಪ್ಪಂದದ ಬೆನ್ನಲ್ಲೇ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಐ ಜೊತೆ ಒಪ್ಪಂದ ವಿಚಾರ ಸಂಬಂಧಿಸಿ ತಲಪಾಡಿ ಗ್ರಾ.ಪಂನ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.


ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಆ.11): ತಲಪಾಡಿಯಲ್ಲಿ ಎಸ್ಡಿಪಿಐ-ಬಿಜೆಪಿ ಒಪ್ಪಂದದ ಬೆನ್ನಲ್ಲೇ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಐ ಜೊತೆ ಒಪ್ಪಂದ ವಿಚಾರ ಸಂಬಂಧಿಸಿ ತಲಪಾಡಿ ಗ್ರಾ.ಪಂನ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ. ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್‌ ಪಂಡಿತ್‌ ಹೌಸ್ ಆದೇಶ ಮಾಡಿದ್ದು, ಜಿಲ್ಲಾಧ್ಯಕ್ಷರ ಸೂಚನೆ ಹಿನ್ನೆಲೆ ಕಿಕ್ ಔಟ್ ಮಾಡಲಾಗಿದೆ. ಎಸ್‌ಡಿಪಿಐ ಜೊತೆಗೆ ಒಳಪ್ಪಂದ ಮಾಡಿಕೊಂಡ ಸದಸ್ಯರಿಬ್ಬರ ಉಚ್ಛಾಟನೆ ಮಾಡಲಾಗಿದೆ. 

Tap to resize

Latest Videos

ದ.ಕ ಜಿಲ್ಲೆಯ ಉಳ್ಳಾಲ ತಾಲೂಕಿನ ತಲಪಾಡಿ‌ ಗ್ರಾ.ಪಂನ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದವರನ್ನ ಪಕ್ಷದಿಂದ ಮುಂದಿನ ಆರು ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಭಂಧಿಸಲಾಗಿದೆ. ಮಹಮ್ಮದ್‌ ಫಯಾಝ್‌ ಮತ್ತು ಮಹಮ್ಮದ್‌ ಎಂಬ ಬಿಜೆಪಿ ಬೆಂಬಲಿತರ ಉಚ್ಛಾಟನೆ. ಬಿಜೆಪಿ ಬೆಂಬಲಿತರಾಗಿದ್ದ ಇಬ್ಬರು ಸದಸ್ಯರು ಅಡ್ಡಮತದಾನ ಮಾಡಿ ಎಸ್‌ ಡಿಪಿಐ ಗೆಲುವಿಗೆ ಕಾರಣರಾಗಿದ್ದರು. ತಲಪಾಡಿ ಗ್ರಾ.ಪಂ ಆಡಳಿತದಲ್ಲಿ ಒಟ್ಟು 24 ವಾರ್ಡುಗಳಿತ್ತು‌. ಇದರಲ್ಲಿ 13 ಬಿಜೆಪಿ ಬೆಂಬಲಿತ ಸದಸ್ಯರು,  10 ಎಸ್‌ ಡಿಪಿಐ ಬೆಂಬಲಿತ ಸದಸ್ಯರು ಹಾಗೂ ಓರ್ವ ಕಾಂಗ್ರೆಸ್ ಸದಸ್ಯರಿದ್ದರು. 

Chikkamagaluru: ವಾಹನ ಸವಾರರಿಗೆ ಕಂಟಕವಾದ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ!

ಕಾಂಗ್ರೆಸ್‌ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್‌ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು. ಹೀಗಾಗಿ ಬಹುಮತದ ಕಾರಣ ಬಿಜೆಪಿ ಸದಸ್ಯ ಸತ್ಯರಾಜ್‌ ಗೆಲ್ಲುವ ಸಾಧ್ಯತೆ ಇತ್ತು‌‌. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರು ಬಿಜೆಪಿ ಬೆಂಬಲಿತರಿಂದ ಎಸ್ ಡಿಪಿಐಗೆ ಬೆಂಬಲ ಸೂಚಿಸಿದ ಕಾರಣ ಎಸ್ಡಿಪಿಐ ಇಸ್ಮಾಯಿಲ್‌ ಮತ್ತು ಬಿಜೆಪಿ ಸತ್ಯರಾಜ್‌ ನಡುವೆ ಸಮಬಲ ಇತ್ತು. ಕೊನೆಗೆ ಚೀಟಿ ಎತ್ತುವ ಮೂಲಕ ಎಸ್ಡಿಪಿಐನ ಇಸ್ಮಾಯಿಲ್ ಅಧ್ಯಕ್ಷಗಾದಿ ಒಲಿದಿದೆ. ಸ್ವಂತ ಪಕ್ಷದವರೇ ಎಸ್ಡಿಪಿಐ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಾಗಿದೆ. ಎಸ್ಡಿಪಿಐ ಜೊತೆ ಸ್ವಂತ ಪಕ್ಷದ ಸದಸ್ಯರ ಒಳ ಒಪ್ಪಂದದಿಂದ ಬಿಜೆಪಿಗೆ ಸೋಲಾಗಿದೆ.

ಬಿಜೆಪಿ ಎಸ್‌ ಡಿಪಿಐ ಸಿದ್ಧಾಂತವನ್ನು  ಒಪ್ಪುವುದಿಲ್ಲ: ಪಕ್ಷದಿಂದ ಉಚ್ಛಾಟಿಸಿದ ಬಗ್ಗೆ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್‌ ಪಂಡಿತ್‌ ಹೌಸ್ ಮಾಹಿತಿ ನೀಡಿದ್ದು, ತಲಪಾಡಿ ಗ್ರಾ.ಪಂ.ನಲ್ಲಿ ಒಟ್ಟು ಸಂಖ್ಯಾಬಲ 24 ಇದ್ದು, 13 ಬಿಜೆಪಿ ಬೆಂಬಲಿತರು, 10 ಮಂದಿ ಎಸ್‌ಡಿಪಿಐ ಬೆಂಬಲಿತರು ಹಾಗೂ ಒಬ್ಬರು ಕಾಂಗ್ರೆಸ್‌ ಬೆಂಬಲಿತರಾಗಿದ್ದರು. ಬಿಜೆಪಿಯ ಎಲ್ಲಾ ಸದಸ್ಯರು ಒಗ್ಗಟ್ಟಾಗಿ ಪಕ್ಷದ ತೀರ್ಮಾನದಂತೆ ಸತ್ಯರಾಜ್‌ ಎಂಬವರನ್ನು ಅಧ್ಯಕ್ಷರಾಗಿ ಸೂಚಿಸಿತ್ತು. ಪಂ. ಸದಸ್ಯರು ಕೂಡ ನಿರೀಕ್ಷಿತ ಗೆಲುವಿನ ಅಭ್ಯರ್ಥಿಯಾಗಿ ಸತ್ಯರಾಜ್‌ ಅವರನ್ನು ಕಂಡಿತ್ತು. 

ಎಸ್‌ ಡಿಪಿಐನ ಆಸೆ ಆಮಿಷಗಳಿಗೆ ಬಲಿಯಾಗಿ ಹಾಗೂ ಒತ್ತಡದಿಂದ ಮಹಮ್ಮದ್‌ ಫಯಾಝ್‌ ಮತ್ತು ಮಹಮ್ಮದ್‌ ಎಂಬ ಬಿಜೆಪಿ ಬೆಂಬಲಿತ ಇಬ್ಬರು ಪಂಚಾಯಿತಿ ಸದಸ್ಯರು ಅಡ್ಡಮತದಾನ ಮಾಡಿ ಎಸ್‌ ಡಿಪಿಐ ಗೆಲುವಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಪಕ್ಷ ಸಂಪೂರ್ಣ ಮಾಹಿತಿ ಪಡೆದುಕೊಂಡ ನಂತರ ಮೊಹಮ್ಮದ್‌ ತಪ್ಪನ್ನು ಕೇಳಿಕೊಂಡಿದ್ದಾರೆ. ಫಯಾಝ್‌ ಅವರು ಮಾತ್ರ ಇಂದು ಚುನಾವಣಾ ಕಾರ್ಯಾಲಯದಲ್ಲಿ ಕ್ಷೇತ್ರ ಬಿಜೆಪಿ ಕರೆದಿದ್ದ ಸಭೆಗೆ ಗೈರಾಗಬಾರದೆಂದು ಹೇಳಿದ್ದರೂ, ಎಸ್‌ ಡಿಪಿಐ ಜೊತೆಗೆ ಅವರು ಒಳಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ  ಸಭೆಗೆ ಗೈರು ಹಾಜರಾಗಿದ್ದಾರೆ. 

ಸುಂದರಿಗೆ ಕಂಟಕವಾಯ್ತು ಮೊಬೈಲ್ ಗೀಳು: ಪ್ರೀತಿಸಿ ಮದ್ವೆಯಾಗಿದ್ದ ಮಡದಿಯನ್ನೇ ಕೊಂದು ನದಿಗೆಸೆದ ಪತಿ

ಇದು ಒಳಒಪ್ಪಂದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಯಾವುದೇ ಕಾರಣಕ್ಕೆ  ಎಸ್‌ ಡಿ ಪಿಐ ಸಿದ್ಧಾಂತವನ್ನು  ಒಪ್ಪುವುದಿಲ್ಲ. ಬೆಂಬಲವನ್ನು ನೀಡುವುದಿಲ್ಲ, ಬಿಜೆಪಿ ಅಧಿಕಾರದ ಆಸೆಗಾಗಿ ಇರುವ ಪಕ್ಷವೇ ಇಲ್ಲ. ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗಿದೆ. ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಹಿಂದುಳಿದ ವರ್ಗ ಬಿ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಒಬ್ಬರೇ ಇದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷದ ಬೆಂಬಲದಿಂದ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ ಎಂದರು. ಇಬ್ಬರು ಬೆಂಬಲಿತ ಸದಸ್ಯರನ್ನು ಪಕ್ಷ ದ್ರೋಹ ಮತ್ತು ಅನ್ಯಾಯಕ್ಕಾಗಿ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ 6 ವರ್ಷದ ಕಾಲ ಪಕ್ಷದ ಸಾಮಾನ್ಯ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ.  ಜಿಲ್ಲಾಧ್ಯಕ್ಷರ  ಸೂಚನೆ ಮೇರೆಗೆ ಆದೇಶ ಜಾರಿಗೆ ಬರಲಿದ್ದು, ಇದನ್ನು ಘೋಷಣೆ ಮಾಡುತ್ತಿದ್ದೇವೆ ಎಂದರು.

click me!