ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೇ ಸಿಡಿ ಬಾಂಬ್ ಸಿಡಿಸಿದ ಬಿಜೆಪಿ ಮುಖಂಡ..!

By Suvarna News  |  First Published Jul 21, 2021, 5:25 PM IST

* ಬಸನಗೌಡ ಪಾಟೀಲ್‌ ಯತ್ನಾಳ್ ವಿರುದ್ಧ ಗಂಭೀರ ಆರೋಪ
* ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ  ಸಿಡಿ ಬಾಂಬ್..! 
* ಸಿ.ಡಿ. ಬಾಂಬ್ ಸಿಡಿಸಿದ ಬಿಜೆಪಿ ಮುಖಂಡ


ಬೆಂಗಳೂರು (ಜು.21): ರಾಜ್ಯ ಬಿಜೆಪಿಯಲ್ಲಿ ಮತ್ತೆ ಸಿ.ಡಿ. ಸದ್ದು ಮಾಡುತ್ತಿದೆ. ಮೊಟ್ಟ ಮೊದಲಿಗೆ ಸಿಡಿ ಬಾಂಬ್ ಸಿಡಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಿಡಿ ಆರೋಪ ಕೇಳಿಬಂದಿದೆ.

ಹೌದು...ಬಿಜಾಪುರದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಶಂಕರ್ ಹದನೂರು ಅವರು ಬಸನಗೌಡ ಪಾಟೀಲ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

Latest Videos

undefined

ಬಗ್ಗೆ ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷರೂ ಆಗಿರುವ ಭೀಮಶಂಕರ್ ಹದನೂರು,  ಇನ್ನೊಬ್ಬರ ಸಿಡಿ ಬಗ್ಗೆ  ಅಪಾದನೆ ಮಾಡಿ ತನ್ನನ್ನು ತಾನು ಮಹಾನ್ ಸೊಬಗ ಎಂದು  ಹೇಳಿಕೊಳ್ಳುವ ಶಾಸಕ ಬಸನಗೌಡನ ಪಾಟೀಲ್‍ ಯತ್ನಾಳ್ ನ್ಯಾಯಾಲಯದಿಂದ ಸಿಡಿ ಬಿಡುಗಡೆಗೆ ಏಕೆ ತಡೆಯಾಜ್ಞೆ ತಂದಿದ್ದಾರೆ ಎಂದು  ಗಂಭೀರ ಆರೋಪ ಮಾಡಿದರು.

'ಕಾಂಗ್ರೆಸ್‌ ನಾಯಕಿ ಜತೆಗೆ ನಿರಾಣಿ ಲಿಂಕ್, ನಟಿಯರನ್ನ ದೆಹಲಿ ಕರೆದುಕೊಂಡು ಹೋಗಿದ್ರು'

 ಅವರು ಕೆಲ ವರ್ಷಗಳ ಹಿಂದೆಯೇ ಸಿಡಿ ಬಿಡುಗಡೆ ಆಗದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದು ಸುಳ್ಳೋ ಅಥವಾ ನಿಜವೋ? ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ಶಾಸಕರು ಇಲ್ಲವೇ ಸಚಿವರು ಸಿಡಿ ಬಿಡುಗಡೆ ಆಗದಂತೆ ತಡೆಯಾಜ್ಞೆ ತಂದಿದ್ದಕ್ಕೆ ಮಾತನಾಡುವ ನಿಮಗೆ ಸ್ವತಃ ನೀವೇ ತಡೆಯಾಜ್ಞೆ ತಂದಿರುವುದರಿಂದ ಇನ್ನೊಬ್ಬರ ಬಗ್ಗೆ ಮಾತನಾಡಲು ಯತ್ನಾಳ್‍ಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ನಾನೊಬ್ಬ ಪ್ರಾಮಾಣಿಕ ಹಾಗೂ ಸಚ್ಚಾರಿತ್ರ್ಯ ರಾಜಕಾರಣಿ ಎಂದು ಬಿಂಬಿಸಿಕೊಳ್ಳುತ್ತಿರುವ ನೀವು ಬಿಜಾಪುರ  ನಗರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ 10 ರಿಂದ 15ರಷ್ಟು ಕಮೀಷನ್ ಹಣವನ್ನು ಗುತ್ತಿಗೆದಾರರಿಂದ ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದರು.
"

ಕರ್ನಾಟಕದಲ್ಲೇ ಇಂದು ಬಿಜಾಪುರ ನಗರ ಅತ್ಯಂತ ಭ್ರಷ್ಟ ಜಿಲ್ಲೆ ಎಂಬ ಕುಖ್ಯಾತಿ ಹೊಂದಿರುವುದೇ ಯತ್ನಾಳ್ ಅವರ ಭ್ರಷ್ಟಾಚಾರದಿಂದ. ಯಾವ ಕಾಮಗಾರಿಯಾದರೂ ಲಂಚ ನೀಡದೆ ಶಾಸಕರು ಬಿಡುವುದಿಲ್ಲ ಎಂದು ಗುತ್ತಿಗೆದಾರರೇ ಅಪಾದಿಸುತ್ತಾರೆ. ನೀವೇ ಭ್ರಷ್ಟಚಾರದಲ್ಲಿ ಮುಳುಗಿರುವಾಗ ಇನ್ನೊಬ್ಬರ ಬಗ್ಗೆ  ಮಾಡುವ ನೈತಿಕತೆ ನಿಮಗಿಲ್ಲ ಎಂದು ತಿರುಗೇಟು ನೀಡಿದರು.

ಬಿಜಾಪುರ ನಗರ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಎರಡು, ಮೂರು ರಸ್ತೆ ನೋಡಿದರೆ ಅದು ಅಭಿವೃದ್ಧಿ ಆಗುವುದಿಲ್ಲ, ಯಡಿಯೂರಪ್ಪನವರು ನಗರದ ಅಭಿವೃದ್ಧಿಗಾಗಿ ಯುಜಿಡಿ ಅನುದಾನದಡಿ ₹110 ಕೋಟಿ ನೀಡಿದ್ದರು, ಅದರಲ್ಲೂ ಕೂಡ ನೀವು ಕಮೀಷನ್ ಹೊಡೆಯಲು ಮುಂದಾಗಿದ್ದೀರಿ, ಬಿಜಾಪುರ ನಗರಕ್ಕೆ ಕೆಟ್ಟ ಹೆಸರು ಬಂದಿರುವುದೇ ನಿಮ್ಮ ಭ್ರಷ್ಟಾಚಾರದಿಂದ ಭೀಮಶಂಕರ್‍ಹದನೂರು   ಅವರು ತರಾಟೆಗೆ ತೆಗೆದುಕೊಂಡರು.

ಇವರ ಆರೋಪ ಗಮನಿಸಿದ್ರೆ,  ಬೇರೊಬ್ಬರ ಸಿಡಿ ಬಗ್ಗೆ ಮಾತನಾಡುತ್ತಿದ್ದ ಯತ್ನಾಳ್ ಇದೀಗ ಸ್ವತಹ ಅವರೇ ಸಿಡಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆಯೇ? ಎಂಬ ಪ್ರಶ್ನಿ ಉದ್ಭವಿಸಿದೆ.

click me!