ಶಾಸಕಾಂಗ ಸಭೆ ರದ್ದಾದ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ

By Suvarna News  |  First Published Jul 21, 2021, 3:53 PM IST

* ಸಿಎಂ ಬಿಎಸ್‌ವೈ ನಾಯಕತ್ವ ಬದಲಾವಣೆ ಚರ್ಚೆ ಜೋರು
* ಶಾಸಕಾಂಗ ಸಭೆ ರದ್ದು ಬೆನ್ನಲ್ಲೇ ಬಿಜೆಪಿ ಮತ್ತೊಂದು ಮಹತ್ವದ ಬೆಳವಣಿಗೆ
* ಹೈಕಮಾಂಡ್ ಗೇಮ್ ಪ್ಲಾನ್ ಚೇಂಜ್ ಆಯ್ತಾ..?


ಬೆಂಗಳೂರು, (ಜು.21): ರಾಜ್ಯ ರಾಜಕಾರಣದಲ್ಲಿ ಇದೀಗ ನಾಯಕತ್ವ ಬದಲಾವಣೆಯ ಸದ್ದು ಜೋರಾಗಿದೆ. ಇದರ ಮಧ್ಯೆ ತೀವ್ರ ಕುತೂಹಲ ಮೂಡಿಸಿದ್ದ ಶಾಸಕಾಂಗ ಸಭೆ ರದ್ದಾದ ಬೆನ್ನಲ್ಲೇ ಇದೀಗ  ಭೋಜನಕೂಟ ಸಹ ರದ್ದಾಗಿದೆ.

 ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ಸೂಚನೆ ಮೇರೆಗೆ ಜು.26ರಂದು ಶಾಸಕಾಂಗ ಸಭೆ ಕರೆದಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಬಳಿಕ ದಿಢೀರ್ ಶಾಸಕಾಂಗ ಸಭೆ ರದ್ದು ಮಾಡಲಾಯ್ತು. ಇದೀಗ ಭೋಜನಾಕೂಟ ಸಹ ರದ್ದು ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Tap to resize

Latest Videos

ಶಾಸಕಾಂಗ ಸಭೆ ಅಲ್ಲ, ಡಿನ್ನರ್ ಪಾರ್ಟಿ.. ಏನಿದರ ಮರ್ಮ?

ಹೌದು...ಜು.26ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಶಾಸಕರು, ಪರಿಷತ್ ಸದಸ್ಯರು, ಸಂಸದರಿಗೆ ಭೋಜನಾಕೂಟ ಆಯೋಜಿಸಿದ್ದರು. ಅಲ್ಲದೇ ಈಗಾಗಲೇ ಆಮಂತ್ರಣ ಸಹ  ಕಳುಹಿಸಿದ್ರು, ಇದೀಗ ದಢೀರ್‌ ಬೆಳವಣಿಯಲ್ಲಿ ಕ್ಯಾನ್ಸಲ್‌ ಆಗಿದೆ.

ಭೋಜನಾಕೂಟ ರದ್ದು ಮಾಡಿದ್ಯಾರು?
ಯಡಿಯೂರಪ್ಪ ಪರ ಒಟ್ಟಾಗಿ ಇಡೀ ವೀರಶೈವ-ಲಿಂಗಾಯತ ಸಮುದಾಯ ನಿಂತಿದೆ. ಅದ್ರಲ್ಲೂ ಪಕ್ಷಾತೀತವಾಗಿ ನಾಯಕರು ಯಡಿಯೂರಪ್ಪ ಪರ ಹೇಳಿಕೆ ನೀಡುತ್ತಿದ್ದಾರೆ. ಜೊತೆಗೆ ಮಠಾಧೀಶರೂ ಸಹ ಸಿಎಂ ಪರವಾಗಿಯೇ ಈಗ ನಿಂತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್, ಸಿಎಂ ಬಿಎಸ್‌ವೈ  ಜು.26ಕ್ಕೆ ಕರೆದಿದ್ದ ಶಾಸಕಾಂಗ ಸಭೆ ಹಾಗೂ ಭೋಜನಾಕೂಟ ರದ್ದು ಮಾಡಲು ಸೂಚಿಸಿದ್ಯಾ? ಇಲ್ಲವಾದಲ್ಲಿ ರದ್ದು ಮಾಡಲು ಕಾರಣವೇನು?  ಶಾಸಕಾಂಗ ಹಾಗೂ ಭೋಜನಾಕೂಟ ರದ್ದು ಮಾಡಿದ್ದರಿಂದ ನಾಯಕತ್ವ ಬದಲಾವಣೆ ಸಹ ಸದ್ಯಕ್ಕೆ ಇಲ್ವಾ ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೂರೈಸುತ್ತಿರುವ ಮಧ್ಯೆ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದು, ದಿನಕ್ಕೊಂಡು ಬೆಳವಣಿಗೆಗಳು ನಡೆಯುತ್ತಿವೆ. ಮುಂದೆ ಇದು ಯಾವ ಹಂತಕ್ಕೆ ತಲುಪುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

click me!