'ಬಿಜೆಪಿ ಅಧಿಕಾರಕ್ಕೆ ತರಲು ವಿಜಯ ಸಂಕಲ್ಪ ಯಾತ್ರೆ'

By Kannadaprabha News  |  First Published Mar 12, 2023, 9:00 PM IST

ಮಾ.13ರ ಮಧ್ಯಾಹ್ನ 2 ಗಂಟೆಗೆ ರಥಯಾತ್ರೆಯೂ ವಿಜಯಪುರ ಜಿಲ್ಲೆಯಿಂದ ಬೀಳಗಿ ಮತಕ್ಷೇತ್ರದ ಮುಖಾಂತರ ಬಾಗಲಕೋಟೆ ಜಿಲ್ಲೆ ಪ್ರವೇಶಿಸಲಿದ್ದು, ಜಿಲ್ಲೆಯ 7 ವಿಧಾನಸಭೆ ಮತಕ್ಷೇತ್ರಗಳಲ್ಲಿ ರಥಯಾತ್ರೆಯೂ ಒಟ್ಟು 286 ಕಿಮೀ ಸಂಚರಿಸಲಿದೆ. 


ಬಾಗಲಕೋಟೆ(ಮಾ.12): ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಯ ಪಕ್ಷಿನೋಟವನ್ನು ರಾಜ್ಯದ ಜನತೆಯ ಮುಂದಿಟ್ಟು, ಬಿಜೆಪಿಯೇ ಭರವಸೆ ಎಂಬ ಘೋಷವಾಕ್ಯದೊಂದಿಗೆ ಭಾರತೀಯ ಜನತಾ ಪಾರ್ಟಿಯನ್ನು ರಾಜ್ಯದಲ್ಲಿ ಮತ್ತೆ ಅಧಿ​ಕಾರಕ್ಕೆ ತರಲು ರಾಜ್ಯಾದ್ಯಂತ ವಿಜಯ ಸಂಕಲ್ಪ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಘಟಕವು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಮಿಷನ್‌-ಶೇ.51 ಮತಗಳಿಕೆಯ ನಿರ್ದಿಷ್ಟ ಗುರಿಯೊಂದಿಗೆ ರಾಜ್ಯಾದ್ಯಂತ ಒಟ್ಟು 4 ರಥಗಳು, 31 ಜಿಲ್ಲೆಗಳಲ್ಲಿ 8 ಸಾವಿರ ಕಿಮೀ ಚಲಿಸಿ, 80ಕ್ಕೂ ಹೆಚ್ಚು ಸಾರ್ವಜನಿಕ ರಾರ‍ಯಲಿ ಮಾಡಿ, 4 ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಲಿದ್ದು, ಈ ರಥದಲ್ಲಿ 50ಕ್ಕೂ ಹೆಚ್ಚು ರಾಜ್ಯ ಹಾಗೂ ರಾಷ್ಟ್ರದ ವಿವಿಧ ನಾಯಕರುಗಳು ಪಾಲ್ಗೊಂಡು ವಿಜಯ ಸಂಕಲ್ಪವನ್ನು ಮಹಾಜನತೆಯ ಆಶೀರ್ವಾದದೊಂದಿಗೆ ಸಾಕ್ಷಿಕರಿಸುವ ನಿಟ್ಟಿನಲ್ಲಿ ಹೊರಟಿದ್ದಾರೆ ಎಂದು ವಿವರಿಸಿದರು.

Tap to resize

Latest Videos

undefined

ಬಿಜೆಪಿಗೆ ಅಧಿಕಾರ ಖಚಿತ, ಸಿದ್ದರಾಮಯ್ಯ ಹರಕೆಯ ಕುರಿ: ಸಚಿವ ಶ್ರೀರಾಮುಲು

ಜಿಲ್ಲೆಯಲ್ಲಿ ರಥಯಾತ್ರೆ:

ಮಾ.13ರ ಮಧ್ಯಾಹ್ನ 2 ಗಂಟೆಗೆ ರಥಯಾತ್ರೆಯೂ ವಿಜಯಪುರ ಜಿಲ್ಲೆಯಿಂದ ಬೀಳಗಿ ಮತಕ್ಷೇತ್ರದ ಮುಖಾಂತರ ಬಾಗಲಕೋಟೆ ಜಿಲ್ಲೆ ಪ್ರವೇಶಿಸಲಿದ್ದು, ಜಿಲ್ಲೆಯ 7 ವಿಧಾನಸಭೆ ಮತಕ್ಷೇತ್ರಗಳಲ್ಲಿ ರಥಯಾತ್ರೆಯೂ ಒಟ್ಟು 286 ಕಿಮೀ ಸಂಚರಿಸಲಿದೆ. ಬೀಳಗಿಯಲ್ಲಿ ರೋಡ್‌ ಶೋ ನಡೆಸಿ ನಂತರ ಗಲಗಲಿ ರೋಡ್‌ ಶೋ ನಡೆದು ಜಮಖಂಡಿ ಮತಕ್ಷೇತ್ರಕ್ಕೆ ಪ್ರಯಾಣಿಸಲಿದೆ. ಜಮಖಂಡಿಯಲ್ಲಿ ಸಂಜೆ 6 ಗಂಟೆಗೆ ನಗರದ ಫೋಲೋ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯನ್ನುದ್ಧೇಶಿಸಿ ಶಾಸಕರು ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಭಾಷಣ ಮಾಡಲಿದ್ದಾರೆ. ನಂತರ ರಥಯಾತ್ರೆಯೂ ಜಮಖಂಡಿಯಲ್ಲಿ ವಾಸ್ತವ್ಯ ಮಾಡಲಿದೆ. ಸಿ.ಟಿ.ರವಿ ಅವರು ಜಮಖಂಡಿ ಸಭೆಯ ನಂತರ ಮುಧೋಳ ಹಾಗೂ ತೇರದಾಳ ಮತಕ್ಷೇತ್ರದ ರಥಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು,

'ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆ ಶತಃಸಿದ್ಧ'

ಮಾ14ರ ಬೆಳಿಗ್ಗೆ 10 ಗಂಟೆಗೆ ರಥವೈ ತೇರದಾಳ ಮತಕ್ಷೇತ್ರದ ಬನಹಟ್ಟಿಯಿಂದ ಮಹಾಲಿಂಗಪೂರದವರೆಗೆ ರೋಡ್‌ ಶೋ ನಡೆಯಲಿದೆ. ನಂತರ ಮಧ್ಯಾಹ್ನ 2 ಗಂಟೆಗೆ ಮುಧೋಳ ಮತಕ್ಷೇತ್ರಕ್ಕೆ ಪ್ರವೇಶಿಸಿ, ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ-ಜಡಗಣ್ಣ, ಬಾಲಣ್ಣ ವೃತ್ತ-ಗಾಂಧಿ ವೃತ್ತ-ಶಿವಾಜಿ ವೃತ್ತ-ರನ್ನ ವೃತ್ತ ಮಾರ್ಗವಾಗಿ ರೋಡ್‌ ಶೋ ಲೋಕಾಪೂರದವರೆಗೆ ಜರುಗಲಿದೆ. ರೋಡ್‌ ಶೋ ಮಾರ್ಗ ಮಧ್ಯೆ ರಸ್ತೆಗಳಲ್ಲಿ ಸಾರ್ವಜನಿಕ ಸಭೆಗಳು ನಡೆಯಲಿವೆ. ನಂತರ ರಥಯಾತ್ರೆಯೂ ಬಾಗಲಕೋಟೆ ಮತಕ್ಷೇತ್ರಕ್ಕೆ ಆಗಮಿಸಿ ಸಂಜೆ 6 ಗಂಟೆಗೆ ನಗರದ ವಲ್ಲಭಬಾಯಿ ಚೌಕ್‌ದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಸಭೆಯನ್ನುದ್ದೇಶಿಸಿ ಕೇಂದ್ರದ ಸಚಿವರಾದ ಜನರಲ್‌ ವಿ.ಕೆ.ಸಿಂಗ್‌ ಅವರು ಹಾಗೂ ಕೇಂದ್ರ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂ​ಯಾರವರು ಭಾಷಣ ಮಾಡಲಿದ್ದಾರೆ. ರಥಯಾತ್ರೆಯೂ ಅಂದು ಬಾಗಲಕೋಟೆಯಲ್ಲಿ ವಾಸ್ತವ್ಯ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಾಜು ನಾಯ್ಕರ್‌, ಸತ್ಯನಾರಾಯಣ ಹೇಮಾದ್ರಿ, ಬಸವರಾಜ ಯಂಕಂಚಿ, ನಾಗಪ್ಪ ಅಂಬಿ, ಮೂದೆನೂರು ಉಪಸ್ಥಿತರಿದ್ದರು.

ರೋಣ ಮತಕ್ಷೇತ್ರಕ್ಕೆ ನಿರ್ಗಮನ

ಮಾ.15ರಂದು ರಥಯಾತ್ರೆಯೂ ಬೆಳಿಗ್ಗೆ 11ಕ್ಕೆ ಹುನಗುಂದ ಮತಕ್ಷೇತ್ರಕ್ಕೆ ಪ್ರವೇಶಿಸಿ-ಹುನಗುಂದದಿಂದ ಇಳಕಲ್‌ ಮಾರ್ಗವಾಗಿ-ಗುಡೂರದವರೆಗೆ ರೋಡ್‌ ಶೋ ನಡೆಯಲಿದೆ. ಅಲ್ಲಿಂದ ಬಾದಾಮಿ ಮತಕ್ಷೇತ್ರಕ್ಕೆ ಪಟ್ಟದಕಲ್ಲಿನ ಮುಖಾಂತರ ಮಧ್ಯಾಹ್ನ 3 ಗಂಟೆಗೆ ಪ್ರವೇಶಿಸಲಿದೆ. ಪಟ್ಟದಕಲ್ಲಿನಿಂದ-ಬಾದಾಮಿ ಮಾರ್ಗವಾಗಿ ಬೇಲೂರಿನವರೆಗೆ ರೋಡ್‌ ಶೋ ನಡೆಯಲಿದೆ. ನಂತರ ಬೇಲೂರಿನಿಂದ ರೋಣ ಮತಕ್ಷೇತ್ರಕ್ಕೆ ವಿಜಯ ಸಂಕಲ್ಪ ರಥಯಾತ್ರೆಯೂ ನಿರ್ಗಮಿಸಲಿದೆ ಎಂದು ಹೇಳಿದರು.

click me!