
ಆನೇಕಲ್ (ಮಾ.12) : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟಬಹುಮತದ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ನಡೆಸಿ ಇದೀಗ ಆನೇಕಲ್ ತಾಲೂಕಿಗೆ ಆಗಮಿಸಲಿರುವ ಹಿನ್ನೆಲೆ ಎಚ್‌ಡಿಕೆ(HD Kumaraswamy) ಸ್ವಾಗತಕ್ಕೆ ಸಿದ್ಧವಾಗಿ ಬೃಹತ್ ರಾಗಿಯ ಹಾರ.
ರಾಗಿಯ ಕಣಜ ಆನೇಕಲ್ ತಾಲೂಕಿನಲ್ಲಿ ಪಂಚರತ್ನ ರಥಯಾತ್ರೆ(Pancharatna rathayatre)ಸಮಾವೇಶ ನಡೆಯುವ ಹಿನ್ನೆಲೆ ಪ್ರೀತಿಯ ಕುಮಾರಣ್ಣ, ರೈತರ ಬಂಧುಗೆ ಚಂದಾಪುರದಲ್ಲಿ ರಾಗಿಯ ಬೃಹತ್ ಹಾರ ಸಿದ್ಧಪಡಿಸಲಾಗಿದೆ.
ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ ಎಚ್‌ಡಿ ಕುಮಾರಸ್ವಾಮಿಯವರ ಬಲ ಎಂದರೆ ಕಾರ್ಯಕರ್ತರು. ಎಚ್‌ಡಿ ಕುಮಾರಸ್ವಾಮಿಗೆ ಭವ್ಯ ಸ್ವಾಗತ ಕೋರಲು 40ಕ್ಕೂ ಹೆಚ್ಚು ಅಡಿ ಎತ್ತರದ ರಾಗಿಯ ಬೃಹತ್ ಹಾರ ಸಿದ್ಧಪಡಿಸಿದ್ದಾರೆ. ಪ್ಯಾಕೇಟ್ ಗಳಲ್ಲಿ ಜೋಡಣೆ ಮಾಡಿರುವ ರಾಗಿ ಹಾರ ಹಾಕಲು ಎರಡು ಕ್ರೈನ್ ಗಳೇ ಬೇಕು. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಮುಖಂಡರು ಹಾಗೂ ಕಾರ್ಯಕರ್ತರು. ಕಾರ್ಯಕ್ರಮ ಯಶಸ್ವಿಗೊಳಿಸಲು ಸಜ್ಜಾಗಿ ನಿಂತಿದ್ದಾರೆ.
HD Kumaraswamy: ಇಂದು ತೀರ್ಥಹಳ್ಳಿಗೆ ಎಚ್‌ಡಿಕೆ: ಹಸಿ ಅಡಕೆ ಬೃಹತ್ ಹಾರ, ಟೋಪಿ ರೆಡಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.