
ತಮಿಳುನಾಡಿನಲ್ಲಿ ದಳಪತಿಯ ಟಿವಿಕೆ ಪಾರ್ಟಿ ಸಿಂಗಲ್ ಲಾರ್ಜೆಸ್ಟ್ ಪಾರ್ಟಿ ಆಗಿ ಹೊರಹೊಮ್ಮಿದೆ. ಇದನ್ನ ಕಂಡು ವಿಜಯ್ ಫ್ಯಾನ್ಸ್ ವಿಜಯ್ ಸಿಎಂ ಆಗೇಬಿಟ್ರು ಅಂತ ಕುಣಿದಾಡಿದ್ರು. ಆದ್ರೆ ವಿಜಯ್ ರಾಜಕಾರಣಿ ಆಗಬೇಕು ಮೊದಲು ಕನಸು ಕಂಡವರು ದಳಪತಿಯ ಜನ್ಮದಾತ. ಆದ್ರೆ ಅಂದು ಅಪ್ಪನ ಆಸೆಯನ್ನೇ ದಿಕ್ಕರಿಸಿದ್ದ ವಿಜಯ್ ತಂದೆಯ ವಿರುದ್ಧವೇ ಕೇಸ್ ದಾಖಲಿಸಿದ್ರು. ಹಾಗಾದ್ರೆ ವಿಜಯ್ ಅಂದು ತಂದೆಯ ವಿರುದ್ಧವೇ ತಿರುಗಿ ಬಿದ್ದಿದ್ದೇಕೆ ನೋಡೋಣ ಬನ್ನಿ.
ದಳಪತಿ ವಿಜಯ್, ತಮಿಳುನಾಡು ರಾಜಕಾರಣ ಹೊಸ ಫೈಯರ್ ಬ್ರ್ಯಾಂಡ್. ಜಯಲಲಿತಾ, ಕರುಣಾನಿಧಿಯಂತಹ ದಿಗ್ಗಜರು ಕಟ್ಟಿದ್ದ ಪಕ್ಷಗಳ ಎದುರು ತೊಡೆ ತಟ್ಟಿ ಗೆದ್ದ ಗಟ್ಟಿಗ. ಇವತ್ತು ವಿಜಯ್ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ರಾಜಕೀಯ ರಂಗದಲ್ಲಿ ಕಹಳೆ ಊದುತ್ತಿದ್ದಾರೆ. ಆದ್ರೆ ವಿಜಯ್ಗೆ ಪೊಲಿಟಿಕ್ಸ್ನ ಹುಚ್ಚು ಹಿಡಿಸಿದ್ದೇ ಅವರ ತಂದೆ ಅನ್ನೋದು ನಿಮ್ಗೆ ಗೊತ್ತಾ? ಅದು ಸತ್ಯವೂ ಹೌದು.
ವಿಜಯ್ ತಂದೆ ಎಸ್.ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಕೂಡ. ಹೀಗಾಗಿ ತಮ್ಮ ಮಗ ವಿಜಯ್ ಸ್ಟಾರ್ ಆಗುವಲ್ಲಿ ಎಸ್ಎ ಚಂದ್ರಶೇಖರ್ ಪಾಲು ದೊಡ್ಡದಿದೆ. ಆರಂಭದ ದಿನಗಳಲ್ಲಿ ವಿಜಯ್ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡುವ ಜೊತೆಗೆ ಮಗನ ಸಿನಿಮಾಗಳ ಚಿತ್ರಕತೆ, ಶೂಟಿಂಗ್ ಎಲ್ಲಾ ಕೆಲಸ ನೋಡಿಕೊಂಡಿದ್ದು ಚಂದ್ರಶೇಖರ್. ಹಾಗೆ ಇವತ್ತು ವಿಜಯ್ ರಾಜಕೀಯ ಯಶಸ್ಸಿಗೆ ಕಾರಣವೂ ಅವರ ತಂದೆಯೇ. ಯಾಕಂದ್ರೆ ವಿಜಯ್ರನ್ನ ರಾಜಕಾರಣಿಯಾಗಿ ನೋಡೋ ಆಸೆ ಪಟ್ಟು, 2020ರಲ್ಲೇ ಮಗ ವಿಜಯ್ಗಾಗಿ ರಾಜಕೀಯ ಪಕ್ಷ ಕಟ್ಟಿದ್ರು ತಂದೆ ಚಂದ್ರಶೇಖರ್.
ವಿಜಯ್ ಇಂದಿನ ರಾಜಕೀಯ ಯಶಸ್ಸಿಗೆ ಒಂದು ಕಾರಣ ಅವರ ಅಭಿಮಾನಿ ಸಂಘ ‘ವಿಜಯ್ ಮಕ್ಕಳ್ ಇಯಕ್ಕಂ’ ಸ್ಥಾಪನೆ ಮತ್ತು ಆ ಸಂಘದಿಂದ ಆದ ಸಮಾಜಮುಖಿ ಕೆಲಸಗಳು. ಈ ಅಭಿಮಾನಿ ಸಂಘಕ್ಕೆ ಶಕ್ತಿಯಾಗಿ ನಿಂತಿದ್ದು ವಿಜಯ್ಅವರ ತಂದೆ ಎಸ್ಎ ಚಂದ್ರಶೇಖರ್.. ಕೊನೆಗೆ ವಿಜಯ್ ರಾಜಕೀಯಕ್ಕೆ ಬರಲಿ ಅನ್ನೋ ಅಭಿಮಾನಿಗಳ ಕೂಗು ಜೋರಾಗಿದ್ದಕ್ಕೆ 2020ರರಲ್ಲಿ ವಿಜಯ್ ತಂದೆ ಎಸ್ಎ ಚಂದ್ರಶೇಖರ್ ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ರು. ಅದರಲ್ಲಿ ಸ್ವತಃ ತಾವು ಹಾಗೂ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರು ಆಫೀಸ್ ಬೇರರ್ ಆಗಿದ್ರು.
ಯೆಸ್, ವಿಜಯ್ ತಂದೆಗೆ ಮಗ ದೊಡ್ಡ ರಾಜಕಾರಣಿ ಆಗಿ ಬೆಳೆಯಲಿ ಅನ್ನೋ ಆಸೆ. ಆದ್ರೆ ಮಗನ ಲಕ್ಷ್ಯ ಬೇರೆಯದ್ದೇ ಆಗಿತ್ತು. ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದ ವಿಜಯ್ ನೂರಾರು ಕೋಟಿ ದುಡಿಯಬೇಕು ಅಂತ ಅದರ ಹಿಂದೆ ಬಿದ್ದಿದ್ರು. ಹೀಗಾಗಿ ತನ್ನ ಪೋಷಕರು ಕಟ್ಟಿದ್ದ ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಪಕ್ಷಕ್ಕೂ ನನಗೂ ಸಂಬಂಧ ಇಲ್ಲ ಅಂತ ಪ್ರಕಟಣೆ ಕೊಟ್ಟಿದ್ದ ವಿಜಯ್ ಅಂದು ತನ್ನ ತಂದೆಯ ಆಸೆಗೆ ತಣ್ಣೀರೆರಚಿದ್ರು.
ಅಷ್ಟೆ ಅಲ್ಲ ವಿಜಯ್ ಅಪ್ಪ ಕಟ್ಟಿರೋ ಪಕ್ಷದಿಂದ ದೂರ ಉಳಿಯಲು ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ತಮ್ಮ ತಂದೆ ಪ್ರಾರಂಭಿಸಿರುವ ಪಕ್ಷವನ್ನು ರದ್ದು ಮಾಡಬೇಕು ಹಾಗೂ ಆ ಪಕ್ಷದಲ್ಲಿ ತಮ್ಮ ಹೆಸರು ಹಾಗೂ ಭಾವಚಿತ್ರವನ್ನು ಬಳಸಬಾರದೆಂದು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ರು.
ಅಂತೆಯೇ ನ್ಯಾಯಾಲಯ ಸಹ ವಿಜಯ್ ಪರವಾಗಿಯೇ ಆದೇಶ ನೀಡಿತ್ತು. ಬಳಿಕ ಎಸ್ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅಪಿಢವಿಟ್ ಸಲ್ಲಿಸಿ, ಪಕ್ಷಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಚಿತ್ರ, ಹೆಸರು ಬಳಸುವುದಿಲ್ಲ ಎಂದಿದ್ರು. ಕೊನೆಗೆ ಈ ಪ್ರಕರಣ ಬಗೆ ಹರಿದ ಮರು ವರ್ಷವೇ ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಪಕ್ಷವನ್ನು ರದ್ದಾಯ್ತು.
ವಿಜಯ್ ಮೊದಲಿನಿಂದಲೂ ಬಹಿರಂಗವಾಗಿ ಮಾತನಾಡಿದವರಲ್ಲ. ಆದ್ರೆ ಅವರ ತಂದೆ ಮಗನ ಪರವಾಗಿ ಎಲ್ಲಾ ಸಮಸ್ಯೆಗಳಿದ್ದಾಗ್ಲು ಪರಿಹಾರ ಹುಡುಕಿದವರು. ವಿಜಯ್ ರಾಜಕೀಯಕ್ಕೆ ಬರಬೇಕೆಂಬುದು ತಂದೆಯ ಆಸೆಯಾಗಿತ್ತು. ಅದರಂತೆ ಈಗ ವಿಜಯ್ ಟಿವಿಕೆ ರಾಜಕೀಯ ಪಕ್ಷ ಕಟ್ಟಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಈಗ ವಿಜಯ್ ತಮಿಳುನಾಡು ಸಿಎಂ ಪಟ್ಟಕ್ಕೇರೋದೊಂದೇ ಭಾಕಿ ಇದೆ. ವಿಜಯ್ ಪೊಲಿಟಿಕ್ಸ್ ನೋಡಿ ದಳಙತಿ ಅಭಿಮಾನಿ ಕೋಟೆ ಜೊತೆ ಮನೆ ಮಂದಿಯೆಲ್ಲಾ ಸಂಭ್ರಮಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.