ಪಟ್ಟಕ್ಕೇರುವ ಮುನ್ನವೇ ದಳಪತಿ ಪ್ರಾಣಕ್ಕೆ ಕುತ್ತು? ಸರ್ಕಾರಿ ಬೆಂಗಾವಲು ಭದ್ರತೆ ಬಿಟ್ಟಿದ್ದೇಕೆ ಟಿವಿಕೆ ವಿಜಯ್?

Published : May 09, 2026, 04:24 PM IST
 vijay

ಸಾರಾಂಶ

ನಟ ದಳಪತಿ ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಂತೆ ಅವರ ಪ್ರಾಣಕ್ಕೆ ಬೆದರಿಕೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಡಿಜಿಪಿಗೆ ಪತ್ರ ಬರೆದಿದ್ದಾರೆ. ಆದರೆ, ತಾನು ಸರಳ ರಾಜಕಾರಣಿ ಎಂದು ಹೇಳಿಕೊಂಡಿರುವ ವಿಜಯ್, ತಮಗೆ ನೀಡಲಾಗಿದ್ದ ಹೆಚ್ಚುವರಿ ಭದ್ರತೆಯನ್ನು ನಿರಾಕರಿಸಿದ್ದಾರೆ. ಈ ಬೆಳವಣಿಗೆಯು ತಮಿಳುನಾಡು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ದಳಪತಿ ವಿಜಯ್​​ ತಮಿಳುನಾಡು ಪಟ್ಟಾಭಿಶೇಷಕಕ್ಕೆ ಹೊಸ ಬಟ್ಟೆ ಸಿದ್ಧಮಾಡ್ಕೊಂಡು ಕಾಯ್ತಾ ಇದ್ದಾರೆ. ಆದ್ರೆ ಅದ್ಯಾವ ಗ್ರಹಚಾರವೋ ಏನೋ..? ವಿಜಯ್​ ಕನಸು ಇನ್ನು ನನಸಾಗಿಲ್ಲ. ಅಷ್ಟರಲ್ಲಾಗಲೇ ದಳಪತಿ ದೇಹಕ್ಕೆ ಕುತ್ತು ಬಂದೊದಗಿದೆ. ಹಾಗಾದ್ರೆ ಕಾಲಿವುಡ್ ಮಾಸ್ಟರ್ ವಿಜಯ್​​ಗಿರೋ ಆ ಕಂಠಕ ಏನು?

ಪಟ್ಟಾಭಿಷೇಕ ಮೊದಲೇ ದಳಪತಿ ಪ್ರಾಣಕ್ಕೆ ಬಂದಿದೆಯಾ ಆಪತ್ತು?

ತಮಿಳುನಾಡು ಈಗ ರಾಜಕೀಯ ರಣರಂಗ ಆಗಿದೆ. ಇಷ್ಟು ದಿನ ಎಲೆಕ್ಷನ್ ಗೆಲ್ಲೋಕೆ ಮೇಲಾಟ ಆಡುತ್ತಿದ್ದವರೆಲ್ಲಾ ಈಗ ಅಧಿಕಾರಕ್ಕೇರಲು ಚೆಲ್ಲಾಟವಾಡುತ್ತಿದ್ದಾರೆ. ಹೊಸ ಬಿಲ್ಲು ಬಾಣ ರೆಡಿ ಮಾಡ್ಕೊಂಡು ಯಾವಾಗ ಯಾರಿಗೆ ಬಿಡೋದು ಅಂತ ಕಾಯ್ತಾ ಇದ್ದಾರೆ. ಆದ್ರೆ ಆಗಿದ್ದಾಗ್ಲಿ ನಾನೇ ಸರ್ಕಾರ ರಚನೆ ಮಾಡುತ್ತೇನೆ ಅಂತ ವಿಜಯ್​ ಮುನ್ನುಗ್ಗಿದ್ದಾರೆ. ಅಷ್ಟರಲ್ಲಾಗಲೇ ದಳಪತಿ ಫ್ಯಾನ್ಸ್ ದಂಗಾಗೋ ವಿಷ್ಯವೊಂದು ಹೊರ ಜಗತ್ತಿಗೆ ಬಿಕರಿ ಆಗಿದೆ. ಅದೇ ವಿಜಯ್ ಪ್ರಾಣಕ್ಕೆ ಆಪತ್ತಿದೆ ಅನ್ನೋ ವಿಚಾರ.

ಹೌದು, ನಟ ವಿಜಯ್ ಈಗ ಟಿವಿಕೆ ಪಕ್ಷದ ಜನನಾಯಕ. ಜನ ಮೆಚ್ಚಿದ ರಾಜಕಾರಣಿ ಆಗಿರೋ ವಿಜಯ್​​ ಆ್ಯಕ್ಟರ್ ಆಗಿದ್ದಾಗ ಇಷ್ಟು ತ್ರಟ್ ಇತ್ತೋ ಇಲ್ಲವೋ ಗೊತ್ತಿಲ್ಲ. ಆದ್ರೆ ರಾಜಕಾರಣಿ ಆದ್ಮೇಲೆ ವಿಜಯ್ ಪ್ರಾಣಕ್ಕೇ ಕುತ್ತು ಬರುತ್ತೆ ಅನ್ನೋ ಮಾತುಗಳು ತಮಿಳು ನಾಡಿನಾಧ್ಯಂತೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಇದು ಗೊತ್ತಾಗಿದ್ದು ತಮಿಳು ನಾಡು ಕಾಂಗ್ರೇಸ್​​ ಮುಖಂಡ ಡಿಜಿಪಿಗೆ ಬರೆದ ಪತ್ರದಿಂದ.

ದಳಪತಿ ವಿಜಯ್​​ಗೆ ರಕ್ಷಣೆ ಕೊಡಿ. ಡಿಜಿಪಿಗೆ ಪತ್ರ ಬರೆದ ಕಾಂಗ್ರೇಸ್!

ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ಎಲ್ಲಾ ತಯಾರಿ ಮಾಡಿದ್ದಾರೆ. ಆದ್ರೆ 118 ಕಂಠಕ ವಿಜಯ್​​​​​​​ರನ್ನ ಕಾಡುತ್ತಿದೆ. ಆದರೆ .. ಇದೇ ಸಮಯದಲ್ಲಿ ವಿಜಯ್ ಪ್ರಾಣಕ್ಕೆ ಬೆದರಿಕೆ ಇದೆ ಅಂತ ಕಾಂಗ್ರೆಸ್ ಪಾಳಯಯಕ್ಕೆ ಕಾಡುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ತಮಿಳುನಾಡಿನ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿಜಯ್ ಪ್ರಾಣಕ್ಕೆ ಭಯ ಇದೆ ರಕ್ಷಣೆ ಕೊಡಿ ಎಂದು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ.

ನನಗೆ ಭದ್ರತೆ ಬೇಡ , ನಾನು ಸರಳ ರಾಜಕಾರಣಿ-ವಿಜಯ್

ದಳಪತಿ ವಿಜಯ್​ ಪ್ರಚಾರಕ್ಕೆ ಹೋದಾಗ ಸೆಕ್ಯೂರಿಟಿ ಹೆಚ್ಚಿಸಿಕೊಂಡಿದ್ರು. ವಿಜಯ್ ಅಕ್ಕ ಪಕ್ಕ 25 ಜನ ಸೆಕ್ಯೂರಿಟಿ ಗಾರ್ಡ್​​ಗಳಿದ್ರು. ವಿಜಯ್ ಎಲೆಕ್ಷನ್ ಗೆದ್ದ ಮೇಲೆ ಶಿಷ್ಟಾಚಾರದ ಪ್ರಕಾರ ಭದ್ರತೆ ಕೊಡಲಾಗಿತ್ತು. ಆದ್ರೆ ವಿಜಯ್ ಸ್ವಯಂ ಪ್ರೇರಿತವಾಗಿ ಭದ್ರತೆ ನಿರಾಕರಿಸಿದ್ದಾರೆ. ನಾಲ್ಕು ಬೆಂಗಾವಲು ವಾಹನ ಬೇಡ ಎಂದಿದ್ದಾರಂತೆ ವಿಜಯ್. ಹೀಗಾಗಿ ಪೊಲೀಸ್​ ಇಲಾಖೆ ಸೆಕ್ಯುರಿಟಿಯನ್ನ ಹಿಂಪಡೆಯಲಾಗಿದೆ.

ದಳಪತಿ ವಿಜಯ್ ತಮಿಳು ಸಿನಿಮಾ ಜನರ ಆರಾಧ್ಯ ದೈವ ಆಗಿದ್ದಾರೆ. ವಿಜಯ್​​ಗೆ ಕೋಟ್ಯಾನು ಕೋಟಿ ಅಭಿಮಾನಿ ಬಳಗ ಇದೆ. ಸೆಲೆಬ್ರಿಟಿ ಆಗಿರೋ ಕಾರಣ ವಿಜಯ್​​ರನ್ನ ಅಪ್ಪಿ ಮುದ್ದಾಡೋಕೆ ಮುನ್ನುಗ್ಗೋರು ಲಕ್ಷಾಂತರ ಜನ. ಆದ್ರೆ ವಿಜಯ್​​​ ಇನ್ನು ಸರ್ಕಾರ ರಚನೆ ಮಾಡಿಲ್ಲ. ಅದಾದ ನಂತರ ಭಧ್ರತೆ ಬಗ್ಗೆ ವಿಜಯ್​​​ ಹೇಳುತ್ತಾರೆ ಅಂತ ಟಿವಿಕೆ ಹೇಳಿಕೊಂಡಿದೆ. ಒಟ್ನಲ್ಲಿ ದಳಪತಿ ವಿಜಯ್ ಸರಳ ರಾಜಕಾರಣಿ ಅಂತ ತೋರಿಸಿಕೊಳ್ಳೋ ಮಾರ್ಗ ಹಿಡಿದಂತೆ ಕಾಣುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂತು ಇಂತು ನೆರವೇರಿತು ದಳಪತಿ ವಿಜಯ್​ ದೊಡ್ಡ ಆಸೆ! 118 ನಂಬರ್ ಗೇಮ್ ರಹಸ್ಯ ಭೇದಿಸಿದ್ದು ಹೇಗೆ ವಿಜಯ್?
ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!