3 ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಹೊರಟ್ಟಿ ಅವರು ತಮ್ಮ ನಾಲ್ಕು ದಶಕಗಳ ವಿಧಾನಪರಿಷತ್ ಸದಸ್ಯತ್ವದ ಅನುಭವ ಹಂಚಿಕೊಳ್ಳಲಿದ್ದಾರೆ.
ಹುಬ್ಬಳ್ಳಿ(ಜೂ.10): ‘ಪ್ರಜಾಪ್ರಭುತ್ವದಲ್ಲಿ ಶಾಸಕರ ಹಾಗೂ ಶಾಸನಸಭೆಯ ಮಹತ್ವ’ದ ಕುರಿತು ಜೂನ್ 15ರಿಂದ 17ರ ವರೆಗೆ ಮುಂಬೈನ ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೋವಲ್ಡ್‌ರ್ ಕನ್‌ವೆನ್‌ಶನ್ ಸೆಂಟರ್‌ನಲ್ಲಿ ಪ್ರಪ್ರಥಮ ರಾಷ್ಟ್ರೀಯ ಶಾಸಕರ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದ ವಿಶೇಷ ಪ್ರತಿನಿಧಿಯಾಗಿ ರಾಜ್ಯ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಲಿದ್ದಾರೆ. 3 ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಹೊರಟ್ಟಿ ಅವರು ತಮ್ಮ ನಾಲ್ಕು ದಶಕಗಳ ವಿಧಾನಪರಿಷತ್ ಸದಸ್ಯತ್ವದ ಅನುಭವ ಹಂಚಿಕೊಳ್ಳಲಿದ್ದಾರೆ.
ಹಿಂದಿನ ಹಾಗೂ ಪ್ರಸ್ತುತ ಶಾಸನಸಭೆಯ ಮಹತ್ವ, ಶಾಸಕರ ಕರ್ತವ್ಯ ಕುರಿತು ಬೆಳಕು ಚೆಲ್ಲಲಿದ್ದಾರೆ. ಮೇಲ್ಮನೆ ಹಾಗೂ ಕೆಳಮನೆಯ ಮಹತ್ವದ ಕುರಿತು ವಿಷಯ ಮಂಡಿಸಲಿದ್ದಾರೆ. ಸಮ್ಮೇಳನದಲ್ಲಿ ಹಿಂದಿನ ಹಾಗೂ ಈಗಿನ ಲೋಕಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಹಿರಿಯ ರಾಜಕೀಯ ವಿಶ್ಲೇಷಕರು, ಶಾಸಕರು, ವಿಶೇಷ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಧಾರವಾಡದಲ್ಲಿ ಮತ್ತೆ ಆರಂಭವಾಯ್ತಾ ಲವ್ ಜಿಹಾದ್: ಮದುವೆ ತಡೆ ಹಿಡಿದ ಬಜರಂಗದಳ ಕಾರ್ಯಕರ್ತರು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೊರಟ್ಟಿ, ದೇಶ ಒಗ್ಗೂಡಿಸಲು, ಒಂದಾಗಿಸಲು ಇಂತಹ ಸಮ್ಮೇಳನ ಅತ್ಯಂತ ಅವಶ್ಯ. ಭಾರತ ಇಡೀ ಜಗತ್ತಿಗೆ ಪ್ರಜಾಪ್ರಭುತ್ವದ ಮಹತ್ವ ಕುರಿತು ಉತ್ತಮ ಸಂದೇಶ ಕೊಡಲು ಈ ರಾಷ್ಟ್ರೀಯ ಶಾಸಕರ ಸಮ್ಮೇಳನ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.